
Suvarna FIR: ನಿನ್ನ ಗಂಡ ನನಗೆ ಬೇಕು... ಕರುಣೆ ತೋರದೆ ಮಕ್ಕಳು ಸೇರಿ ಐವರನ್ನು ಕೊಂದಳು!
* ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆ.ಆರ್.ಸಾಗರದ ದಾರುಣ ಘಟನೆ
* ಸುತ್ತಿಗೆಯಿಂದ ಹೊಡೆದು ಮಹಿಳೆ, ನಾಲ್ವರು ಮಕ್ಕಳ ಹತ್ಯೆ
* ಆರೋಪಿ ಮಹಿಳೆಯನ್ನು ಬಂಧಿಸಿದ ಪೊಲೀಸರು
* ಅಕ್ರಮ ಸಂಬಂಧದ ವಾಸನೆ
ಮೈಸೂರು/ ಮಂಡ್ಯ(ಫೆ. 10) ಒಂದು ರಾತ್ರಿ ಇಡೀ ಮನೆಯೇ ಸ್ಮಶಾನ.. ಒಬ್ಬ ಮಹಿಳೆ, ನಾಲ್ವರು ಮಕ್ಕಳ ಹತ್ಯೆ. ಆ ಐದು ಕೊಲೆ ಮಾಡಿದ್ದು ಒಬ್ಬ ಮಹಿಳೆ. ಒಂದು ಪೋನ್ ಕಾಲ್ ಆ ಎಲ್ಲ ಕೊಲೆ ಹಿಂದಿನ ರಹಸ್ಯ ತೆರೆದಿರಿಸಿತ್ತು.
ಬೀದಿ ನಾಯಿಗಳೊಂದಿಗೆ ಆದಿ ಮತ್ತೆ ಜಗಳ, ಕಾರು ಹತ್ತಿಸುವ ಯತ್ನ
ಅಕ್ರಮ ಸಂಬಂಧಕ್ಕಾಗಿ(Illicit Relationship) ಮಹಿಳೆಯೊಬ್ಬಳು ನಾಲ್ವರು ಮಕ್ಕಳು ಸೇರಿ ಐವರನ್ನು ಕೊಲೆ(Murder) ಮಾಡಿದ್ದಳು. ಮೈಸೂರಿನ(Mysuru) ಬೆಲವೆತ್ತ ಗ್ರಾಮದ ಲಕ್ಷ್ಮೀ ಮಂಡ್ಯ(Mandya) ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೆ.ಆರ್.ಸಾಗರದ ಗಂಗಾರಾಮ್ ಎಂಬುವನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದೆ ಪ್ರಕರಣಕ್ಕೆ ಕಾರಣ.