Asianet Suvarna News Asianet Suvarna News

WATCH: ಕ್ವಿಕ್‌ ಸ್ಟೈಲ್‌ ಜೊತೆ ಕೊಹ್ಲಿ ಕ್ವಿಕ್‌ ಡಾನ್ಸ್‌ ನೋಡಿದ್ರಾ?

ಮದುವೆ ಸಮಾರಂಭವೊಂದರಲ್ಲಿ ಬಾಲಿವುಡ್‌ನ ಸೂಪರ್‌ ಹಿಟ್‌ ಸಾಂಗ್‌ಗೆ ಕೆಲವೊಂದಿಷ್ಟು ಹುಡುಗರು ಒಂದೇ ರೀತಿಯಲ್ಲಿ ಡಾನ್ಸ್‌ ಮಾಡಿದ್ದ ವಿಡಿಯೋ ವೈರಲ್‌ ಆಗಿದ್ದು ನೆನಪಿದ್ಯಲ್ಲ. ಬಳಿಕ ಅವರ ರೀತಿಯಲ್ಲೇ ಡಾನ್ಸ್‌ ಮಾಡೋದು ಕೂಡ ವೈರಲ್‌ ಆಗಿದ್ದವು. ಈಗ ಅದೇ ಡಾನ್ಸ್‌ ಗ್ರೂಪ್ ಜೊತೆ ಕೊಹ್ಲಿ ಕುಣಿದಿದ್ದಾರೆ.

ಬೆಂಗಳೂರು (ಮಾ.14): ಬಾಲಿವುಡ್‌ನ ಸೂಪರ್‌ ಹಿಟ್‌ ಗೀತೆಗಳಿಗೆ ತನ್ನದೇ ಭಿನ್ನ ಶೈಲಿಯಲ್ಲಿ ಡಾನ್ಸ್‌ ಮಾಡುವ ಮೂಲಕ ಇಂಟರ್ನೆಟ್‌ಗೆ ಕಿಚ್ಚು ಹಚ್ಚಿದ್ದ ನಾರ್ವೆ ಮೂಲದ ಪ್ರಖ್ಯಾತ ಡಾನ್ಸ್‌ ಗ್ರೂಪ್‌ ಕ್ವಿಕ್‌ ಸ್ಟೈಲ್‌ ಭಾರತ ಪ್ರವಾಸದಲ್ಲಿದೆ.  ಸಂಪೂರ್ಣ ಪುರುಷ  ಡಾನ್ಸರ್‌ಗಳಿಂದಲೇ ತುಂಬಿರುವ ಕ್ವಿಕ್‌ ಸ್ಟೈಲ್‌ ಇಂಟರ್ನೆಟರ್‌ನಲ್ಲಿ ಸೆನ್ಸೇಷನ್‌ ಆಗಿದೆ. ಅದರಲ್ಲೂ ಬಾಲಿವುಡ್‌ ಗೀತೆಗಳಾದ ಕಾಲಾ ಚಶ್ಮಾ, ಸದ್ದಿ ಗಲ್ಲಿ, ಚುರಾಕೆ ದಿಲ್‌ ಮೇರಾ ಸೇರಿದಂತೆ ಇತರ ಕೆಲವೊಂದು ಹಾಡಿಗೆ ಇವರುಗಳು ಮಾಡಿರುವ ನೃತ್ಯಗಳು ಸೂಪರ್‌ ಹಿಟ್ ಎನಿಸಿದ್ದವು. 

ಮಂಗಳವಾರ ಈ ಹಿಪ್‌ ಹಾಪ್‌ ಗ್ರೂಪ್‌ ತನ್ನ ಇನ್ಸ್‌ಟಾಗ್ರಾಮ್‌ ಪೇಜ್‌ನಲ್ಲಿ ಇನ್ನೊಂದು ವಿಡಿಯೋವನ್ನು ಹಂಚಿಕೊಂಡಿದೆ. ಈ ವಿಡಿಯೋದಲ್ಲಿರೋದು ಬೇರೆ ಯಾರೋ ಅಲ್ಲ. ಟೀಮ್‌ ಇಂಡಿಯಾದ ಮಾಜಿ ನಾಯಕ ಹಾಗೂ ಸೂಪರ್‌ಸ್ಟಾರ್‌ ಬ್ಯಾಟ್ಸ್‌ಮನ್‌ ವಿರಾಟ್‌ ಕೊಹ್ಲಿ. ಕ್ವಿಕ್‌ ಸ್ಟೈಲ್‌ನ ಡಾನ್ಸರ್‌ಗಳ ಜೊತೆ ವಿರಾಟ್‌ ಕೊಹ್ಲಿ ತಮ್ಮ ಡಾನ್ಸ್‌ನ ಪರಿಚಯವನ್ನೂ ಫ್ಯಾನ್ಸ್‌ಗಳಿಗೆ ಮಾಡಿದ್ದಾರೆ. ಇದರ ಬೆನ್ನಲ್ಲಿಯೇ ಅಭಿಮಾನಿಗಳ ಸಂಭ್ರಮಕ್ಕೆ ಪಾರವೇ ಇಲ್ಲದಂತಾಗಿದೆ.

ವಿರಾಟ್‌ ಕೊಹ್ಲಿ 75ನೇ ಶತಕ, 'ಮಹಾಕಾಲ ಶಿವ' ಯಾರನ್ನೂ ಕೈಬಿಡೋದಿಲ್ಲ ಎಂದ ಫ್ಯಾನ್ಸ್‌!

 

Video Top Stories