ಕ್ರಿಕೆಟ್ ಕಾಶಿ ಈಡನ್’ನಲ್ಲಿಂದು ಡೇ & ನೈಟ್ ಟೆಸ್ಟ್

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಪ್ರಯತ್ನದ ಫಲವಾಗಿ, ಟೀಂ ಇಂಡಿಯಾ ಇದೇ ಮೊದಲ ಬಾರಿಗೆ ಅಹರ್ನಿಶಿ ಟೆಸ್ಟ್ ಪಂದ್ಯವಾಡಲು ರೆಡಿಯಾಗಿದೆ. ಈ ಪಂದ್ಯಕ್ಕೆ ಈಡನ್ ಗಾರ್ಡನ್ಸ್ ಮೈದಾನ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ.

First Published Nov 22, 2019, 10:06 AM IST | Last Updated Nov 22, 2019, 10:06 AM IST

ಬೆಂಗಳೂರು[ನ.22]: ಭಾರತದ ಕ್ರಿಕೆಟ್ ಕಾಶಿ ಎಂದೇ ಕರೆಸಿಕೊಳ್ಳುವ ಕೋಲ್ಕತಾದ ಈಡನ್ ಗಾರ್ಡನ್ಸ್’ನಲ್ಲಿಂದು ಐತಿಹಾಸಿಕ ಹಗಲು ರಾತ್ರಿ ಟೆಸ್ಟ್ ಪಂದ್ಯ ಆರಂಭವಾಗಲಿದ್ದು, ಭಾರತ-ಬಾಂಗ್ಲಾದೇಶ ತಂಡಗಳು ಕಾದಾಡಲಿವೆ.

ಐತಿಹಾಸಿಕ ಪಿಂಕ್ ಬಾಲ್ ಟೆಸ್ಟ್‌; ಯಾರಿಗೆ ಚಾನ್ಸ್? ಇಲ್ಲಿದೆ ಸಂಭವನೀಯ ತಂಡ!

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಪ್ರಯತ್ನದ ಫಲವಾಗಿ, ಟೀಂ ಇಂಡಿಯಾ ಇದೇ ಮೊದಲ ಬಾರಿಗೆ ಅಹರ್ನಿಶಿ ಟೆಸ್ಟ್ ಪಂದ್ಯವಾಡಲು ರೆಡಿಯಾಗಿದೆ. ಈ ಪಂದ್ಯಕ್ಕೆ ಈಡನ್ ಗಾರ್ಡನ್ಸ್ ಮೈದಾನ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ.

ಈಡನ್‌ನಲ್ಲಿ ಟೀಂ ಇಂಡಿಯಾ ಕಠಿಣ ಅಭ್ಯಾ​ಸ

ಇಂಗ್ಲೆಂಡ್’ನಾಚೆಗೆ ಏಕದಿನ ವಿಶ್ವಕಪ್ ಫೈನಲ್’ಗೆ ಮೊದಲ ಬಾರಿಗೆ ಆತಿಥ್ಯ ವಹಿಸಿ ದಾಖಲೆ ಬರೆದಿದ್ದ, ಈಡನ್ ಈಗಾಗಲೇ ಹಲವು ಐತಿಹಾಸಿಕ ಪಂದ್ಯಗಳಿಗೆ ಸಾಕ್ಷಿಯಾಗಿದ್ದು, ಇದೀಗ ಮತ್ತೊಂದು ಚಾರಿತ್ರಿಕ ಪಂದ್ಯಕ್ಕೆ ಸಾಕ್ಷಿಯಾಗಲಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ..