* ಹೃದಾಯಾಘಾತದಿಂದ ಕೊನೆಯುಸಿರೆಳೆದ ಪುನೀತ್‌ ರಾಜ್‌ಕುಮಾರ್* ಶೋಕ ಸಾಗರದಲ್ಲಿ ಮುಳುಗಿದ ಅಪಾರ ಅಭಿಮಾನಿ ಬಳಗ* ಪುನೀತ್ ನಿಧನಕ್ಕೆ ಕಂಬನಿ ಮಿಡಿದ ಕ್ರಿಕೆಟ್ ಜಗತ್ತು. 

ಬೆಂಗಳೂರು(ಅ.29): ಸ್ಯಾಂಡಲ್‌ವುಡ್‌(Sandalwood) ಸ್ಟಾರ್ ನಟ ಪುನೀತ್ ರಾಜ್‌ಕುಮಾರ್ (46) (Puneeth Rajkumar) ಹೃದಯಾಘಾತದಿಂದ ಶುಕ್ರವಾರ(ಅ.29) ಕೊನೆಯುಸಿರೆಳೆದಿದ್ದಾರೆ. ಪುನೀತ್ ರಾಜ್‌ಕುಮಾರ್ ನಿಧನಕ್ಕೆ ವಿವಿಧ ಕ್ಷೇತ್ರದ ಸೆಲಿಬ್ರಿಟಿಗಳು ಕಂಬನಿ ಮಿಡಿದಿದ್ದಾರೆ. ಇದೀಗ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗರಾದ ವಿರೇಂದ್ರ ಸೆಹ್ವಾಗ್, ಅನಿಲ್‌ ಕುಂಬ್ಳೆ, ಸುನೀಲ್ ಜೋಶಿ ಸೇರಿದಂತೆ ಹಲವು ಮಂದಿ ಟ್ವೀಟ್ ಮೂಲಕ ಕಂಬನಿ ಮಿಡಿದಿದ್ದಾರೆ.

ಟೀಂ ಇಂಡಿಯಾ (Team India) ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ (Virender Sehwag) ಕೂಡಾ ಟ್ವೀಟ್‌ ಮಾಡಿ ಸಂತಾಪ ಸೂಚಿಸಿದ್ದಾರೆ. ಪುನೀತ್ ರಾಜ್‌ಕುಮಾರ್ ನಿಧನ ಭಾರತ ಸಿನಿಮಾ ಜಗತ್ತಿಗೆ ಆದ ನಷ್ಟ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಓಂ ಶಾಂತಿ ಎಂದು ಟ್ವೀಟ್‌ ಮಾಡಿದ್ದಾರೆ. 

Scroll to load tweet…

Puneeth Rajkumar Death: ಹಾಡಿನಿಂದ ಬರ್ತಿದ್ದ ಹಣವೆಲ್ಲ ದಾನಕ್ಕೆ ಬಳಸ್ತಿದ್ದ ಅಪ್ಪು

ಪುನೀತ್ ರಾಜ್‌ಕುಮಾರ್ ನಡೆಸಿಕೊಡುತ್ತಿದ್ದ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದಲ್ಲಿ ಅನಿಲ್‌ ಕುಂಬ್ಳೆ (Anil Kumble) ಭಾಗವಹಿಸಿದ್ದರು. ಇದೀಗ ಕುಂಬ್ಳೆ ಟ್ವೀಟ್‌ ಮೂಲಕ ಪುನೀತ್ ರಾಜ್‌ಕುಮಾರ್ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಪುನೀತ್ ರಾಜ್‌ಕುಮಾರ್ ಕೊನೆಯುಸಿರೆಳೆದ ಸುದ್ದಿ ಕೇಳಿ ಶಾಕ್‌ ಆಗಿದೆ. ಚಿತ್ರರಂಗ ಅಮೋಲ್ಯ ರತ್ನವನ್ನು ಕಳೆದುಕೊಂಡಿದೆ. ನಾನು ಭೇಟಿ ಮಾಡಿದ ಅದ್ಭುತ ಮನುಷ್ಯ ಅವರು. ಅವರ ಕುಟುಂಬ, ಸ್ನೇಹಿತರು ಹಾಗೂ ಅಪಾರ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಟ್ವೀಟ್‌ ಮಾಡಿದ್ದಾರೆ.

Scroll to load tweet…

Puneeth Rajkumar death ಸ್ಯಾಂಡಲ್‌ವುಡ್ ಪವರ್ ಸ್ಟಾರ್ ನಿಧನಕ್ಕೆ ಗಣ್ಯರ ಸಂತಾಪ

ಇನ್ನು ಕೊಡಗಿನ ಕುವರ ರಾಬಿನ್ ಉತ್ತಪ್ಪ (Robin Uthappa) ಕೂಡಾ ಪುನೀತ್ ರಾಜ್‌ಕುಮಾರ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಪುನೀತ್ ಅವರು ಇಲ್ಲ ಎಂಬುದನ್ನು ನಂಬಲಾಗುತ್ತಿಲ್ಲ, ಪುನೀತ್ ನನ್ನ ಆತ್ಮೀಯ ಸ್ನೇಹಿತ ಹಿತೈಷಿಯಾಗಿದ್ದರು. ನಾವು ಒಬ್ಬ ಒಳ್ಳೆಯ ಮನುಷ್ಯನನ್ನು ಕಳೆದುಕೊಂಡಿದ್ದೇವೆ. ಅವರ ಆತ್ಮಕ್ಕೆ ದೇವರು ಶಾಂತಿ ಕರುಣಿಸಲಿ ಎಂದು ಉತ್ತಪ್ಪ ಸಂತಾಪ ಸೂಚಿಸಿದ್ದಾರೆ.

Scroll to load tweet…

Puneeth RajKumar Death: ಒಂದೂವರೆ ವರ್ಷದಲ್ಲಿ ಮೂವರು ನಟರನ್ನು ಕಳೆದುಕೊಂಡ ಸ್ಯಾಂಡಲ್‌ವುಡ್

ಇನ್ನು ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಹಾಗೂ ಆಯ್ಕೆಸಮಿತಿ ಸದಸ್ಯ ಸುನೀಲ್ ಜೋಶಿ (Sunil Joshi), ಮಯಾಂಕ್ ಅಗರ್‌ವಾಲ್ ಕೂಡ ಟ್ವೀಟ್ ಮೂಲಕ ಅಪ್ಪು ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. 

Scroll to load tweet…

ನಟ ಪತ್ನಿ ಗೀತಾ ಅಶ್ವಿನಿ ರೇವಂತ್ ಹಾಗೂ ಇಬ್ಬರು ಪುತ್ರಿಯರಾದ ದೃತಿ, ವಂದಿತಾ ಮತ್ತು ಕುಟುಂಬ, ಸ್ನೇಹಿತರು ಸೇರಿ ಕೋಟ್ಯಂತರ ಅಭಿಮಾನಿಗಳನ್ನು ಅಗಲಿದ್ದಾರೆ.

Puneeth Rajkumar Death: ನಟ ಪುನೀತ್‌ ರಾಜ್‌ಕುಮಾರ್ ಕೊನೆಯದಾಗಿ ಹಂಚಿಕೊಂಡ ಪೋಸ್ಟ್, ಮಾತುಗಳಿವು!

ಬಾಲನಟನಾಗಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದ ಪುನೀತ್ ರಾಜ್‌ಕುಮಾರ್, ನಾಯಕನಟನಾಗಿ ಅಪ್ಪು ಚಿತ್ರದಿಂದ ಹಿಡಿದು ಯುವರತ್ನ ಚಿತ್ರದವರೆಗೆ ಅದ್ಭುತ ನಟನೆಯ ಮೂಲಕ ಕನ್ನಡಿಗರ ಮನೆಮಗನಾಗಿ ಗುರುತಿಸಿಕೊಂಡಿದ್ದರು. ಇನ್ನು ಕನ್ನಡದ ಕೋಟ್ಯಾಧಿಪತಿ ಸಿನೆಮಾದ ಮೂಲಕ ಕನ್ನಡಿಗರ ಮನೆ-ಮನಗಳಿಗೆ ಮತ್ತಷ್ಟು ಹತ್ತಿರವಾಗಿದ್ದರು. ಪುನೀತ್ ರಾಜ್‌ಕುಮಾರ್ 6 ತಿಂಗಳ ಮಗುವಾಗಿದ್ದಾಗಲೇ ಪ್ರೇಮದ ಕಾಣಿಕೆ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ರಾಜಕುಮಾರ, ಯುವರತ್ನ ಸೇರಿದಂತೆ ಪುನೀತ್ ರಾಜಕುಮಾರ್‌ ಅವರ ಚಿತ್ರಗಳು ಅಪಾರ ಜನಮನ ಮೆಚ್ಚುಗೆಗೆ ಪಾತ್ರವಾಗಿವೆ

ಪುನಿತ್ ರಾಜ್‌ಕುಮಾರ್ ಇಂದು ಬೆಳಗ್ಗೆ ಮನೆಯಲ್ಲಿಯೇ ಜಿಮ್‌ ಮಾಡುವ ವೇಳೆ ಇದ್ದಕ್ಕಿದ್ದಂತೆಯೇ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಬೆಂಗಳೂರಿನಲ್ಲಿರುವ ವಿಕ್ರಂ ಆಸ್ಪತ್ರೆಗೆ ಕರೆ ತರಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಪುನೀತ್ ಕೊನೆಯುಸಿರೆಳೆದಿದ್ದಾರೆ.