ಅಭ್ಯಾಸದ ವೇಳೆ ರೋಹಿತ್ ಗೆ ಗಾಯ: ಮುಂದೇನು..?

ಬಾಂಗ್ಲಾದೇಶ ವಿರುದ್ಧ ಟಿ20 ತಂಡವನ್ನು ಮುನ್ನಡೆಸಲಿರುವ ರೋಹಿತ್ ಅಭ್ಯಾಸದ ವೇಳೆ ಗಾಯಕ್ಕೆ ತುತ್ತಾಗಿ, ಅರ್ಧದಲ್ಲೇ ಮೈದಾನ ತೊರೆದು ಕೆಲಕಾಲ ಆತಂಕ ಸೃಷ್ಟಿಸಿದ್ದರು. ನವೆಂಬರ್ 3ರಂದು ನಡೆಯುವ ಪಂದ್ಯದಲ್ಲಿ ರೋಹಿತ್ ಆಡ್ತಾರ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ...

Share this Video
  • FB
  • Linkdin
  • Whatsapp

ನವದೆಹಲಿ[ನ.02]: ಬಾಂಗ್ಲಾದೇಶ ವಿರುದ್ಧದ ಮೊದಲ ಟಿ20 ಪಂದ್ಯ ಆರಂಭಕ್ಕೂ ಮುನ್ನ ಭಾರತಕ್ಕೆ ಆಘಾತವೊಂದು ಎದುರಾಗಿದೆ. ಭಾರತ ತಂಡದ ನಾಯಕ ರೋಹಿತ್ ಶರ್ಮಾ ಶುಕ್ರವಾರ ಇಲ್ಲಿನ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನೆಟ್ಸ್ ಅಭ್ಯಾಸದ ವೇಳೆ ಕಿಬ್ಬೊಟ್ಟೆಗೆ ಪೆಟ್ಟು ಅಭ್ಯಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದಾರೆ.

ಅತಿ ಹೆಚ್ಚು ಎಸೆತಗಳನ್ನೆದುರಿಸಿದ ಕ್ರಿಕೆಟಿಗರು; ಐವರಲ್ಲಿ ನಾಲ್ವರು ಕ್ಯಾಪ್ಟನ್..!

ಭಾನುವಾರ ಬಾಂಗ್ಲಾದೇಶ ವಿರುದ್ಧ ಮೊದಲ ಟಿ20 ಪಂದ್ಯ ನಡೆಯಲಿದ್ದು, ರೋಹಿತ್ ಗಾಯಗೊಂಡಿದ್ದು ತಂಡದಲ್ಲಿ ಆತಂಕ ಮೂಡಿಸಿತ್ತು. ಬಿಸಿಸಿಐ ವೈದ್ಯಕೀಯ ತಂಡ ರೋಹಿತ್ ಗಾಯದ ಪ್ರಮಾಣ ಹೆಚ್ಚೇನಿಲ್ಲ. ಅವರು ಫಿಟ್ ಆಗಿದ್ದು, ಪಂದ್ಯದಲ್ಲಿ ಆಡಲಿದ್ದಾರೆ ಎಂದು ಸ್ಪಷ್ಟನೆ ನೀಡಿದೆ.

ಬಾಲಿವುಡ್ ಹೀರೋಯಿನ್ಸ್ ಹೃದಯಕದ್ದ ಟಾಪ್ 5 ಕ್ರಿಕೆಟಿಗರಿವರು..!

ನೆಟ್ಸ್‌ನಲ್ಲಿ ಥ್ರೋ ಡೌನ್‌ಗಳನ್ನು ಎದುರಿಸುವ ವೇಳೆ ರೋಹಿತ್ ಕಿಬ್ಬೊಟ್ಟೆಯ ಎಡಭಾಗಕ್ಕೆ ಚೆಂಡು ರಭಸವಾಗಿ ಬಡಿಯಿತು. ನೋವಿನ ಕಾರಣ ಅವರು ತಕ್ಷಣ ನೆಟ್ಸ್ ತೊರೆದರು. ತಂಡದ ಫಿಸಿಯೋ ಅವರಿಂದ ತಕ್ಷಣ ಚಿಕಿತ್ಸೆ ಪಡೆದ ರೋಹಿತ್, ನೆಟ್ಸ್ ಅಭ್ಯಾಸವನ್ನು ಮೊಟುಕುಗೊಳಿಸಿದರು.

Related Video