ಅತಿ ಹೆಚ್ಚು ಎಸೆತಗಳನ್ನೆದುರಿಸಿದ ಕ್ರಿಕೆಟಿಗರು; ಐವರಲ್ಲಿ ನಾಲ್ವರು ಕ್ಯಾಪ್ಟನ್..!
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಲವಾರು ದಾಖಲೆಯನ್ನು ಅಳಿಸಿಹಾಕುತ್ತಾ ಮುನ್ನುಗ್ಗುತ್ತಿದ್ದಾರೆ. ಇದರ ಜತೆಗೆ ಇದೀಗ ಕುತೂಹಲಕಾರಿಯಾದ ದಾಖಲೆಗೂ ಭಾಜನರಾಗಿದ್ದಾರೆ. ವರ್ಷವೊಂದರ ಅವಧಿಯಲ್ಲಿ ಅತಿಹೆಚ್ಚು ಎಸೆತಗಳನ್ನು ಎದುರಿಸಿದ ಬ್ಯಾಟ್ಸ್‌ಮನ್ ಎನ್ನುವ ದಾಖಲೆಯೂ ವಿರಾಟ್ ಹೆಸರಿನಲ್ಲಿದೆ. ಇನ್ನು ಅತಿಹೆಚ್ಚು ಬಾಲ್ ಎದುರಿಸಿದ ಟಾಪ್ 5 ಆಟಗಾರರ ಪಟ್ಟಿಯಲ್ಲಿ ನಾಲ್ವರು ಕ್ಯಾಪ್ಟನ್‌ಗಳೇ ಸ್ಥಾನ ಪಡೆದಿರುವುದು ಮತ್ತೊಂದು ಅಚ್ಚರಿ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ನವದೆಹಲಿ[ನ.02]: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ, ಸದ್ಯ ವಿಶ್ವ ಶ್ರೇಷ್ಠ ಬ್ಯಾಟ್ಸ್‌ಮನ್ ಎಂದು ಕರೆಸಿಕೊಳ್ಳುತ್ತಿದ್ದಾರೆ. ಅವರ ಈ ಯಶಸ್ಸಿನ ಓಟದ ಹಿಂದೆ ಅಸಾಧಾರಣ ಪರಿಶ್ರಮವಿದೆ. ಕೊಹ್ಲಿ ರಾಶಿ ರಾಶಿ ರನ್ ಕಲೆಹಾಕಲು ಅವರು ಹೆಚ್ಚು ಕಾಲ ಕ್ರೀಸ್‌ನಲ್ಲಿ ಸಮಯ ಕಳೆಯುವುದೇ ಕಾರಣ. ವಿಶೇಷ ಎಂದರೆ ಕಳೆದೊಂದು ವರ್ಷದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿಹೆಚ್ಚು ಎಸೆತಗಳನ್ನು ಎದುರಿಸಿದ ಬ್ಯಾಟ್ಸ್‌ಮನ್ ಗಳ ಪಟ್ಟಿಯಲ್ಲಿ ಕೊಹ್ಲಿ ಅಗ್ರಸ್ಥಾನ ಪಡೆದಿದ್ದಾರೆ.
ದೇವಧರ್ ಟ್ರೋಫಿ: ಮಯಾಂಕ್, ಗಿಲ್ ಅಬ್ಬರದ ಶತಕ
ಪ್ರತಿಷ್ಠಿತ ಕ್ರಿಕೆಟ್ ವೆಬ್‌ಸೈಟ್ ‘ಕ್ರಿಕ್‌ಇನ್ಫೋ’ ತನ್ನ ವಿಶೇಷ ಸಂಚಿಕೆಯಲ್ಲಿ ಕೆಲ ಕುತೂಹಲಕಾರಿ ಅಂಕಿ-ಅಂಶಗಳನ್ನು ಪ್ರಕಟಿಸಿದೆ. 2018ರ ಅಕ್ಟೋಬರ್‌ನಿಂದ 2019ರ ನಡುವೆ ನಡೆದ ಅಂತಾರಾಷ್ಟ್ರೀಯ ಪಂದ್ಯಗಳ ಅಂಕಿ-ಅಂಶಗಳನ್ನು ಪರಿಗಣಿಸಲಾಗಿದೆ. ವಿರಾಟ್ ಈ ಅವಧಿಯಲ್ಲಿ ಒಟ್ಟು 3293 ಎಸೆತಗಳನ್ನು ಎದುರಿಸಿದ್ದರು. ಈ ಅವಧಿಯಲ್ಲಿ ಅವರು 28 ಏಕದಿನ, 8 ಟೆಸ್ಟ್, 10 ಟಿ20 ಪಂದ್ಯಗಳನ್ನು ಆಡಿದ್ದರು. 2ನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ 2791 ಎಸೆತಗಳನ್ನು ಎದುರಿಸಿದ್ದರು. ಇಬ್ಬರ ನಡುವೆ 500ಕ್ಕೂ ಹೆಚ್ಚು ಎಸೆತಗಳ ವ್ಯತ್ಯಾಸವಿರುವುದು ಗಮನಾರ್ಹ ಅಂಶ. 2764 ಎಸೆತಗಳೊಂದಿಗೆ ಇಂಗ್ಲೆಂಡ್‌ನ ಜೋ ರೂಟ್ 3ನೇ ಸ್ಥಾನ ಪಡೆದರೆ, 2741 ಎಸೆತಗಳೊಂದಿಗೆ ಪಾಕಿಸ್ತಾನದ ಬಾಬರ್ ಆಜಂ 4ನೇ ಸ್ಥಾನ, 2716 ಎಸೆತಗಳೊಂದಿಗೆ ಆಸ್ಟ್ರೇಲಿಯಾದ ಉಸ್ಮಾನ್ ಖವಾಜ 5ನೇ ಸ್ಥಾನ ಪಡೆದಿದ್ದಾರೆ.
ವಿಶ್ವಕಪ್ 2019: ಧವನ್ ದಾಖಲೆ ಅಳಿಸಿಹಾಕಿದ ಬಾಬರ್ ಅಜಂ..!
5 ಕ್ರಿಕೆಟಿಗರಲ್ಲಿ ನಾಲ್ವರು ನಾಯಕರು: ಅತಿ ಹೆಚ್ಚು ಎಸೆತಗಳನ್ನು ಎದುರಿಸಿದ ಟಾಪ್ 5 ಆಟಗಾರರಲ್ಲಿ ಅಗ್ರ 4 ಬ್ಯಾಟ್ಸ್’ಮನ್ ಗಳು ತಂಡದ ನಾಯಕರೆನಿಸಿದ್ದಾರೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಕಿವೀಸ್ ನಾಯಕ ವಿಲಿಯಮ್ಸನ್, ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಜೋ ರೂಟ್ ಹಾಗೂ ಪಾಕಿಸ್ತಾನದ ಟಿ20 ನಾಯಕ ಬಾಬರ್ ಅಜಂ ಈ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ವಿಶೇಷ.
ನಾಯಕತ್ವದಿಂದ ಸರ್ಫರಾಜ್’ಗೆ ಗೇಟ್ ಪಾಸ್ ನೀಡಿದ ಪಾಕ್..!
ಇದೇ ಅವಧಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅತಿಹೆಚ್ಚು ಎಸೆತ ಬೌಲ್ ಮಾಡಿದ ಬೌಲರ್ ಎನ್ನುವ ಹಿರಿಮೆಗೆ ಆಸ್ಟ್ರೇಲಿಯಾದ ಸ್ಪಿನ್ನರ್ ನೇಥನ್ ಲಯನ್ ಪಾತ್ರರಾಗಿದ್ದಾರೆ. ಅವರು 4994 ಎಸೆತಗಳನ್ನು ಬೌಲ್ ಮಾಡಿದ್ದರು. ಅಗ್ರ 5ರಲ್ಲಿ ಆಸ್ಟ್ರೇಲಿಯಾದ ಮೂವರು ಬೌಲರ್‌ಗಳಿದ್ದು, ಭಾರತದ ಯಾವೊಬ್ಬರೂ ಸ್ಥಾನ ಪಡೆದಿಲ್ಲ.
ಇನ್‌ಗ್ರಾಂ ಬ್ಯುಸಿ ಟಿ20 ಕ್ರಿಕೆಟಿಗ! ದ.ಆಫ್ರಿಕಾದ ಮಾಜಿ ಕ್ರಿಕೆಟಿಗ ಕಾಲಿನ್ ಇನ್‌ಗ್ರಾಂ ಕಳೆದ ಅಕ್ಟೋಬರ್‌ನಿಂದ ಈ ವರ್ಷ ಸೆಪ್ಟೆಂಬರ್ ವರೆಗೂ ಅತಿಹೆಚ್ಚು ಟಿ20 ಪಂದ್ಯಗಳನ್ನು ಆಡಿದ್ದರು. 65 ಪಂದ್ಯಗಳೊಂದಿಗೆ ಅವರು ಮೊದಲ ಸ್ಥಾನದಲ್ಲಿದ್ದಾರೆ. ಆಫ್ಘಾನಿಸ್ತಾನದ ರಶೀದ್ ಖಾನ್ 58 ಪಂದ್ಯಗಳೊಂದಿಗೆ 2ನೇ ಸ್ಥಾನದಲ್ಲಿದ್ದಾರೆ. ಅಗ್ರ 5ರಲ್ಲಿ ಭಾರತದ ಯಾವ ಆಟಗಾರನಿಗೂ ಸ್ಥಾನ ಸಿಕ್ಕಿಲ್ಲ.
ಆಫ್ಘನ್ನರಿಗೆ ಹೆಚ್ಚು ಬೇಡಿಕೆ! ಕೊನೆ ಪಕ್ಷ 6 ದೇಶಗಳಲ್ಲಿ ಆಡಿದ 45 ಆಟಗಾರರ ಪೈಕಿ 12 ಆಟಗಾರರು ಆಫ್ಘಾನಿಸ್ತಾನದವರು ಎನ್ನುವುದು ವಿಶೇಷ. ಆಫ್ಘನ್‌ನ 19 ವರ್ಷದ ಸ್ಪಿನ್ನರ್ ಕಯಾಸ್ ಅಹ್ಮದ್ ವಿಶ್ವದ 8 ವಿವಿಧ ತಂಡಗಳ ಪರ ಆಡಿದ ಹಿರಿಮೆಗೆ ಪಾತ್ರರಾಗಿದ್ದರು.
ಅತಿಹೆಚ್ಚು ಪ್ರಯಾಣ ಮಾಡಿದ ಸಂದೀಪ್!
ನೇಪಾಳದ ಲೆಗ್ ಸ್ಪಿನ್ನರ್ ಸಂದೀಪ್ ಲಮಿಚ್ಚಾನೆ ಒಂದು ವರ್ಷ ಅವಧಿಯಲ್ಲಿ ಅತಿ ಹೆಚ್ಚು ಪ್ರಯಾಣ ಮಾಡಿದ ಕ್ರಿಕೆಟಿಗ. ಅವರು 8 ಬೇರೆ ಬೇರೆ ದೇಶಗಳಲ್ಲಿ ಕ್ರಿಕೆಟ್ ಆಡಿದರು. ವಿಶ್ವದ ಅಗ್ರ ಟಿ20 ಟೂರ್ನಿಗಳಾದ ಐಪಿಎಲ್, ಬಿಗ್‌ಬ್ಯಾಶ್, ಕೆರಿಬಿಯನ್ ಪ್ರೀಮಿಯರ್ ಲೀಗ್, ಬಾಂಗ್ಲಾ ಪ್ರೀಮಿಯರ್ ಲೀಗ್, ಪಾಕಿಸ್ತಾನ ಪ್ರೀಮಿಯರ್ ಲೀಗ್ ನಲ್ಲಿ ಪಾಲ್ಗೊಂಡಿದ್ದ ಸಂದೀಪ್, ನೇಪಾಳ ಪರ 11 ಟಿ20, 3 ಏಕದಿನ ಪಂದ್ಯಗಳಲ್ಲಿ ಪಾಲ್ಗೊಂಡಿದ್ದರು.