Suvarna FIR :ಅರ್ಚನಾ ರೆಡ್ಡಿ ಕೊಲೆ ಕೇಸ್‌ಗೆ ಮತ್ತೊಂದು ಟ್ವಿಸ್ಟ್.. ಊಹೆ ಮಾಡಲು ಸಾಧ್ಯವಿಲ್ಲ!
* ಸುಂದರಿ ಅರ್ಚನಾ ರೆಡ್ಡಿ ಕೊಲೆಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್
*ತಾಯಿಕ ಕೊಲೆಯ ಹಿಂದೆ ಮಗಳದ್ದೇ ಕೈವಾಡ
* ನೂರಾರು ಕೋಟಿ ಒಡತಿ ಬೀದಿ ಹೆಣವಾದ ಕತೆ
ಬೆಂಗಳೂರು(ಜ. 04) 38ರ ಸುಂದರಿ.. ಇಬ್ಬರು ಗಂಡಂದಿರು. ಇನ್ನೊಬ್ಬ ಬಾಯ್ ಫ್ರೆಂಡ್.. ಪುರಸಭೆ ಚುನಾವಣೆಗೆ (Election) ಮತದಾನಕ್ಕೆ ಬಂದವಳನ್ನು ರಸ್ತೆಯಲ್ಲಿ ಕೊಚ್ಚಿ ಕೊಚ್ಚಿ (Murder) ಹಾಕಲಾಗಿತ್ತು. ಸುಂದರಿ ಅರ್ಚನಾ ರೆಡ್ಡಿ ಕೊಲೆಯಾಗಿದ್ದಳು.
Woman Murder: ವರಾತ ತೆಗೆದ ಅತ್ತೆಯನ್ನು ಸ್ಕ್ರೂಡ್ರೈವರ್‌ನಿಂದ ಇರಿದು ಕೊಲೆಗೈದ ಸೊಸೆ!
ಈ ಅರ್ಚನಾ ಕಡಿಮೆ ಆಸಾಮಿ ಅಲ್ಲ ಕೋಟ್ಯಂತರ ರೂ. ಒಡತಿ. ಬೇಗೂರು ನಿವಾಸಿ ನವೀನ್(33), ಬೊಮ್ಮನಹಳ್ಳಿಯ ಮಂಗಮ್ಮನಪಾಳ್ಯದ ಸಂತೋಷ್(35) ಹಾಗೂ ಅನೂಪ್(32) ಎಂಬುವರನ್ನು ಅರ್ಚನಾ ರೆಡ್ಡಿ ಕೊಲೆ ಆರೋಪದ ಮೇಲೆ ಅರೆಸ್ಟ್ ಮಾಡಲಾಗಿತ್ತು. ಆದರೆ ವಿಚಾರಣೆ ಬಳಿಕ ಒಂದೊಂದೆ ಅಂಶಗಳು ಬೆಳಕಿಗೆ ಬಂದವು. ತಾಯಿ ಹತ್ಯೆಯಲ್ಲಿ ಮಗಳದ್ದೇ ಕೈವಾಡ ಇರುವುದು ಬಹಿರಂಗವಾಗಿದೆ..