
ಬಾಣಂತನಕ್ಕೆ ಹೋದ ಆಂಟಿ ಬಾಯ್ ಫ್ರೆಂಡ್ ಜೊತೆ ಪರಾರಿ, ಇದು ಖತರ್ನಾಕ್ ಆಂಟಿಯ ಕಥೆ!
ಮೊದಲ ಗಂಡನ ಮೇಲೆ ವರದಕ್ಷಿಣೆ ಕೇಸ್ ಹಾಕಿದ್ಲು..ಅವಳಿಗೆ ಮೂರು ಮಕ್ಕಳು.. ಎರಡು ಗಂಡನದ್ದು.. ಮತ್ತೊಂದು...ಇಬ್ಬರು ಗಂಡಂದಿರ ನಡುವೆ ಬಂದು ಹೋಗಿದ್ದು ಮತ್ತೊಬ್ಬ.
ಅವಳು ಬಡ ಕುಟುಂಬದ ಹುಡುಗಿ.. ಹೆತ್ತವರು ಒಳ್ಳೆ ದುಡ್ಡಿನ ಪಾರ್ಟಿಯನ್ನೇ ಹುಡುಕಿ ಮದುವೆ ಮಾಡಿದ್ರು.. ಆದ್ರೆ ಈಕೆ ಗಂಡನ ಜೊತೆ ಸಂಸಾರ ಮಾಡಿದ್ದು 3 ವರ್ಷ ಮಾತ್ರ.. ಎರಡನೇ ಮಗುವಿನ ಬಾಣಂತನಕ್ಕೆ ಅಂತ ತವರು ಮನೆ ಸೇರಿದ ಅವಳು ವಾಪಸ್ ಗಂಡನ ಮನೆಗೆ ಹೋಗೋದೇ ಇಲ್ಲ.. ಅಷ್ಟೇ ಅಲ್ಲ ಗಂಡನ ಮೇಲೆಯೇ ಸಾಲು ಸಾಲು ಕೇಸ್ಗಳನ್ನ ಹಾಕಿಬಿಟ್ಟಳು.. ಆದ್ರೆ ಇತ್ತ ಗಂಡ ಕೋರ್ಟು ಮನೆ ಅಂತ ಅಲೆಯುತ್ತಿದ್ರೆ ಹೆಂಡತಿ ತವರು ಮನೆಯಲ್ಲೇ ಇದ್ದುಕೊಂಡು ಕಂಡ ಕಂಡವರಿಗೆಲ್ಲಾ ಪ್ರೀತಿಯ ಪಾಠ ಮಾಡ್ತಿದ್ದಳು.. ಗಂಡನಿಗೆ ಬೈ ಹೇಳಿ ಬಾಯ್ಫ್ರೆಂಡ್ಸ್ ಜೊತೆ ಸುತ್ತೋದಕ್ಕೆ ಶುರು ಮಾಡಿದ್ಲು.. ಈಗ ನೋಡಿದ್ರೆ ಮೂರನೇ ಮಗುವಿಗೂ ಜನ್ಮ ನೀಡಿದ್ದಾಳೆ.. ಹೀಗೆ ಗಂಡನನ್ನ ಬೀದಿಗೆ ನಿಲ್ಲಿಸಿ ಬಾಯ್ಫ್ರೆಂಡ್ಸ್ ಜೊತೆ ಲೈಫ್ ಏಂಜಾಯ್ ಮಾಡುತ್ತಿರುವ ಖತರ್ನಾಕ್ ಆಂಟಿ ಇವಳು.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ