ಭಜರಂಗದಳ ಕಾರ್ಯಕರ್ತರ ಮೇಲೆ ಹಲ್ಲೆ: ಅನ್ಯ ಕೋಮಿನ ಯುವಕರಿಂದ ದಾಳಿ, ಓರ್ವನಿಗೆ ಚಾಕು ಇರಿತ

ಶಿವಮೊಗ್ಗದಲ್ಲಿ ಭಜರಂಗದಳ ಕಾರ್ಯಕರ್ತರ ಮೇಲೆ ಅನ್ಯ ಕೋಮಿನ ಯುವಕರು ಹಲ್ಲೆ ನಡೆಸಿದ್ದಾರೆ. ಇದರಲ್ಲಿ ಓರ್ವನಿಗೆ ಚಾಕುವಿನಿಂದ ಇರಿಯಲಾಗಿದೆ.

First Published Jun 26, 2023, 9:09 AM IST | Last Updated Jun 26, 2023, 9:08 AM IST

ಶಿವಮೊಗ್ಗ: ಜಿಲ್ಲೆಯಲ್ಲಿ ಭಜರಂಗದಳ ಕಾರ್ಯಕರ್ತರ ಮೇಲೆ ಹಲ್ಲೆ ನಡೆದಿದೆ. ಓರ್ವನಿಗೆ ಚಾಕು ಇರಿತವಾಗಿದ್ದು, ಮೂವರು ಹಿಂದು ಯುವಕರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಕುಡಿದ ಮತ್ತಿನಲ್ಲಿ ಬಂದ ಅನ್ಯ ಕೋಮಿನ ಯುವಕರು ಆಟೋಗೆ ಗುದ್ದಿದ್ದಾರೆ. ಈ ವೇಳೆ ಎರಡು ಗುಂಪಿನ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಇರ್ಫಾನ್‌ ಮತ್ತು ಸಹಚರರು ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ. ಈ ಘಟನೆ ಶಿವಮೊಗ್ಗದ ಟಿಪ್ಪು ನಗರದ ಶಾದಿ ಮಹಲ್‌ ಬಳಿ ನಡೆದಿದೆ. ಈ ಘಟನೆ ಹಿನ್ನೆಲೆ ಹೊರ ಜಿಲ್ಲೆಗಳಿಂದ ಪೊಲೀಸರನ್ನು ನಗರಕ್ಕೆ ಕರೆಸಲಾಗಿದ್ದು, ಸೂಕ್ಷ್ಮ ಸ್ಥಳಗಳಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿದೆ.ತುಂಗಾ ನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಇದನ್ನೂ ವೀಕ್ಷಿಸಿ: Daily Panchanga: ಇಂದು ಅಷ್ಟಮಿಯುಕ್ತ ದಿನವಾಗಿದ್ದು, ಶಿವ -ದುರ್ಗಾ ದೇವಿ ಆರಾಧನೆ ಮಾಡಿ..

Video Top Stories