ಬಾಲಿವುಡ್ ಹೀರೋಯಿನ್ಸ್ ಹೃದಯಕದ್ದ ಟಾಪ್ 5 ಕ್ರಿಕೆಟಿಗರಿವರು..!

First Published 25, Oct 2019, 5:50 PM IST

ಭಾರತದಲ್ಲಿ ಕ್ರಿಕೆಟ್ ಹಾಗೂ ಚಿತ್ರರಂಗ ತನ್ನದೇ ಆದ ಅಭಿಮಾನಿ ವರ್ಗವನ್ನು ಹೊಂದಿದೆ. ಕ್ರಿಕೆಟಿಗರನ್ನು ಹಾಗೂ ಸಿನಿಮಾ ನಟ-ನಟಿಯರನ್ನು ಆರಾಧಿಸುವಂತಹ ಅಭಿಮಾನಿ ಬಳಗ ಬಹುಶಃ ಬೇರೆಲ್ಲೂ ಕಾಣಲು ಸಿಗುವುದಿಲ್ಲವೇನೋ. ಕೆಲವು ಕ್ರಿಕೆಟಿಗರು ಹಾಗೂ ನಟಿಯರು ತಮ್ಮ ಕ್ಷೇತ್ರವನ್ನು ಆಳುತ್ತಿದ್ದಾರೆ ಎಂದರೆ ಅತಿಶಯೋಕ್ತಿಯಲ್ಲ.

ಇದರ ಹೊರತಾಗಿಯೂ ಬಾಲಿವುಡ್ ನಟಿಯರು, ಟೀಂ ಇಂಡಿಯಾ ಕ್ರಿಕೆಟಿಗರಿಗೆ ಅಭಿಮಾನಿಗಳಾಗಿದ್ದಾರೆ. ಈ ಸಂದರ್ಭದಲ್ಲಿ  ಬಾಲಿವುಡ್ ಹೀರೋಯಿನ್ಸ್ ಹೃದಯಗೆದ್ದ ಟೀಂ ಇಂಡಿಯಾದ ಟಾಪ್ 5 ಕ್ರಿಕೆಟಿಗರ ಪಟ್ಟಿಯನ್ನು ಸುವರ್ಣ ನ್ಯೂಸ್.ಕಾಂ ನಿಮ್ಮ ಮುಂದಿಡುತ್ತಿದೆ.

ದೀಪಿಕಾ ಪಡುಕೋಣೆ- MS ಧೋನಿ

ದೀಪಿಕಾ ಪಡುಕೋಣೆ- MS ಧೋನಿ

ಐಶ್ವರ್ಯ- ಪದ್ಮಾವತ್’ವರೆಗೂ ಮಿಂಚಿರುವ ದೀಪಿಕಾ ಪಡುಕೋಣೆ, ಧೋನಿಯ ಅಭಿಮಾನಿ. ಕೆಲ ವರ್ಷಗಳ ಹಿಂದೆ ಧೋನಿ ಜತೆ ದೀಪಿಕಾ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬಿತ್ತು.

2. ಪ್ರಿಯಾಂಕ ಚೋಪ್ರಾ-ರೋಹಿತ್ ಶರ್ಮಾ

2. ಪ್ರಿಯಾಂಕ ಚೋಪ್ರಾ-ರೋಹಿತ್ ಶರ್ಮಾ

ಬಾಲಿವುಡ್ ಮಾತ್ರವಲ್ಲ ಹಾಲಿವುಡ್’ನಲ್ಲೂ ಕೈ ಆಡಿಸಿರುವ ಪ್ರಿಯಾಂಕ ಚೋಪ್ರಾ, ತನ್ನ ದಿಟ್ಟ ನಿಲುವುಗಳ ಮೂಲಕ ಸದಾ ಸುದ್ದಿಯಲ್ಲಿರುತ್ತಾರೆ. ತಾವು ರೋಹಿತ್ ಶರ್ಮಾ ಹುಚ್ಚು ಅಭಿಮಾನಿ ಎಂದು ಖಾಸಗಿ ಚಾನೆಲ್’ನಲ್ಲಿ ಪ್ರಿಯಾಂಕ ಗುಟ್ಟು ಬಿಚ್ಚಿಟ್ಟಿದ್ದಾರೆ.

ಸೋನಮ್ ಕಪೂರ್-ವಿರಾಟ್ ಕೊಹ್ಲಿ

ಸೋನಮ್ ಕಪೂರ್-ವಿರಾಟ್ ಕೊಹ್ಲಿ

ಸಾಮಾಜಿಕ ಜಾಲತಾಣಗಳಲ್ಲಿ ಅತಿಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟಿಯರಲ್ಲಿ ಸೋನಮ್ ಕಪೂರ್ ಕೂಡಾ ಒಬ್ಬರು. ನೀರ್ಜಾದಂತಹ ಸ್ತ್ರೀ ಪ್ರಧಾನ ಚಿತ್ರದಲ್ಲಿ ನಟಿಸಿರುವ ಸೋನಮ್’ಗೆ ವಿರಾಟ್ ಕೊಹ್ಲಿ ಅಂದ್ರೆ ಇಷ್ಟವಂತೆ. ಕೊಹ್ಲಿಯ ಆಟದ ಮೇಲಿನ ಬದ್ಧತೆಗೆ ಸೋನಮ್ ಫಿದಾ ಆಗಿದ್ದಾರೆ.

4. ಕತ್ರೀನ ಕೈಫ್-ರಾಹುಲ್ ದ್ರಾವಿಡ್

4. ಕತ್ರೀನ ಕೈಫ್-ರಾಹುಲ್ ದ್ರಾವಿಡ್

2003ರಲ್ಲಿ ಬಾಲಿವುಡ್’ಗೆ ಎಂಟ್ರಿ ಕೊಟ್ಟಿರುವ ಕತ್ರೀನ ಈಗಲೂ ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಐಪಿಎಲ್ ಆರಂಭದ ದಿನಗಳಲ್ಲಿ RCB ಅಂಬಾಸಿಡರ್ ಆಗಿ ಗುರುತಿಸಿಕೊಂಡಿದ್ದ ಕತ್ರೀನ, ದ್ರಾವಿಡ್ ಮ್ಯಾನರಿಸಂಗೆ ಮನಸೋತಿದ್ದರಂತೆ.

5. ಸೋನಾಕ್ಷಿ ಸಿನ್ಹಾ-ಸುರೇಶ್ ರೈನಾ

5. ಸೋನಾಕ್ಷಿ ಸಿನ್ಹಾ-ಸುರೇಶ್ ರೈನಾ

ತಮ್ಮ ಬೋಲ್ಡ್ ನಟನೆಯ ಮೂಲಕ ತನ್ನದೇ ಆದ ಅಭಿಮಾನಿಗಳನ್ನು ಹೊಂದಿರುವ ಸೋನಾಕ್ಷಿ ಸಿನ್ಹಾಗೆ ಟೀಂ ಇಂಡಿಯಾದ ಸ್ಟೈಲೀಶ್ ಬ್ಯಾಟ್ಸ್’ಮನ್ ಸುರೇಶ್ ರೈನಾ ಕಂಡ್ರೆ ಇಷ್ಟವಂತೆ. ಅದರಲ್ಲೂ ರೈನಾ ಬ್ಯಾಟಿಂಗ್ ಕಣ್ಮಿಟುಕಿಸದೇ ನೋಡುತ್ತಾರಂತೆ ಸೋನಾಕ್ಷಿ ಸಿನ್ಹಾ.

loader