ನನಗೂ ಅಂತರ್ಜಾತಿ ವಿವಾಹವಾಗುವ ಆಸೆ ಇತ್ತು: ತಮ್ಮ ಪ್ರೇಮಾಂಕುರದ ಕಹಾನಿ ಬಿಚ್ಚಿಟ್ಟ ಸಿದ್ದರಾಮಯ್ಯ

ಅಂತರ್ಜಾತಿ ವಿವಾಹಕ್ಕೆ ಸಿಎಂ ಸಿದ್ದರಾಮಯ್ಯ ಪ್ರೋತ್ಸಾಹ
ತಮ್ಮ ಪ್ರೇಮಾಂಕುರದ ಕಹಾನಿ ಬಿಚ್ಚಿಟ್ಟ ಸಿದ್ದರಾಮಯ್ಯ
ಅಂತರ್ಜಾತಿ ವಿವಾಹ ನೋಂದಣಿ ವೇದಿಕೆಯಲ್ಲಿ ಸಿಎಂ ಮಾತು 
 

First Published May 24, 2024, 9:18 AM IST | Last Updated May 24, 2024, 9:18 AM IST

ನನಗೂ ಅಂತರ್ಜಾತಿ ವಿವಾಹವಾಗುವ ಆಸೆ ಇತ್ತು ಎಂದು ಹೇಳುವ ಮೂಲಕ ಸಿಎಂ ಸಿದ್ದರಾಮಯ್ಯ(Siddaramaiah) ತಮ್ಮ ಪ್ರೇಮಾಂಕುರದ ಕಹಾನಿಯನ್ನು ಮೈಸೂರಿನಲ್ಲಿ(Mysore) ಬಿಚ್ಚಿಟ್ಟಿದ್ದಾರೆ. ಅಂತರ್ಜಾತಿ ವಿವಾಹ ನೋಂದಣಿ ವೇದಿಕೆಯಲ್ಲಿ ಸಿಎಂ ತಮ್ಮ ಪ್ರೀತಿ ಕಥೆಯನ್ನು(Love Story) ಹೇಳಿದ್ದಾರೆ. ಅಲ್ಲದೇ ಅಂತರ್ಜಾತಿ ವಿವಾಹಕ್ಕೆ(Inter caste marriage) ಸಿಎಂ ಸಿದ್ದರಾಮಯ್ಯ ಪ್ರೋತ್ಸಾಹವನ್ನು ನೀಡಿದ್ದಾರೆ. ಅಂತರ್ಜಾತಿ ವಿವಾಹಗಳಿಂದ ಜಾತಿ ನಾಶ ಸಾಧ್ಯ ಎಂದು ಜನ ಸ್ಪಂದನ ಮತ್ತು ಮಾನವ ಮಂಟಪ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹೇಳಿದ್ದಾರೆ. ನನಗೂ ಅಂತರ್ಜಾತಿ ವಿವಾಹವಾಗುವ ಆಸೆ ಇತ್ತು. ಕಾನೂನು ಓದುವಾಗ ಬೇರೆ ಜಾತಿಯ ಹುಡುಗಿ ಪ್ರೀತಿಸಿದೆ. ಬೇರೆ ಜಾತಿಯ ಸ್ನೇಹಿತೆಯನ್ನ ಮದುವೆ ಆಗಬೇಕೆಂದುಕೊಂಡಿದ್ದೆ. ಆದರೆ ಆ ಹುಡುಗಿಯೂ ಒಪ್ಪಲಿಲ್ಲ, ಮನೆಯವರೂ ಒಪ್ಪಲಿಲ್ಲ. ಹಾಗಾಗಿ ನಮ್ಮ ಜನಾಂಗದ ಹುಡುಗಿಯನ್ನೇ ಮದುವೆ ಆಗಬೇಕಾಯಿತು ಎಂದು ಸಿಎಂ ತಮ್ಮ ಕಾಲೇಜು ದಿನದ ಪ್ರೀತಿ ವಿಚಾರವನ್ನು ನೆನಪು ಮಾಡಿಕೊಂಡರು.

ಇದನ್ನೂ ವೀಕ್ಷಿಸಿ:  ಚಿಕ್ಕೋಡಿಯಲ್ಲಿ ಸಿಡಿಲು ಬಡಿದು ಇಬ್ಬರು ಸಾವು..ಒಬ್ಬ ವ್ಯಕ್ತಿ, ಓರ್ವ ಮಹಿಳೆ ಬಲಿ

Video Top Stories