ಬಗೆದಷ್ಟು ಬಯಲಾಗ್ತಿದೆ ದುಷ್ಕರ್ಮಿಗಳ ನಿಗೂಢ ಹೆಜ್ಜೆ: ಬೆಂಗಳೂರು ಮಾತ್ರ ಶಂಕಿತ ಉಗ್ರರ ಟಾರ್ಗೆಟ್‌ ಆಗಿತ್ತಾ..?

ಸಿಸಿಬಿ ಪೊಲೀಸರು ಐವರು ಶಂಕಿತ ಉಗ್ರರ ಮೊಬೈಲ್‌ ಫೋನ್‌ಗಳನ್ನು ಎಫ್‌ಎಸ್‌ಎಲ್‌ಗೆ ರವಾನೆ ಮಾಡಿದ್ದಾರೆ.
 

Share this Video
  • FB
  • Linkdin
  • Whatsapp

ಬೆಂಗಳೂರು: ಸಿಲಿಕಾನ್‌ ಸಿಟಿಯಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದ ಐವರು ಶಂಕಿತ ಉಗ್ರರನ್ನು(Suspected Terrorists) ಸಿಸಿಬಿ ಪೊಲೀಸರು(CCB Police) ಬಂಧಿಸಿದ್ದಾರೆ. ಸದ್ಯ ಬಗೆದಷ್ಟು ಬಯಲಾಗ್ತಿದೆ ದುಷ್ಕರ್ಮಿಗಳ ನಿಗೂಢ ಹೆಜ್ಜೆ. ಸಿಸಿಬಿ ಪೊಲೀಸರು ಶಂಕಿತ ಉಗ್ರರ ತನಿಖೆ ಚುರುಕು ಮಾಡಿದ್ದಾರೆ. ಐವರು ಶಂಕಿತ ಉಗ್ರರ ಮೊಬೈಲ್‌ ಫೋನ್‌ಗಳನ್ನು(Mobile phones) ಎಫ್ಎಸ್‌ಎಲ್‌ಗೆ ರವಾನೆ ಮಾಡಲಾಗಿದೆ. ಈ ಮೂಲಕ ಶಂಕಿತ ಉಗ್ರರು ಬಾಯಿಬಿಡದ ಸತ್ಯವನ್ನು ಮೊಬೈಲ್‌ ಮೂಲಕ ಹೊರ ತೆಗೆಯಲು ಪ್ಲ್ಯಾನ್‌ ಮಾಡಲಾಗಿದೆ. ಬೆಂಗಳೂರು(Bengaluru) ಒಂದೇ ಇವರ ಟಾರ್ಗೆಟ್‌ ಆಗಿತ್ತಾ? ಅಥವಾ ರಾಜಕೀಯ ನಾಯಕರನ್ನು ಇವರು ಟಾರ್ಗೆಟ್‌ ಮಾಡಿದ್ರಾ..? ಎಂಬ ಹಲವಾರು ಪ್ರಶ್ನೆಗಳು ಪೊಲೀಸರನ್ನು ಕಾಡುತ್ತಿವೆ.

ಇದನ್ನೂ ವೀಕ್ಷಿಸಿ: ರಾಜ್ಯದ ಜನತೆಗೆ ಮತ್ತೊಂದು ಶಾಕ್‌: ಏರಿಕೆಯಾಗುತ್ತಾ ಹಾಲಿನ ದರ..?

Related Video