20 ವರ್ಷದವಳಿಗೆ 45 ವರ್ಷದ ಅಂಕಲ್​ ಮೇಲೆ ಲವ್: ಬಲವಂತಕ್ಕೆ ಮದುವೆಯಾದವನಿಗೆ ಸಾವಿನ ಗಿಫ್ಟ್​​​!

ಮಾಡದ ತಪ್ಪಿಗೆ ಇವತ್ತು ಮಂಜುನಾಥ ಹೆಣವಾದ. ಬೇಡ ಬೇಡ ಅಂದ್ರೂ ಆ ರಕ್ಷಿತ ಮಾತು ಕೇಳದೇ ಇವನನ್ನ ಮದುವೆಯಾಗಿ ಅವನ ಪ್ರಾಣ ಹೋಗೋದಕ್ಕೆ ನೇರ ಕಾರಣವಾಗಿದ್ದಾಳೆ. ಇತ್ತ ಹೆತ್ತವರು ಎಲ್ಲಿ ನನ್ನ ಮಗಳು ಅವನ ಜೊತೆ ಜೀವನ ಮಾಡಿದ್ರೆ ಅವಳ ಜೀವನ ಹಾಳಾಗಿಬಿಡುತ್ತೋ ಅನ್ನೋ ಆತಂಕದಲ್ಲಿ ಮಂಜುನಾಥನಿಗೆ ಬುದ್ಧಿ ಕಲಿಸಲು ಹೋಗಿ ಕೊಂದೇ ಬಿಟ್ಟಿದ್ದಾರೆ.

Share this Video
  • FB
  • Linkdin
  • Whatsapp

ಚಿತ್ರದುರ್ಗ(ನ.29): ಅವಳಿಗೆ 20 ವರ್ಷ.. ಅವನು 45 ವರ್ಷದ ಅಂಕಲ್​​.. ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು.. ಮನೆಯಲ್ಲಿ ಒಪ್ಪಲ್ಲ ಅಂತ ಇಬ್ಬರೂ ಓಡಿ ಹೋಗಿ ಮದುವೆ ಕೂಡ ಆಗಿದ್ರು.. ಆದ್ರೆ ಹುಡುಗಿ ಮನೆಯವರು ರಾಜಿ ಪಂಚಾಯ್ತಿ ಮಾಡಿ 20 ದಿನದಲ್ಲಿ ನಿಶ್ಚಿತಾರ್ಥ ಮಾಡುವುದಾಗಿ ಹೇಳಿದ್ರು.. ಆದ್ರೆ ಇವತ್ತು ಅದೇ ಹುಡುಗಿಯ ಕುಟುಂಬ ತಮ್ಮ ಮನೆಯ ಅಳಿಯನನ್ನ ಬರ್ಬರವಾಗಿ ಕೊಂದು ಮುಗಿಸಿದೆ.. ತನ್ನ ಪಾಡಿಗೆ ತಾನಿದ್ದವನನ್ನ ಬಾ ಅಂತ ಕರೆದು ಭಿಕರವಾಗಿ ಕೊಲೆ ಮಾಡಿದ್ದಾರೆ.. ಅಷ್ಟಕ್ಕೂ 20 ದಿನದಲ್ಲಿ ನಿಶ್ಚಿತಾರ್ಥ ಮಾಡ್ತೀವಿ ಅಂದವರೇ ಅವನ ಕಥೆ ಮುಗಿಸಿದ್ದೇಕೆ..? ಅಂಥಹ ತಪ್ಪು ಆತ ಮಾಡಿದ್ದೇನು..? ಇಡೀ ಕರ್ನಾಟಕವನ್ನೇ ಬೆಚ್ಚಿ ಬೀಳೀಸಿದ್ದ ಮರ್ಡರ್​​ ಕಹಾನಿಯೇ ಇವತ್ತಿನ ಎಫ್​.ಐ.ಆರ್​​

45 ವರ್ಷದ ಅಂಕಲೊಬ್ಬ.. ಮನೆಯ ಮಗಳ ಮೇಲೆ ಕಣ್ಣು ಹಾಕಿದ್ರೆ ಯಾರು ತಾನೆ ಬಿಡ್ತಾರೆ ಹೇಳಿ.. ಅವನಿಗೆ ಸರಿಯಾಗಿ ಬಾರಿಸಬೇಕು ಅಂತ ಹೋಗಿ ಹಲ್ಲೆ ಮಾಡಿದ್ದಾರೆ.. ಆದ್ರೆ ಮಂಜುನಾಥ ಅವರ ಕೊಟ್ಟ ಪೆಟ್ಟು ತಾಳಲಾರದೇ ಹೆಣವಾಗಿಬಿಟ್ಟ.. ಇನ್ನೂ ಮಂಜುನಾಥನನ್ನ ಕೊಲ್ಲಲು ರಕ್ಷಿತಾ ಕುಟುಂಬದವರಿಗೆ ವಯಸ್ಸೊಂದೇ ಕಾರಣವಾಗಿರಲಿಲ್ಲ.. ಬದಲಿಗೆ ಮಂಜುನಾಥನ ಫ್ಲಾಷ್​​ಬ್ಯಾಕ್​ ಕೂಡ ತಲೆಕೆಡಸಿತ್ತು.

ಅಪಾರ್ಟ್​ಮೆಂಟ್​ನಲ್ಲಿ ಅಸ್ಸಾಮಿ ಸುಂದರಿಯ ಡೆಡ್​ ಬಾಡಿ: ಬ್ರೇಕ್​​ ಅಪ್​ ಅಂದವಳಿಗೆ ಮಚ್ಚು ಬೀಸಿದ ಪಾಗಲ್​​​ ಪ್ರೇಮಿ!

ಕೇವಲ ವಯಸಷ್ಟೇ ರಕ್ಷಿತಾ ಮತ್ತು ಮಂಜುನಾಥನ ಲವ್​ಗೆ ಅಡ್ಡಿಯಾಗಿರಲಿಲ್ಲ ಬದಲಿಗೆ ಮಂಜುನಾಥನ ಹಿನ್ನಲೆಯೂ ರಕ್ಷಿತಾ ಕುಟುಂಬದ ತಲೆ ಕೆಡಸಿತ್ತು.. 5 ವರ್ಷದ ಹಿಂದೆ ಪ್ರೇಮ ವಿವಾಹವೆ ಆಗಿದ್ದ ಮಂಜುನಾಥ ಹೆಂಡತಿಯನ್ನ ಕರ್ಕೊಂಡು ಬೇರೆ ಊರಿಗೆ ಹೋಗಿ ವಾಸ ಮಾಡ್ತಿದ್ದ.. ಆದ್ರೆ ಹೆಂಡತಿ ಎರಡೇ ತಿಂಗಳಿಗೆ ಇವನ ಕಾಟ ತಾಳಲಾರದೇ ನೇಣು ಬಿಗಿದುಕೊಂಡಿದ್ಲು.. ಅದೇ ಕಾರಣಕ್ಕೆ ಮಂಜುನಾಥ ಜೈಲುವಾಸ ಅನುಭವಿಸಿ ಬಂದಿದ್ದ.. 10 ತಿಂಗಳ ಹಿಂದಷ್ಟೇ ಬೇಲ್​​​ ಬಡೆದು ಮನೆಗೆ ಬಂದಿದ್ದ.. ಆಗಲೇ ನೋಡಿ ಈತ ರಕ್ಷಿತಾ ಕಣ್ಣಿಗೆ ಬಿದ್ದಿದ್ದ.. ಇನ್ನೂ ರಕ್ಷಿತಾಗೆ ಈತನ ಮೇಲೆ ಲವ್​​​ ಹುಟ್ಟಿಬಿಟ್ಟಿತ್ತು.. ಆತ ಬೇಡ ಬೇಡ ಅಂದ್ರೂ ಅವಳು ಈತನಿಗೆ ಮದುವೆ ಮಾಡಿಕೊ ಅಂತ ಪೀಡಿಸುತ್ತಿದ್ದಳು.. ಒಂದು ದಿನ ಗಂಟು ಮೂಟೆ ಕಟ್ಟಿಕೊಂಡು ಮಂಜುನಾಥನ ಎದುರು ಬಂದು ನಿಂತಿದ್ಲು.. ಆಗ ಆತ ಬೇರೆ ದಾರಿ ಕಾಣದೆ ಆಕೆಯನ್ನ ಕರೆದುಕೊಂಡು ಹೋಗಿ ಮದುವೆ ಮಾಡಿಕೊಂಡಿದ್ದ.

ಮಾಡದ ತಪ್ಪಿಗೆ ಇವತ್ತು ಮಂಜುನಾಥ ಹೆಣವಾದ. ಬೇಡ ಬೇಡ ಅಂದ್ರೂ ಆ ರಕ್ಷಿತ ಮಾತು ಕೇಳದೇ ಇವನನ್ನ ಮದುವೆಯಾಗಿ ಅವನ ಪ್ರಾಣ ಹೋಗೋದಕ್ಕೆ ನೇರ ಕಾರಣವಾಗಿದ್ದಾಳೆ. ಇತ್ತ ಹೆತ್ತವರು ಎಲ್ಲಿ ನನ್ನ ಮಗಳು ಅವನ ಜೊತೆ ಜೀವನ ಮಾಡಿದ್ರೆ ಅವಳ ಜೀವನ ಹಾಳಾಗಿಬಿಡುತ್ತೋ ಅನ್ನೋ ಆತಂಕದಲ್ಲಿ ಮಂಜುನಾಥನಿಗೆ ಬುದ್ಧಿ ಕಲಿಸಲು ಹೋಗಿ ಕೊಂದೇ ಬಿಟ್ಟಿದ್ದಾರೆ. ಈ ಮೂಲಕ ಇಡೀ ಕುಟುಂಬವೇ ಜೈಲು ಪಾಲಾಗಲಿದೆ ಅಂತ ಹೇಳ್ತಾ ಇವತ್ತಿನ ಎಪಿಸೋಡ್​​ ಮುಗಿಸುತ್ತಿದ್ದೇನೆ.

Related Video