ಈಡನ್‌ನಲ್ಲಿ ಟೀಂ ಇಂಡಿಯಾ ಕಠಿಣ ಅಭ್ಯಾಸ
ಹಗಲು-ರಾತ್ರಿ ಟೆಸ್ಟ್ ಪಂದ್ಯ ಆರಂಭಕ್ಕೂ ಮುನ್ನ ಟೀಂ ಇಂಡಿಯಾ ಆಟಗಾರರು ನೆಟ್ಸ್‌ನಲ್ಲಿ ಭರ್ಜರಿ ಬೆವರು ಹರಿಸಿದ್ದಾರೆ. ವಿರಾಟ್ ಕೊಹ್ಲಿ ವೇಗಿ ಶಮಿ ಬೌಲಿಂಗ್ ಎದುರಿಸಲು ತಡುಕಾಡಿದರು. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಕೋಲ್ಕತಾ[ನ.21]: ಶುಕ್ರವಾರದಿಂದ ಇಲ್ಲಿನ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆಯಲಿರುವ ಬಾಂಗ್ಲಾದೇಶ ವಿರುದ್ಧದ ಹಗಲು-ರಾತ್ರಿ ಟೆಸ್ಟ್ ಪಂದ್ಯಕ್ಕೆ ಭಾರತ ತಂಡ ಕಠಿಣ ಅಭ್ಯಾಸ ನಡೆಸಿದೆ.
ವಿಂಡೀಸ್ ಸರಣಿ: ರೋಹಿತ್‌ಗೆ ವಿಶ್ರಾಂತಿ, ಧವನ್‌ಗೆ ಕೊಕ್?
ಮಂಗಳವಾರ ಇಲ್ಲಿಗೆ ಆಗಮಿಸಿದ ಭಾರತ ತಂಡ, ಬುಧವಾರ ಫ್ಲಡ್‌ಲೈಟ್‌ನಲ್ಲಿ ಅಭ್ಯಾಸ ನಡೆಸಿತು. ನಾಯಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಚೇತೇಶ್ವರ್ ಪೂಜಾರ, ಮಯಾಂಕ್ ಅಗರ್‌ವಾಲ್, ಅಜಿಂಕ್ಯ ರಹಾನೆ ಹೆಚ್ಚು ಕಾಲ ನೆಟ್ಸ್‌ನಲ್ಲಿ ಬೆವರಿಳಿಸಿದರು. ವಿರಾಟ್ ಕೊಹ್ಲಿಗೆ ತಂಡದ ಮುಂಚೂಣಿ ವೇಗಿ ಮೊಹಮದ್ ಶಮಿಯನ್ನು ಎದುರಿಸುವುದು ಕಷ್ಟವೆನಿಸಿತು. ಶಮಿಯ ಸ್ವಿಂಗ್ ದಾಳಿಯ ಎದುರು ಕೊಹ್ಲಿ ಹೆಚ್ಚು ರಕ್ಷಣಾತ್ಮಕವಾಗಿ ಆಡಿದರು.
ಡೇ & ನೈಟ್ ಟೆಸ್ಟ್: ಪಿಂಕ್ ಬಾಲ್ ತಯಾರಿಕೆ ಹೇಗಿದೆ? ಇಲ್ಲಿದೆ ವಿಶೇಷತೆ!
ವಿಕೆಟ್ ಕೀಪರ್ ವೃದ್ಧಿಮಾನ್ ಸಾಹ, ಆಲ್ರೌಂಡರ್‌ಗಳಾದ ಆರ್.ಅಶ್ವಿನ್ ಹಾಗೂ ರವೀಂದ್ರ ಜಡೇಜಾ ಸಹ ಕಠಿಣ ಅಭ್ಯಾಸ ನಡೆಸಿದರು. ಶಮಿ ಜತೆ ವೇಗಿಗಳಾದ ಇಶಾಂತ್ ಶರ್ಮಾ ಹಾಗೂ ಉಮೇಶ್ ಯಾದವ್ ಸಹ ಹೆಚ್ಚು ಸಮಯ ನೆಟ್ಸ್‌ನಲ್ಲಿ ಕಳೆದರು. ಮೀಸಲು ವಿಕೆಟ್ ಕೀಪರ್ ರಿಷಭ್ ಪಂತ್ ಸಹ ಹೆಚ್ಚು ಕಾಲ ಅಭ್ಯಾಸದಲ್ಲಿ ತೊಡಗಿದರು. ಕೋಚ್ ರವಿಶಾಸ್ತ್ರಿ, ಬ್ಯಾಟಿಂಗ್ ಕೋಚ್ ವಿಕ್ರಂ ರಾಥೋಡ್, ಬೌಲಿಂಗ್ ಕೋಚ್ ಭರತ್ ಅರುಣ್ ಆಟಗಾರರಿಗೆ ಸಲಹೆ ನೀಡಿದರು. ಗುರುವಾರ 2ನೇ ಸುತ್ತಿನ ಅಭ್ಯಾಸವನ್ನು ಭಾರತ ತಂಡ ನಡೆಸಲಿದೆ.