ಸನಾತನ ಧರ್ಮ ಹೆಚ್‌ಐವಿ, ಕುಷ್ಠರೋಗದಿಂದ ಕೂಡಿದೆ: ಕ್ಯಾಬಿನೆಟ್‌ನಲ್ಲಿ ಚರ್ಚೆಗೆ ರೆಡಿ ಎಂದ ಎ. ರಾಜಾ

ಎ.ರಾಜಾ ಕಿಚ್ಚು ಹಚ್ಚಿದ್ರೆ. ಮೊನ್ನೆ ಉದಯನಿಧಿ ಕಾಂಟ್ರವರ್ಸಿ ಹೇಳಿಕೆ ಸಮರ್ಥಿಸಿಕೊಳ್ಳುವ ರೀತಿ ಸನಾತನ ಧರ್ಮದ ಹುಟ್ಟಿನ ಬಗ್ಗೆ ಸಚಿವ ಪರಮೇಶ್ವರ್ ಪ್ರಶ್ನೆ ಹಾಕಿದ್ದರು. ಇದಕ್ಕೆ ಟ್ವಿಟರ್‌ನಲ್ಲಿ ಚಾಟಿ ಬೀಸಿದ ಯತ್ನಾಳ್, ಮುಸ್ಲಿಂ ಧರ್ಮದ ಹುಟ್ಟಿನ ಬಗ್ಗೆ ಕೇಳುವ ಧೈರ್ಯ ನಿಮ್ಮಲ್ಲಿದೆಯಾ ಎಂದು ಸವಾಲು ಹಾಕಿದ್ದಾರೆ.

Share this Video
  • FB
  • Linkdin
  • Whatsapp

ಸನಾತನ ಧರ್ಮದ ವಿರುದ್ಧ ಡಿಎಂಕೆ ನಾಯಕರು ಒಬ್ಬರಾದ ಮೇಲೆ ಒಬ್ಬರು ನಾಲಿಗೆ ಹರಿಬಿಡ್ತಿದ್ದಾರೆ. ಸನಾತನ(Sanatana Dharma) ಧರ್ಮ ಡೆಂಘೀ, ಕೊರೊನಾ ಇದ್ದಂತೆ ಅಂತೆಲ್ಲಾ ನಾಲಿಗೆ ಹರಿಬಿಟ್ಟಿದ್ದ ಸ್ಟಾಲಿನ್ ಪುತ್ರನ ಹೇಳಿಕೆಗೆ ಈಗಾಗಲೇ ದೇಶಾದ್ಯಂತ ಕಿಚ್ಚು ಹಚ್ಚಿದೆ. ಇದರ ನಡುವೆ ಈಗ ಡಿಎಂಕೆ ನಾಯಕ, ಮಾಜಿ ಸಚಿವ ಎ.ರಾಜ(A. Raja) ಹಿಂದೂ ಧರ್ಮವನ್ನು ಸ್ಟಾಲಿನ್ ಪುತ್ರನಿಗಿಂತ ಹರಿತ ಪದಗಳನ್ನು ಬಳಸಿ ಟೀಕಿಸಿ ಉರಿಯೋ ಬೆಂಕಿಗೆ ತುಪ್ಪ ಸುರಿದಿದ್ದಾರೆ. ಡಿಎಂಕೆ ನಾಯಕ ಎ.ರಾಜಾ ಹಿಂದೂ ವಿರೋಧಿ ಹಾಗೂ ಉದ್ಧಟತನದ ಹೇಳಿಕೆ ನೀಡಿದ್ದಾರೆ. ಸನಾತನ ಧರ್ಮದ ಬಗ್ಗೆ ಉದಯನಿಧಿ(Udayanidhi) ಮೃದುವಾಗಿ ಮಾತಾಡಿದ್ದಾರೆ. ಸನಾತನ ಧರ್ಮಕ್ಕೆ ಹೋಲಿಸಿದ ಮಲೇರಿಯಾ, ಡೆಂಘೀ ಅಂತಹ ರೋಗಗಳಲ್ಲ ಎನ್ನುವ ಮೂಲಕ HIV ಮತ್ತು ಕುಷ್ಠರೋಗಗಳಿಗೆ ಹೋಲಿಸಿದ್ದಾರೆ. ಇಷ್ಟು ಮಾತ್ರವಲ್ಲ ಈ ಬಗ್ಗೆ ನಾನು ಮೋದಿ ಕ್ಯಾಬಿನೆಟ್ ಜೊತೆಗೂ ಚರ್ಚೆಗೆ ರೆಡಿ ಎನ್ನುವ ಮೂಲಕ ಬಿಜೆಪಿಗರಿಗೆ ಸವಾಲು ಹಾಕಿದ್ದಾರೆ.

ಇದನ್ನೂ ವೀಕ್ಷಿಸಿ: ಹೈಕಮಾಂಡ್ ತಲೆಯಲ್ಲಿನ ಲೆಕ್ಕಾಚಾರ ಏನು..? ವಿಜಯೇಂದ್ರಗೆ ಸಿಗುತ್ತಾ ಪ್ರಮುಖ ಸ್ಥಾನಮಾನ..?

Related Video