ಸಂತ್ರಸ್ತೆ ಕಿಡ್ಯ್ನಾಪ್ ಕೇಸ್‌ನಲ್ಲಿ ಅರೆಸ್ಟ್ ಆಗ್ತಾರಾ ರೇವಣ್ಣ? ಹಾಸನದಿಂದ ಮೈಸೂರಿಗೂ ವ್ಯಾಪಿಸಿದ ಪ್ರಜ್ವಲ್ ಪ್ರಹಸನ!

ಬಗೆದಷ್ಟು ಬಯಲಾಗ್ತಿದೆ ಪೆನ್ಡ್ರೈವ್ ಕೇಸ್ ಕರಾಳತೆ!
ಪ್ರಜ್ವಲ್ ವಿರುದ್ಧ ರೇಪ್ ಕೇಸ್ ದಾಖಲಿಸಿದ ಸಂತ್ರಸ್ತೆ
ಅಪ್ಪ-ಮಗನಿಗೆ 2ನೇ ನೋಟಿಸ್ ನೀಡಿದ ಎಸ್ಐಟಿ

First Published May 4, 2024, 4:10 PM IST | Last Updated May 4, 2024, 4:10 PM IST


ಕ್ಷಣಕ್ಕೊಂದು ತಿರುವು. ದಿನಕ್ಕೊಬ್ಬರ ವಿಚಾರಣೆ. ರಾಜಕಾರಣಿಗಳ ಟಾಕ್‌ವಾರ್‌. ಅಂತೆಕಂತೆಗಳು ಇದು ಸದ್ಯ ಪ್ರಜ್ವಲ್ ರೇವಣ್ಣ(Prajwal Revanna) ವಿರುದ್ಧದ ಲೈಂಗಿಕ ದೌರ್ಜನ್ಯ ಕೇಸ್‌ನ(Sexual assault case) ಒನ್ ಲೈನ್ ಸ್ಟೋರಿ. ಚುನಾವಣೆಗೂ ಮುನ್ನ ವೈರಲ್ ಆದ ಕೆಲವು ಅಶ್ಲೀಲ ವಿಡಿಯೋಗಳು (Prajwal Revanna Obscene Video Case) ಇಡೀ ರಾಜ್ಯವನ್ನೇ ಯಾಕೆ..? ದೇಶವನ್ನೇ ಬೆಚ್ಚಿ ಬೀಳಿಸಿದೆ. ರೇವಣ್ಣ ಆ್ಯಂಡ್ ಫ್ಯಾಮಿಲಿ ವಿರುದ್ಧ ಮೂರನೇ ಕೇಸ್ ದಾಖಲಾಗಿದೆ. ಲೈಂಗಿಕ ದೌರ್ಜನ್ಯ ಕೇಸ್ ನಂತರ ರೇಪ್ ಕೇಸ್ ಮತ್ತು ಕಿಡ್ನ್ಯಾಪ್ ಕೇಸ್ ರೇವಣ್ಣ ಅ್ಯಂಡ್ ಸನ್ ವಿರುದ್ಧ ದಾಖಲಾಗಿದೆ. ಲೈಗಿಂಕ ದೌರ್ಜನ್ಯ ಮತ್ತು ರೇಪ್ ಕೇಸ್ ಆದ ನಂತರ ಈಗ ಮತ್ತೊಂದು ಕೇಸ್ ರೇವಣ್ಣ(HD Revanna) ಫ್ಯಾಮಿಲಿ ವಿರುದ್ಧ ದಾಖಲಾಗಿದೆ. ಅದೂ ಕೂಡ ಕಿಡ್ನ್ಯಾಪ್ ಕೇಸ್. ಯಾವಾಗ ಮೊದಲ ಕೇಸ್ ದಾಖಲಾಯ್ತೋ ಅವರದ್ದೇ ಮನೆಯಲ್ಲಿ ಕೆಲಸ ಮಾಡ್ತಿದ್ದ ಮನೆಕೆಲಸದವಳನ್ನ ರೇವಣ್ಣ ಹೇಳಿದ್ರು ಅಂತ ತನ್ನ ಗ್ರಾಮದಿಂದ ಕರೆದೊಯ್ದು ವಾಪಸ್ ಕರೆತಂದಿಲ್ಲ. ಆಕೆಯನ್ನ ಕಿಡ್ನ್ಯಾಪ್ ಮಾಡಿದ್ದಾರೆ ಅಂತ ಸಂತ್ರಸ್ತೆಯ ಮಗ ಮೈಸೂರಿನಲ್ಲಿ(Mysore) ದೂರು ದಾಖಲು ಮಾಡಿದ್ದಾರೆ. ಇದೆಲ್ಲಾ ನೋಡ್ತಿದ್ರೆ ರೇವಣ್ಣ ಫ್ಯಾಮಿಲಿಗೆ ಬ್ಯಾಡ್ ಟೈಂ ಶುರುವಾಗಿದೆ ಅನಿಸ್ತಿದೆ.. ರೇವಣ್ಣ ಪ್ರತೀ ನಿತ್ಯ ಹತ್ತಾರು ದೇವಸ್ಥಾನಗಳನ್ನ ಸುತ್ತುತ್ತಿದ್ದಾರೆ.

ಇದನ್ನೂ ವೀಕ್ಷಿಸಿ:  Rain in Bengaluru: ರಾಜ್ಯದ ಹಲವೆಡೆ ಮಳೆರಾಯನ ದರ್ಶನ: ಬಿಸಿಲಿನಿಂದ ‘ಬೆಂದ’ಕಾಳೂರಿಗೆ ಮಳೆ ಸಿಂಚನ!