
ಮೊಬೈಲ್ನಲ್ಲಿ ಅವನದ್ದೇ ರಾಸಲೀಲೆ ವಿಡಿಯೋಗಳು! ಗೆಳೆಯರ ಜೊತೆ ಸೇರಿ ಗಂಡನನ್ನೇ ಕೊಂದುಬಿಟ್ಟಳಾ ಮಡದಿ?
ಬೆಳಗಾವಿ ಉದ್ಯಮಿಯ ಕೊಲೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಕೊಲೆ ಮಾಡಿದ ಹೆಂಡತಿ ಹಾಗೂ ಆಕೆಯ ಫೇಸ್‌ಬುಕ್ ಗೆಳೆಯ ಇದೀಗ ಕೊಲೆಯಾದ ಉದ್ಯಮಿಯ ಮತ್ತೊಂದು ಮುಖವಾಡ ಬಿಚ್ಚಿಟ್ಟಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ
ಬೆಳಗಾವಿ: ಅದು ಬೆಳಗಾವಿಯನ್ನೇ ಬೆಚ್ಚಿ ಬೀಳಿಸಿದ ಮರ್ಡರ್. ತಾಳಿ ಕಟ್ಟಿದ ಹೆಂಡತಿಯೇ ಫೇಸ್‌ಬುಕ್ ಗೆಳೆಯರ ಜೊತೆ ಸೇರಿ ಗಂಡನ ಕಥೆ ಮುಗಿಸಿ ನಂತರ ಹಾರ್ಟ್ ಅಟ್ಯಾಕ್ ನಾಟಕವಾಡಿದ್ದಳು. ಆದ್ರೆ ತನ್ನ ಮಗಳೇ ತಂದೆಯ ಸಾವಿನ ರಹಸ್ಯವನ್ನ ಬಯಲಿಗೆಳದಿದ್ದಳು. ಮಗಳು ಕೊಟ್ಟ ಕಂಪ್ಲೆಂಟ್ ಆಧರಿಸಿ ಪೊಲೀಸರು ಸತ್ತವನ ಮೃತದೇಹವನ್ನ ಮತ್ತೆ ಹೊರತೆಗೆದು ಪೋಸ್ಟ್ ಮಾರ್ಟಮ್ ರಿಪೋರ್ಟ್ ಮಾಡಿದ್ರು.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಅಷ್ಟೇ ಅಲ್ಲ ಹೆಂಡತಿ ಮತ್ತು ಆಕೆಯ ಗೆಳೆಯರನ್ನ ವಶಕ್ಕೆ ಪಡೆದ್ರು. ಆದ್ರೆ ಇದೇ ಕೊಲೆ ಕೇಸ್ನಲ್ಲಿ ಮತ್ತೊಂದು ಭಯಾನಕ ಸತ್ಯ ಹೊರಬಿದ್ದಿದೆ. ಅಲ್ಲಿ ಕೊಲೆಯಾದ ರಿಯಲ್ ಎಸ್ಟೇಟ್ ಉದ್ಯಮಿಯ ನಿಜ ಬಣ್ಣ ಬಯಲಾಗಿದೆ. ಆತನ ರಾಸಲೀಲೆಯ ಕಥೆ ಬಹಿರಂಗವಾಗಿದೆ. ಅಷ್ಟಕ್ಕೂ ಏನು ಅವನ ಕಥೆ? ಆತನ ಕಾಮ ಪುರಾಣವಾದ್ರೂ ಏನು ಅನ್ನೋದನ್ನ ತಿಳಿದುಕೊಳ್ಳೋಣ ಬನ್ನಿ