Asianet Suvarna News Asianet Suvarna News

ಮೊದಲ ಬಾರಿ ನೀಲ್ಗಾಯ್‌ ಬೇಟೆಯಾಡಿದ ಚೀತಾ

ನಮೀಬಿಯಾದಿಂದ ಭಾರತಕ್ಕೆ ತಂದ ಚೀತಾಗಳು ಇದೇ ಮೊದಲ ಬಾರಿ ನೀಲ್‌ಗಾಯ್‌ ಅನ್ನು ಬೇಟೆಯಾಡಿವೆ. ಈ ಮೂಲಕ ಭಾರತದಲ್ಲಿ ಈವರೆಗೆ ಕೇವಲ ಜಿಂಕೆಗಳನ್ನಷ್ಟೇ ಬೇಟೆಯಾಡುತ್ತಿದ್ದ ಚೀತಾಗಳುಾ, ಈಗ ಇತರೆ ಪ್ರಾಣಿಗಳನ್ನು ಬೇಟೆಯಾಡುವ ಶಕ್ತಿ ಕೂಡ ಬೆಳೆಸಿಕೊಂಡಿವೆ.

Nilgai hunted cheetah for the first time akb
Author
First Published Dec 4, 2022, 11:43 AM IST

ಕುನೋ: ನಮೀಬಿಯಾದಿಂದ ಭಾರತಕ್ಕೆ ತಂದ ಚೀತಾಗಳು ಇದೇ ಮೊದಲ ಬಾರಿ ನೀಲ್‌ಗಾಯ್‌ ಅನ್ನು ಬೇಟೆಯಾಡಿವೆ. ಈ ಮೂಲಕ ಭಾರತದಲ್ಲಿ ಈವರೆಗೆ ಕೇವಲ ಜಿಂಕೆಗಳನ್ನಷ್ಟೇ ಬೇಟೆಯಾಡುತ್ತಿದ್ದ ಚೀತಾಗಳುಾ, ಈಗ ಇತರೆ ಪ್ರಾಣಿಗಳನ್ನು ಬೇಟೆಯಾಡುವ ಶಕ್ತಿ ಕೂಡ ಬೆಳೆಸಿಕೊಂಡಿವೆ. ಇದು ಭಾರತದ ಪರಿಸರಕ್ಕೆ ಹೊಂದಿಕೊಳ್ಳುತ್ತಿರುವ ಸಂಕೇತವಾಗಿದೆ ಎನ್ನಲಾಗಿದೆ.

ಆಶಾ ಎಂಬ ಚೀತಾ (cheetah) ಕುನೊ ರಾಷ್ಟ್ರೀಯ ಉದ್ಯಾನದ (Kuno National Park) ಅರಣ್ಯದಲ್ಲಿ ಸುಮಾರು 25-30 ಕೇಜಿಯಷ್ಟಿದ್ದ ನೀಲ್‌ಗಾಯ್‌ ಕರುವನ್ನು (nilgai calf) ಬೇಟೆಯಾಡುವಲ್ಲಿ ಯಶಸ್ವಿಯಾಗಿದೆ ಎಂದು ಮಧ್ಯಪ್ರದೇಶದ ಅರಣ್ಯಾಧಿಕಾರಿಗಳು ಹೇಳಿದ್ದಾರೆ. ಇದರೊಂದಿಗೆ ಚೀತಾಗಳು ಕ್ವಾರೆಂಟೈನ್‌ನಲ್ಲಿದ್ದ ಚೀತಾಗಳು ಅರಣ್ಯಕ್ಕೆ ಬಿಟ್ಟಾಗ ಬೇಟೆಯಾಡುವ ಸಾಮರ್ಥ್ಯವನ್ನು ಹೊಂದಿರುತ್ತವೋ ಇಲ್ಲವೋ ಎಂಬ ಶಂಕೆ ದೂರವಾದಂತಾಗಿದೆ. ಈಗಾಗಲೇ 8 ಚೀತಾಗಳು ಕ್ವಾರಂಟೈನ್‌ ಕೇಂದ್ರದಿಂದ ಕಿರು ಅರಣ್ಯಕ್ಕೆ ಸ್ಥಳಾಂತರಗೊಂಡಿವೆ. ಮುಂದಿನ ದಿನಗಳಲ್ಲಿ ಇವನ್ನು ಇನ್ನೂ ವಿಶಾಲ ಕಾಡಿಗೆ ಬಿಡಲಾಗುತ್ತದೆ.

ನಮೀಬಿಯಾದಿಂದ ತಂದಿದ್ದ ಚೀತಾ ‘ಆಶಾ’ಗೆ ಗರ್ಭಪಾತ
ಭಾರತದಲ್ಲಿ ನಮೀಬಿಯಾ ಚೀತಾಗಳಿಂದ ಮೊದಲ ಬೇಟೆ

ಕುನೋ ಉದ್ಯಾನಕ್ಕೆ ಹೊಂದಿಕೊಂಡ ಚೀತಾಗಳು: ವಿಡಿಯೋ ಟ್ವಿಟ್ ಮಾಡಿದ ಮೋದಿ

Follow Us:
Download App:
  • android
  • ios