ಗೋಬಿ ತಿನ್ಲಿಲ್ಲ ಅಂತಾ ಲಟ್ಟಣಿಗೆಯಲ್ಲಿ ಅಜ್ಜಿಗೆ ಕೊಟ್ಟ ಏಟು, 6 ವರ್ಷದ ನಂತ್ರ ಮೊಮ್ಮಗನಿಗೆ ತೆರೆದ ಜೈಲು ಗೇಟು!

ತಾನು ತಂದಿದ್ದ ಗೋಬಿ ಮಂಚೂರಿಯನ್ನ ತಿನ್ಲಿಲ್ಲ ಅನ್ನೋ ಕಾರಣಕ್ಕೆ ಮೊಮ್ಮಗ, ಅಜ್ಜಿಯ ತಲೆಗೆ ಲಟ್ಟಣಿಗೆಯಲ್ಲಿ ಎರಡು ಬಾರಿಸಿದ್ದ. ಆದರೆ, ಆತನ ದುರಾದೃಷ್ಟಕ್ಕೆ ಅಜ್ಜಿ ಅಲ್ಲೇ ಕೊನೆಯುಸಿರೆಳೆದಿದ್ದಳು. ಆದರೆ, ಪ್ರಕರಣ ನಡೆದ ಆರು ವರ್ಷದ ಬಳಿಕ ಆರೋಪಿ ಮೊಮ್ಮಗ ಹಾಗೂ ಆಕೆಯ ಮಗಳನ್ನು ಪೊಲೀಸರು ಜೈಲಿಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.
 

First Published Oct 8, 2022, 4:36 PM IST | Last Updated Oct 8, 2022, 4:37 PM IST

ಬೆಂಗಳೂರು (ಅ.8):  ಇದೊಂದು ಪಕ್ಕಾ ಕ್ರೈಂ ಥ್ರಿಲ್ಲರ್​​ ಸ್ಟೋರಿ. ಆತ ವಿದ್ಯಾವಂತ ಆದರೆ, ಕೋಪದ ಕೈಗೆ ಬುದ್ಧಿ ಕೊಟ್ಟು ತನ್ನ ಲೈಫನ್ನೇ ಹಾಳುಮಾಡಿಕೊಂಡ. ತನ್ನ ಅಜ್ಜಿಗೆ ಪ್ರೀತಿಯಿಂದ ಗೋಬಿ ಮಂಚೂರಿ ತಿನ್ನಿಸಲು ಹೋದ. ಆದರೆ, ಅಜ್ಜಿ ಬೇಡ ಅಂದ್ಳು. ಅಷ್ಟೇ ಅಕೆಯ ಕಥೆಯನ್ನೇ ಮೊಮ್ಮಗ ಮುಗಿಸಿ ಬಿಟ್ಟಿದ್ದ.

ಆದರೆ, ಅಜ್ಜಿಯನ್ನ ಕೊಂದು ನಂತರ ಎಸ್ಕೇಪ್​​ ಆಗಲು ತನ್ನ ಬುದ್ಧಿಯನ್ನೆಲ್ಲಾ ಖರ್ಚು ಮಾಡಿದ್ದ. ತನ್ನ ಹೆತ್ತ ತಾಯಿಯ ಜೊತೆ ಸೇರಿ ಅಜ್ಜಿಯ ಮೃತದೇಹವನ್ನ ಯಾರಿಗೂ ಗೊತ್ತಾಗದ ಹಾಗೆ ಮನೆಯ ವಾಡ್ರೋಬ್​​​​​​ನಲ್ಲೇ ಬಚ್ಚಿಟ್ಟು, ಭೂಗತನಾಗಿಬಿಟ್ಟ. 6 ವರ್ಷಗಳ ಕಾಲ ಆತನನ್ನ ಪೊಲೀಸರು ಹುಡಕದೇ ಇರೋ ಜಾಗವೇ ಇರಲಿಲ್ಲ. ಆದರೆ, ಈಗ ಆ ಕತರ್ನಾಕ್​​​ ಆಸಾಮಿ ತಗ್ಲಾಕೊಂಡಿದ್ದಾನೆ. 

ಗೋಬಿ ಮಂಚೂರಿಗಾಗಿ ನಡೆಯಿತೇ ಅಜ್ಜಿಯ ಕೊಲೆ ? ಕೆಂಗೇರಿ ಸ್ಯಾಟಲೈಟ್ ಬಡಾವಣೆಯಲ್ಲಿ ನಡೆದ ಹತ್ಯೆಗೆ ಹೊಸ ಟ್ವಿಸ್ಟ್

ಸಂಜಯ್​​ ಮತ್ತು ಶಶಿಕಲಾ ಅಜ್ಜಿಯನ್ನ ಕೊಂದು ಕಪಾಟಿನಲ್ಲಿ ಮುಚ್ಚಿ ಎಸ್ಕೇಪ್​ ಆಗಿರ್ತಾರೆ. ಈ ಘಟನೆ ನಡೆದು 6 ವರ್ಷಗಳೇ ಕಳೆದುಹೋಗಿದೆ. ಅವತ್ತು ತಲೆಮರೆಸಿಕೊಂಡಿದ್ದ ಸಂಜಯ್​​ ಮತ್ತು ಶಶಿಕಲಾ ಆಫ್ಟರ್​​ ಲಾಂಗ್​​ ಟೈಂ ಪೊಲೀಸರಿಗೆ ತಗ್ಲಾಕೊಂಡಿದ್ದಾರೆ. ಕೆಂಗೇರಿ ಪೊಲೀಸರು ಕೊನೆಗೂ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.