ದೇವರಾಜ್‌ ಅರಸ್‌ ಟ್ರಕ್‌ ಟರ್ಮಿನಲ್‌ ಹಗರಣ: ಮಾಜಿ ಅಧ್ಯಕ್ಷ ಡಿಎಸ್‌ ವೀರಯ್ಯ ಬಂಧನ, ಪ್ರಕರಣ ಸಿಐಡಿಗೆ ವರ್ಗಾವಣೆ

ಹಗರಣದ ಬಗ್ಗೆ FIR ದಾಖಲಿಸಿದ್ದ ಹಾಲಿ ಎಂಡಿ ಶಿವಪ್ರಕಾಶ್
ಸುವರ್ಣನ್ಯೂಸ್ ವರದಿ ಬಳಿಕ ಪ್ರಕರಣ ಸಿಐಡಿಗೆ ವರ್ಗಾವಣೆ 
ಇತ್ತೀಚಿಗೆ ಟ್ರಕ್ ಟರ್ಮಿನಲ್ ಮಾಜಿ ಎಂಡಿ ಶಂಕರಪ್ಪ ಅರೆಸ್ಟ್

First Published Jul 13, 2024, 11:06 AM IST | Last Updated Jul 13, 2024, 11:06 AM IST

ಏಷ್ಯಾನೆಟ್‌ ಸುವರ್ಣನ್ಯೂಸ್ ಬಯಲಿಗೆಳೆದಿದ್ದ ಹಗರಣದಲ್ಲಿ ಸಿಐಡಿ(CID) ಮಹಾಬೇಟೆ ನಡೆಸಿದೆ. ರಾಜ್ಯದ ವಿವಿಧೆಡೆ ದೇವರಾಜ್ ಅರಸ್ ಟ್ರಕ್ ಟರ್ಮಿನಲ್ ಹಗರಣ (Devaraj Aras Truck Terminal scam ) ನಡೆದಿದ್ದು, ಅರಸ್ ಟ್ರಕ್ ಟರ್ಮಿನಲ್ ಮಾಜಿ ಅಧ್ಯಕ್ಷ ಡಿ.ಎಸ್‌. ವೀರಯ್ಯ(D.S. Veeriah) ಬಂಧನವಾಗಿದೆ. 2022ರಲ್ಲಿ ಏಷ್ಯಾನೆಟ್‌ ಸುವರ್ಣ ನ್ಯೂಸ್ 47 ಕೋಟಿ ಅಕ್ರಮವನ್ನು ಬಯಲಿಗೆಳೆದಿತ್ತು. ಟರ್ಮಿನಲ್ ಕಾಮಗಾರಿ ಮಾಡದೇ ನಕಲಿ ಬಿಲ್ ಸೃಷ್ಟಿಸಿದ್ದ ಆರೋಪ ಕೇಳಿಬಂದಿದೆ. ಬರೋಬ್ಬರಿ 47 ಕೋಟಿ ರೂಪಾಯಿ ಹಣ ಲೂಟಿಯಾಗಿದ್ದ ಪ್ರಕರಣ ಇದಾಗಿದೆ. ಹಗರಣದ ಸಂಪೂರ್ಣ ವರದಿ ಪ್ರಸಾರವನ್ನು ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಮಾಡಿತ್ತು. 2021 ರಿಂದ 2022ರ ಅವಧಿಯಲ್ಲಿ ನಡೆದಿದ್ದ 47 ಕೋಟಿ ಅಕ್ರಮ ಇದಾಗಿದೆ. ಟರ್ಮಿನಲ್‌ಗಳಲ್ಲಿ ನೂರಾರು ಕಾಮಗಾರಿ ಮಾಡಲು ಹಣ ರಿಲೀಸ್ ಮಾಡಲಾಗಿದೆ. ಹಣ ಲೂಟಿ ಮಾಡಲು 802 ನಕಲಿ ಫೈಲ್ ಸೃಷ್ಟಿಸಿದ್ದ ಆರೋಪ ಕೇಳಿಬಂದಿದೆ. ಕಾಮಗಾರಿ ಮಾಡದೇ ನಕಲಿ ಬಿಲ್ ಸೃಷ್ಟಿಸಿ ಹಣ ಬಿಡುಗಡೆ ಮಾಡಿದ ಆರೋಪ ಕೇಳಿಬಂದಿದೆ. ಡಿವೈಎಸ್‌ಪಿ ಉದಯ್ ಭಾಸ್ಕರ್ ನೇತೃತ್ವದಲ್ಲಿ ವೀರಯ್ಯ ಅರೆಸ್ಟ್ ಮಾಡಲಾಗಿದೆ. ಮೂಡಾ ಪ್ರತಿಭಟನೆ ವೇಳೆ ಭಾಗವಹಿಸಿದ್ದ ಡಿಎಸ್ ವೀರಯ್ಯ.

ಇದನ್ನೂ ವೀಕ್ಷಿಸಿ:  ನನ್ನದೇನು ತಪ್ಪಿಲ್ಲ, ನನಗೆ 24 ಗಂಟೆಗೊಮ್ಮೆ ಮೆಡಿಕಲ್ ಚೆಕಪ್ ಅಗತ್ಯವಿದೆ: ಜಡ್ಜ್‌ ಮುಂದೆ ನಾಗೇಂದ್ರ ಮನವಿ