ವಾಲ್ಮೀಕಿ ನಿಗಮ ಹಣ ದುರ್ಬಳಕೆ ಪ್ರಕರಣ: ಸಿಐಡಿಯಿಂದಲೇ ನಡೆದಿದ್ಯಾ ರಾಜ್ಯ ಸರ್ಕಾರದ ರಕ್ಷಣೆಗೆ ಯತ್ನ ?
ರಾಜ್ಯವನ್ನ ಆಳುತ್ತಿರುವ ಸರ್ಕಾರದ ರಕ್ಷಣೆಗೆ ನಿಂತಿದ್ದಾರೆ ಸಿಐಡಿ ಅಧಿಕಾರಿಗಳು..?
ರಾಜ್ಯ ಸರ್ಕಾರಕ್ಕೆ ಅನುಕೂಲಕರವಾದ ವರದಿ ನೀಡಲು ಮುಂದಾಗಿದೆ ಸಿಐಡಿ..?
ಪೊಲೀಸ್ ಕಸ್ಟಡಿ ಮುಗಿಸಿ ಕೋರ್ಟ್‌ಗೆ ಹಾಜರು ಪಡಿಸಿದಾಗ ಆರೋಪಿ13 ಆರೋಪ
ವಾಲ್ಮೀಕಿ ನಿಗಮದಲ್ಲಿ 187 ಕೋಟಿ ರೂ. ದುರ್ಬಳಕೆ ಪ್ರಕರಣಕ್ಕೆ(Valmiki Development Corporation Scam) ಸಂಬಂಧಿಸಿದಂತೆ ಸಿಐಡಿಯಿಂದಲೇ ರಾಜ್ಯ ಸರ್ಕಾರದ(state government) ರಕ್ಷಣೆಗೆ ಯತ್ನ ನಡೆದಿದೆ ಎಂಬ ಅನುಮಾನ ಮೂಡಿದೆ. ಹಗರಣದಲ್ಲಿ ಬಂಧಿತ ಆರೋಪಿಯಿಂದ ಕೋರ್ಟ್‌ನಲ್ಲಿ ಈ ಬಗ್ಗೆ ಗಂಭೀರ ಆರೋಪ ಮಾಡಲಾಗಿದೆ. ರಾಜ್ಯ ಸರ್ಕಾರದ ಸೂಚನೆಯಂತೆ ಸಿಐಡಿ(CID) ಕೆಲಸ ಮಾಡುತ್ತಿದೆ ಎಂದು ಆರೋಪ ಮಾಡಲಾಗಿದೆ. ಈ ಪ್ರಕರಣದ 13ನೇ ಆರೋಪಿ ಸತ್ಯನಾರಾಯಣ್ ವರ್ಮಾನಿಂದ ಗಂಭೀರ ಆರೋಪ ಮಾಡಲಾಗಿದೆ. ಕೋರ್ಟ್‌ಗೆ ಮನವಿ ಪತ್ರ ಸಲ್ಲಿಕೆ ಮಾಡುವ ಮೂಲಕ ಸಿಐಡಿ ಮೇಲೆ ಆರೋಪ ಮಾಡಲಾಗಿದೆ. 3ನೇ ಎಸಿಎಂಎಂ ಕೋರ್ಟ್‌ಗೆ ಮನವಿ ಪತ್ರವನ್ನು ಸತ್ಯನಾರಾಯಣ್ ವರ್ಮಾ ಸಲ್ಲಿಸಿದ್ದಾರೆ. ನಿಜವಾದ ಆರೋಪಿಗಳನ್ನ ರಕ್ಷಣೆ ಮಾಡುವ ಕೆಲಸ ಸಿಐಡಿ ಮಾಡುತ್ತಿದೆ. ಮೃತ ಚಂದ್ರಶೇಖರ್ ಆರೋಪ ಮಾಡಿದರೂ ನಿಜವಾದ ಆರೋಪಿಗಳ ರಕ್ಷಣೆಯಾಗುತ್ತಿದೆ. ಈವರೆಗೆ ಮಾಜಿ ಸಚಿವ ನಾಗೇಂದ್ರ ವಿಚಾರಣೆಯನ್ನು ಸಿಐಡಿ ಅಧಿಕಾರಿಗಳು ಮಾಡಿಲ್ಲ ಎಂದು ಆರೋಪ ಮಾಡಲಾಗಿದೆ.
ಇದನ್ನೂ ವೀಕ್ಷಿಸಿ: ಮದುವೆಯಾದ ನಟರೊಂದಿಗೆ ಪ್ರೀತಿಲಿ ಬಿದ್ದಿದ್ದು ಯಾರೆಲ್ಲಾ? ದರ್ಶನ್ ನಿಖಿತಾ ಬಗ್ಗೆ ಹಬ್ಬಿತ್ತು ಪ್ರೇಮದ ಕಥೆಗಳು !