ಜಗದೀಶನ್ ಜೊತೆ ವಿಶ್ವದಾಖಲೆ ಆಟದಲ್ಲಿ ನಾನಿದ್ದೇನೆ ಅನ್ನೋದೆ ಹೆಮ್ಮೆ, ಕ್ರಿಕೆಟಿಗ ಸಾಯಿ ಪ್ರತಿಕ್ರಿಯೆ!
ಎನ್ ಜಗದೀಶನ್ ವಿಶ್ವದಾಖಲೆ ಪ್ರದರ್ಶನದ ಜೊತೆಯಾಟದಲ್ಲಿ ನಾನು ಇದ್ದೇನೆ ಅನ್ನೋದು ನನಗೆ ಹೆಮ್ಮೆಯ ವಿಚಾರ. ತಂಡದಲ್ಲಿನ ಉತ್ತಮ ವಾತಾವರಣ, ಆಟಗಾರರ ನಡುವಿನ ಹೊಂದಾಣಿಕೆ, ಕಠಿಣ ಅಭ್ಯಾಸ ಹಾಗೂ ಪರಿಶ್ರಮ ಈ ಸಾಧನೆಗೆ ಕಾರಣ ಎಂದು ಸಾಯಿ ಹೇಳಿದ್ದಾರೆ. ಏಷ್ಯಾನೆಟ್ ಸುವರ್ಣನ್ಯೂಸ್ ಜೊತೆ ಸಾಯಿ ಸುದರ್ಶನ್ ಮಾತುಕತೆ ಇಲ್ಲಿದೆ.
ಅರುಣಾಚಲ ಪ್ರದೇಶ ವಿರುದ್ಧದ ವಿಜಯ್ ಹಜಾರೆ ಪಂದ್ಯದಲ್ಲಿ ತಮಿಳುನಾಡು ಬ್ಯಾಟ್ಸ್‌ಮನ್ ಎನ್ ಜಗದೀಶನ್ 277 ರನ್ ಸಿಡಿಸಿ ವಿಶ್ವದಾಖಲೆ ನಿರ್ಮಿಸಿದ್ದಾರೆ. ಇದರ ಜೊತೆಗೆ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಗರಿಷ್ಠ ಜೊತೆಯಾಟದ ದಾಖಲೆಯೂ ನಿರ್ಮಾಣವಾಗಿದೆ. ಜಗದೀಶನ್‌ಗೆ ಅತ್ಯುತ್ತಮ ಸಾಥ್ ನೀಡುವ ಮೂಲಕ ಹೊಸ ದಾಖಲೆ ನಿರ್ಮಿಸಿರುವ ಸಾಯಿ ಸುದರ್ಶನ್, ಈಗಾಗಲೇ 3 ಶತಕದ ಮೂಲಕ ಮಿಂಚಿದ್ದಾರೆ. ಜಗದೀಶನ್ ವಿಶ್ವದಾಖಲೆ ಆಟ, ವಿಜಯ್ ಹಜಾರೆ ಟೂರ್ನಿಯಲ್ಲಿ ಸಾಯಿ ಸುದರ್ಶನ್ ಪ್ರದರ್ಶನದ ಕುರಿತು ಏಷ್ಯಾನೆಟ್ ಸುವರ್ಣನ್ಯೂಸ್ ಜೊತೆ ಸಂತಸ ಹಂಚಿಕೊಂಡಿದ್ದಾರೆ.