Skeletons in House: ಪಾಳುಬಿದ್ದ ಮನೆಯಲ್ಲಿ 5 ಅಸ್ಥಿಪಂಜರ ಪತ್ತೆ: ಈ ಸಾವಿನ ರಹಸ್ಯವೇನು ? ಯಾರು ಇವರು ?

ಚಿತ್ರದುರ್ಗದ ಮನೆಯಲ್ಲಿ 5 ಅಸ್ಥಿಪಂಜರ ಪತ್ತೆ ಕೇಸ್
ವೈದ್ಯಕೀಯ ತಂಡ ಪರಿಶೀಲನೆ ಅಸ್ಥಿಪಂಜರ ಶಿಫ್ಟ್
ಅಂಬುಲೆನ್ಸ್ ಮೂಲಕ ಜೆಎಂಐಟಿ ಶವಗಾರಕ್ಕೆ ರವಾನೆ

Share this Video
  • FB
  • Linkdin
  • Whatsapp

ಚಿತ್ರದುರ್ಗದ(chitradurga) ಜಗನ್ನಾಥರೆಡ್ಡಿ ಮನೆಯಲ್ಲಿ 5 ಅಸ್ಥಿಪಂಜರಗಳು(Skeletons) ಪತ್ತೆಯಾಗಿವೆ. ಈ ಮನೆಯಲ್ಲಿ ಕಳ್ಳತನ(Theft) ನಡೆದಿತ್ತಾ ಎಂಬ ಅನುಮಾನ ಸಹ ಮೂಡಿದೆ. ಸಾವಿಗೂ ಮುನ್ನ ಮನೆ ಪೂರ್ಣ ಅಸ್ತವ್ಯಸ್ಥ ಮಾಡಿಕೊಂಡಿದ್ದರಾ? ಎಂಬ ಪ್ರಶ್ನೆ ಸಹ ಮೂಡಿದೆ. ವ್ಹೀಲ್ ಚೇರ್, ಮೆಡಿಸನ್, ಆಕ್ಸಿಜನ್ ಸಿಲೆಂಡರ್ ಸಹ ಮನೆಯಲ್ಲಿ ಪತ್ತೆಯಾಗಿದೆ. ಕೋವಿಡ್ (Covid) ವೇಳೆಯೇ ಐವರು ಮೃತ ಪಟ್ಟಿದ್ದರಾ ಎಂಬ ಅನುಮಾನ ಸಹ ಮೂಡಿದೆ. ಕೋವಿಡ್ ವೇಳೆ ಯಾರೂ ಬಾರದಂತಾಗಿ ಪ್ರಕರಣ ಮುಚ್ಚಿ ಹೋಗಿತ್ತಾ ಎಂಬ ಶಂಕೆ ವ್ಯಕ್ತವಾಗಿದೆ. ಒಂದು ಕೋಣೆಯಲ್ಲಿ ಜಗನ್ನಾಥ ರೆಡ್ಡಿ, ಪ್ರೇಮಕ್ಕ ಅಸ್ಥಿಪಂಜರ ಪತ್ತೆಯಾಗಿದ್ದು, ಇನ್ನೊಂದು ಕೋಣೆಯಲ್ಲಿ ಮಂಚದ ಮೇಲೆ ತ್ರಿವೇಣಿ ಅಸ್ಥಿಪಂಜರ ಪತ್ತೆಯಾಗಿದೆ ಎನ್ನಲಾಗ್ತಿದೆ. ಮತ್ತೊಂದು ಕಡೆ ಕೃಷ್ಣರೆಡ್ಡಿ, ನರೇಂದ್ರ ರೆಡ್ಡಿ ಅಸ್ತಿಪಂಜರ ಪತ್ತೆಯಾಗಿದೆ.ಇನ್ನೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ್‌(Dr. G. Parameshwara) ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ವೀಕ್ಷಿಸಿ: Monkey Attack: ಚೇಷ್ಠೆ ಮಾಡೋ ಕಪಿರಾಯ ದ್ವೇಷವನ್ನೂ ಸಾಧಿಸ್ತಾನಾ ? ಕೋತಿ ಕಾಟಕ್ಕೆ ಹೈರಾಣಾದ ಕುಟುಂಗಳು !

Related Video