Asianet Suvarna News Asianet Suvarna News

Puneeth Rajkumar Death ಕಂಬನಿ ಮಿಡಿದ ಕ್ರಿಕೆಟಿಗ ಅನಿಲ್ ಕುಂಬ್ಳೆ

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ, ಪುನೀತ್ ರಾಜ್‌ಕುಮಾರ್ ನಿಧನದ ಕುರಿತಂತೆ ಸುವರ್ಣ ನ್ಯೂಸ್‌ಗೆ ಪ್ರತಿಕ್ರಿಯೆ ನೀಡಿದ್ದು, ಅವರ ನಿಧನ ದುಃಖ ತಂದಿದೆ. ಅವರ ಸರಳತೆ ತಮಗೆ ಸಾಕಷ್ಟು ಮೆಚ್ಚುಗೆಯಾಗಿತ್ತು ಎಂದಿದ್ದಾರೆ.
 

First Published Oct 29, 2021, 7:17 PM IST | Last Updated Oct 29, 2021, 7:17 PM IST

ಬೆಂಗಳೂರು(ಅ.29): ಸ್ಯಾಂಡಲ್‌ವುಡ್‌ ಧೃವತಾರೆ ಪುನೀತ್ ರಾಜ್‌ಕುಮಾರ್(46) (Puneeth Rajkumar) ಶುಕ್ರವಾರ ಹೃದಯಾಘಾತದಿಂದ ಇಂದು ಕೊನೆಯುಸಿರೆಳೆದಿದ್ದಾರೆ. ಪುನೀತ್ ರಾಜ್‌ಕುಮಾರ್‌ ಅಕಾಲಿಕ ನಿಧನಕ್ಕೆ ಅಭಿಮಾನಿಗಳು, ಚಿತ್ರರಂಗ, ರಾಜಕಾರಣಿಗಳು ಹಾಗೂ ಕ್ರೀಡಾ ಜಗತ್ತು ಕಂಬನಿ ಮಿಡಿದಿದೆ.

ಟೀಂ ಇಂಡಿಯಾ (Team India) ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ (Anil Kumble), ಪುನೀತ್ ರಾಜ್‌ಕುಮಾರ್ ನಿಧನದ ಕುರಿತಂತೆ ಸುವರ್ಣ ನ್ಯೂಸ್‌ಗೆ ಪ್ರತಿಕ್ರಿಯೆ ನೀಡಿದ್ದು, ಅವರ ನಿಧನ ದುಃಖ ತಂದಿದೆ. ಅವರ ಸರಳತೆ ತಮಗೆ ಸಾಕಷ್ಟು ಮೆಚ್ಚುಗೆಯಾಗಿತ್ತು ಎಂದಿದ್ದಾರೆ.

Puneeth Rajkumar Death ನಿಧನಕ್ಕೆ ಕಂಬನಿ ಮಿಡಿದ ಸೆಹ್ವಾಗ್, ಕುಂಬ್ಳೆ, ಉತ್ತಪ್ಪ ..!

ಕನ್ನಡಕ್ಕೆ ಹಾಗೂ ಕನ್ನಡ ಚಿತ್ರರಂಗಕ್ಕೆ ಪುನೀತ್ ರಾಜ್‌ಕುಮಾರ್ ಅಗಲಿಕೆ ಸಾಕಷ್ಟು ನಷ್ಟವನ್ನುಂಟು ಮಾಡಿದೆ. ಅವರ ಕುಟುಂಬ ಹಾಗೂ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಅನಿಲ್ ಕುಂಬ್ಳೆ ಪ್ರಾರ್ಥಿಸಿದ್ದಾರೆ.