Asianet Suvarna News Asianet Suvarna News

ಮದುವೆಯಾದ ನಟರೊಂದಿಗೆ ಪ್ರೀತಿಲಿ ಬಿದ್ದಿದ್ದು ಯಾರೆಲ್ಲಾ? ದರ್ಶನ್ ನಿಖಿತಾ ಬಗ್ಗೆ ಹಬ್ಬಿತ್ತು ಪ್ರೇಮದ ಕಥೆಗಳು !

ಬಣ್ಣದ ಜಗತ್ತಲ್ಲಿ ನಟ-ನಟಿಯರ ಲವ್‌ಸ್ಟೋರಿಗಳಿಗೆ ಬರವಿಲ್ಲ. ಕೆಲವರ ಲವ್ ಸ್ಟೋರಿ ಗುಟ್ಟಾಗಿದ್ರೆ ಮತ್ತೆ ಕೆಲವ್ರು ಬಹಿರಂಗವಾಗಿಯೇ ಸುತ್ತಾಡಿ ಸುದ್ದಿಯಾಗ್ತಾರೆ. ಇನ್ ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ ಮದುವೆ ಆದ ಹೀರೋ ಹೀರೋಯಿನ್‌ಗಳ ಪ್ರೀತಿಯಲ್ಲಿ ಬಿದ್ದು ಎದ್ದು ಒದ್ದಾಡುತ್ತಾರೆ ಅಂತದ್ದೇ ಸ್ಥಿತಿ ಈಗ ದರ್ಶನ್ ವಿಷಯದಲ್ಲೂ ಆಗಿದೆ ಅನ್ನೋ ಟಾಕ್ ಎದ್ದಿದೆ. 

ನಟ ದರ್ಶನ್ ರದ್ದು ಲವ್ ಕಮ್ ಅರೇಂಜ್ ಮ್ಯಾರೇಜ್. ದರ್ಶನ್ (Darshan) ವಿಜಲಕ್ಷ್ಮಿಯನ್ನ ಪ್ರೀತಿಸಿ ಮದುವೆ ಆಗಿದ್ರು. ಆದ್ರೆ ಮದುವೆ ಬಳಿಕವೂ ನಟ ದರ್ಶನ್ ಹೆಸರು ಬೇರೆ ನಟಿಯರ ಜೊತೆ ತಳುಕು ಹಾಕಿಕೊಂಡಿತ್ತು. ದರ್ಶನ್ ಹಾಗೂ ನಟಿ ನಿಖಿತಾ ತುಕ್ರಾಲ್ ಮಧ್ಯೆ ಪ್ರೇಮಾಂಕುರ ಆಗಿತ್ತು ಅಂತ ಟಾಕ್ ಆಗಿತ್ತು. ಅಷ್ಟೇ ಯಾಕೆ ನಟಿ ಪವಿತ್ರಾ ಗೌಡ ಕೂಡ ದರ್ಶನ್ ತೆಕ್ಕೆಯಲ್ಲಿ ಸಿಕ್ಕಿಕೊಂಡವರೇ ಅಂತೆ. ರೇಣುಕಾಸ್ವಾಮಿ ಕೊಲೆಗೆ (Renukaswamy murder) ಇದೇ ಪವಿತ್ರಾ ಗೌಡ ಕಾರಣ ಅನ್ನೋದು ಮತ್ತೆ ಹೇಳಬೇಕಿಲ್ಲ. ಪವಿತ್ರಾ ಗೌಡ ದರ್ಶನ್ ಲವ್ ಮಾಡುತ್ತಿದ್ದಾರೆ ಅನ್ನೋ ಮಾತುಗಳು ಗಾಂಧಿನಗರದಲ್ಲಿವೆ. ಅದರಂತೆ ನಟಿ ಪವಿತ್ರಾ ಗೌಡ ದರ್ಶನ್ ಜೊತೆಗಿನ ಫೋಟೋ ಹಂಚಿಕೊಂಡು ನಮ್ಮಿಬ್ಬರದ್ದು ಹತ್ತು ವರ್ಷಗಳ ರಿಲೇಷನ್‌ಶಿಪ್ ಅಂತ ಬರೆದುಕೊಂಡಿದ್ರು. ನಟ ದುನಿಯಾ ವಿಜಯ್(Duniya Vijay) ಕೂಡ ಮದುವೆ ಆದ ಮೇಲೂ ಪ್ರೀತಿಯಲ್ಲಿ ಬಿದ್ದಿದ್ದಾರೆ. ಮೊದಲ ಪತ್ನಿ ನಾಗರತ್ನಾರಿಂದ ಡಿಪೋರ್ಸ್ ಗೆ ಕೇಳಿರೋ ವಿಜಯ್ ಈಗ ನಟಿ ಕೀರ್ತಿ ಜೊತೆ ಜೀವನ ನಡೆಸುತ್ತಿದ್ದಾರೆ. ಟಾಲಿವುಡ್ ನಟ ಪವನ್ ಕಲ್ಯಾಣ್(Pawan Kalyan) ಜೀವನದಲ್ಲೂ ಅಂತದ್ದೇ ಘಟನೆ ಆಗಿದೆ. ಪವನ್ ಕಲ್ಯಾಣ್ ಮೊದಲು ನಂದಿನಿ ಜೊತೆ ಮದುವೆ ಆಗಿದ್ರು. ಆ ಮೇಲೆ ನಟಿ ರೇಣು ದೇಸಾಯಿ ಜೊತೆ ಲವ್ವಾಗಿ 2009ರಲ್ಲಿ ವಿವಾಹ ಕೂಡ ಆಗಿದ್ರು. ಆದ್ರೆ 2012ರಲ್ಲಿ ಭಿನ್ನಾಭಿಪ್ರಾಯಗಳಿಂದ ಡಿವೋರ್ಸ್ ಪಡೆದು ದೂರಾಗಿದ್ದಾರೆ. ಕಾಲಿವುಡ್ ನಟ ಕಮಲ್ ಹಾಸನ್ ತಮ್ಮ ಮೊದಲನೇ ಪತ್ನಿ ವಾಣಿ ಗಣಪತಿಗೆ ಡಿವೋರ್ಸ್ ನೀಡಿ, ಸಾರಿಕಾ ಅವರನ್ನು ವರಿಸಿದ್ದರು. ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಕೂಡ ಮದುವೆ ಆದ ಮೇಲೆ ಪ್ರೀತಿಯಲ್ಲಿ ಬಿದ್ಧವರೆ. ಜಯಾ ಬಚ್ಚನ್ ಕೈ ಹಿಡಿದಿದ್ದ ಬಿಗ್‌ಬಿ ಅಮಿತಾ ಬಚ್ಚನ್ ರೇಖಾ ಜೊತೆಗೂ ಅಫೇರ್ ಮುಂದುವರಿಸಿದ್ರು. 

ಇದನ್ನೂ ವೀಕ್ಷಿಸಿ:  ರೇಣುಕಾಸ್ವಾಮಿ ಕುಟುಂಬದ ಸಹಾಯಕ್ಕೆ ನಿಂತ ಧ್ರುವ ಸರ್ಜಾ ಅಭಿಮಾನಿಗಳು!

Video Top Stories