ಮತ್ತೊಂದು ಬಾಲ್ ಟ್ಯಾಂಪರಿಂಗ್ ಪ್ರಕರಣ; ಪಾಕ್ ಕ್ರಿಕೆಟಿಗನಿಗೆ ದಂಡ!
ಆಸ್ಟ್ರೇಲಿಯಾ ನಾಯಕ ಸ್ಟೀವ್ ಸ್ಮೀತ್ ಹಾಗೂ ಡೇವಿಡ್ ವಾರ್ನರ್ ಬಾಲ್ ಟ್ಯಾಂಪರಿಂಗ್ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಟ್ಯಾಂಪರಿಂಗ್ ಪ್ರಕರಣಗಳ ಬೆಲಕಿಗೆ ಬಂದಿದೆ.
ಕರಾಚಿ(ನ.02): ಕ್ರಿಕೆಟ್‌ನಲ್ಲಿ ಬಾಲ್ ಟ್ಯಾಂಪರಿಂಗ್ ಮಹಾ ಅಪರಾಧ. 2018ರಲ್ಲಿ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ಬಾಲ್ ಟ್ಯಾಂಪರಿಂಗ್ ಆರೋಪದಿಂದ ಪಟ್ಟ ಪಾಡು ಯಾರಿಗೆ ತಾನೆ ಗೊತ್ತಿಲ್ಲ. ಒಂದು ವರ್ಷ ನಿಷೇಧಕ್ಕೊಳಗಾಗಿದ್ದ ಆಸೀಸ್ ಕ್ರಿಕೆಟಿಗರು ಹೆಜ್ಜೆ ಹೆಜ್ಜೆಗೂ ಅವಮಾನ ಅನುಭವಿಸಿದ್ದಾರೆ. ಈ ಘಟನೆ ಮಾಸುವ ಮುನ್ನವೇ ಇದೀಗ ಪಾಕಿಸ್ತಾನ ಕ್ರಿಕೆಟ್‌ನಲ್ಲಿ ಬಾಲ್ ಟ್ಯಾಂಪರಿಂಗ್ ನಡೆದಿರುವುದು ದೃಢಪಟ್ಟಿದೆ.
ಇದನ್ನೂ ಓದಿ: ಇಂಡೋ-ಆಸೀಸ್ ವಿಶ್ವಕಪ್ ಪಂದ್ಯ- ಬಾಲ್ ಟ್ಯಾಂಪರ್ ಮಾಡಿದ್ರಾ ಝಂಪಾ?
ಪಾಕಿಸ್ತಾನ ಕ್ರಿಕೆಟಿಗ ಅಹಮ್ಮದ್ ಶೆಹಝಾದ್ ಮೇಲೆ ಗಂಭೀರ ಆರೋಪ ಕೇಳಿ ಬಂದಿದೆ. ಬಾಲ್ ಟ್ಯಾಂಪರಿಂಗ್ ನಡೆಸಿದ ಕಾರಣಕ್ಕೆ ಶೆಹಜಾದ್‌ಗೆ ಪಂದ್ಯದ ಶೇಕಡಾ 50 ರಷ್ಟು ದಂಡ ವಿಧಿಸಲಾಗಿದೆ. ಪಾಕಿಸ್ತಾನದ ದೇಸಿ ಟೂರ್ನಿಯಲ್ಲಿ ಸಿಂಧ್ ತಂಡದ ನಾಯಕ ಅಹಮ್ಮದ್ ಶೆಹಝಾದ್ ಬಾಲ್ ಟ್ಯಾಂಪರಿಂಗ್ ನಡೆಸಿದ್ದಾರೆ ಎಂದು ಮ್ಯಾಚ್ ರೆಫ್ರಿ ಆರೋಪಿಸಿದ್ದಾರೆ. ಬಾಲ್ ವಿರೂಪಗೊಳಿಸಿರುವುದು ದೃಢಪಟ್ಟ ಹಿನ್ನಲೆಯಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ದಂಡ ವಿಧಿಸಿದೆ.
ಇದನ್ನೂ ಓದಿ: ಬಾಲ್ ಟ್ಯಾಂಪರಿಂಗ್ - ಇಂಗ್ಲೆಂಡ್ ಕಹಿ ಸತ್ಯ ಬಹಿರಂಗ!
ಪಂದ್ಯದ 17ನೇ ಓವರ್‌ನಲ್ಲಿ ಬಾಲ್ ಪರಿಶೀಲಿಸಿದ ಅಂಪೈರ್ ವಿರೂಪಗೊಂಡಿರುವುದನ್ನು ಖಚಿತಪಡಿಸಿದ್ದಾರೆ. ತಕ್ಷಣವೇ ಮ್ಯಾಚ್ ರೆಫ್ರಿ ಆಗಮಿಸಿ ಚೆಂಡನ್ನು ಪರೀಕ್ಷಿಸಿದ್ದಾರೆ. ಬಳಿಕ ಪಿಸಿಬಿಗೆ ವರದಿ ನೀಡಿದ್ದಾರೆ. ರೆಫ್ರಿ ವರದಿ ಆಧರಿಸಿ, ಪಿಸಿಬಿ, ಪಂದ್ಯದ ಶೇಕಡಾ 50 ರಷ್ಟು ಸಂಭಾವನೆ ವಿಧಿಸಿದ್ದಾರೆ.
ಕ್ರಿಕೆಟ್ ಅಹಮ್ಮದ್ ಶೆಹಝಾದ್ ಆರೋಪವನ್ನು ನಿರಾಕರಿಸಿದ್ದಾರೆ. ಹಾರ್ಡ್ ಫೀಲ್ಡ್‌ನಲ್ಲಿ ಆಡುತ್ತಿರುವ ಕಾರಮ ಸಹಜವಾಗಿ ಬಾಲ್ ವಿರೂಪಗೊಂಡಿದೆ. ಇದರಲ್ಲಿ ತಂಡ ಹಾಗೂ ಆಟಗಾರರ ಪಾತ್ರ ಇಲ್ಲ ಎಂದು ಅಹಮ್ಮದ್ ಶೆಹಝಾದ್ ಸ್ಪಷ್ಟಪಡಿಸಿದ್ದಾರೆ.