ಬಾಲ್ ಟ್ಯಾಂಪರಿಂಗ್: ಮತ್ತೊಬ್ಬ ಕ್ರಿಕೆಟಿಗ ಬ್ಯಾನ್..!
ಬಾಲ್ ಟ್ಯಾಂಪರಿಂಗ್ ಮಾಡಿ ಸಿಕ್ಕಿಬಿದ್ದ ವಾರ್ನರ್, ಸ್ಮಿತ್ ಬಿಕ್ಕಿ ಬಿಕ್ಕು ಅತ್ತಿದನ್ನು ಮರೆಯುವ ಮುನ್ನವೇ ಮತ್ತೊಬ್ಬ ಕ್ರಿಕೆಟಿಗನೀಗ ಚೆಂಡು ವಿರೂಪಗೊಳಿಸಿ ನಿಷೇಧ ಶಿಕ್ಷೆಗೆ ಗುರಿಯಾದ್ದಾನೆ. ಅಷ್ಟಕ್ಕೂ ಯಾರು ಆ ಕ್ರಿಕೆಟಿಗ, ಎಷ್ಟು ಪಂದ್ಯಗಳ ಮಟ್ಟಿಗೆ ನಿಷೇಧ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ...
ದುಬೈ(ನ.10): ಚೆಂಡು ವಿರೂಪ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ವೆಸ್ಟ್ ಇಂಡೀಸ್ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ನಿಕೋಲಸ್ ಪೂರನ್ 4 ಪಂದ್ಯಗಳ ಅಮಾನತು ಶಿಕ್ಷೆಗೆ ಒಳಗಾಗಿದ್ದಾರೆ.
ಮತ್ತೊಂದು ಬಾಲ್ ಟ್ಯಾಂಪರಿಂಗ್ ಪ್ರಕರಣ; ಪಾಕ್ ಕ್ರಿಕೆಟಿಗನಿಗೆ ದಂಡ!
ಸೋಮವಾರ ಲಖನೌನಲ್ಲಿ ನಡೆದಿದ್ದ ಆಫ್ಘಾನಿಸ್ತಾನ ವಿರುದ್ಧದ 3ನೇ ಏಕದಿನದಲ್ಲಿ ಉಗುರಿನಿಂದ ಚೆಂಡಿನ ಸೀಮ್ ಕಿತ್ತು ವಿರೂಪಗೊಳಿಸಿದ್ದಾಗಿ ಪೂರಾನ್ ತಪ್ಪೊಪ್ಪಿಕೊಂಡಿದ್ದಾರೆ. 5 ಋುಣಾತ್ಮಕ ಅಂಕಗಳಿಗೂ ಅವರು ಗುರಿಯಾಗಿದ್ದಾರೆ.
ಇಂಗ್ಲೆಂಡ್ ಫ್ಯಾನ್ಸ್‌ಗೆ ವಾರ್ನರ್ ತಕ್ಕ ಉತ್ತರ!
ಆಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಯಿಂದ ಪೂರನ್ ಹೊರಗುಳಿಯಲಿದ್ದಾರೆ. ಪೂರನ್ ವಿರುದ್ಧ ವಿಂಡೀಸ್ ಕ್ರಿಕೆಟ್ ಮಂಡಳಿ ಸಹ ಕ್ರಮಕೈಗೊಳ್ಳುವ ಸಾಧ್ಯತೆ ಇದೆ. ಈ ಹಿಂದಿನ ಬಾಲ್ ಟ್ಯಾಂಪರಿಂಗ್ ಬಗೆಗಿನ ಒಂದು ಮೆಲುಕು ಇಲ್ಲಿದೆ ನೋಡಿ...