Asianet Suvarna News Asianet Suvarna News

ಕ್ವಾರಂಟೈನ್ ಮೀರಿದ್ರೆ, ಜೈಲಿಗೆ ಹೋಗ್ತೀರಾ ಹುಷಾರ್: ಡಿಜಿ & ಐಜಿಪಿ ಪ್ರವೀಣ್ ಸೂದ್ ಖಡಕ್ ವಾರ್ನಿಂಗ್

ಕಳೆದ 5 ದಿನಗಳ ಹಿಂದೆ ದೇಶದ ಪ್ರಧಾನಿ ನರೇಂದ್ರ ಮೋದಿ 21 ದಿನಗಳ ಕಾಲ ಮನೆಯಲ್ಲೇ ಇರಿ ಎಂದು ಮನವಿ ಮಾಡಿಕೊಂಡಿದ್ದಾರೆ. ಜನರ ಹಿತದೃಷ್ಟಿಯಿಂದ ಪ್ರಧಾನಿ ಮನವಿ ಮಾಡಿಕೊಂಡಿದ್ದಾರೆ. ಎಲ್ಲ ಸಮುದಾಯದ ಜನರು ಬೆಂಬಲ ನೀಡುತ್ತಿದ್ದಾರೆ, ದೇಶದ ಜನರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಪ್ರವೀಣ್ ಸೂದ್ ತಿಳಿಸಿದ್ದಾರೆ.

ಬೆಂಗಳೂರು(ಮಾ.29): ಕ್ವಾರಂಟೈನ್ ಮೀರಿದ್ರೆ, ಜೈಲಿಗೆ ಹೋಗ್ತೀರಾ ಹುಷಾರ್, ಆಟ ಆಡ್ಬೇಡಿ ಎಂದು ರಾಜ್ಯ ಡಿಜಿ ಮತ್ತು ಐಜಿಪಿ ಪ್ರವೀಣ್ ಸೂದ್ ಎಚ್ಚರಿಕೆ ರವಾನಿಸಿದ್ದಾರೆ. ಸುವರ್ಣ ನ್ಯೂಸ್‌ ಜತೆ ಎಕ್ಸ್‌ಕ್ಲೂಸಿವ್ ಆಗಿ ಮಾತನಾಡಿದ ಅವರು ಮನೆಯಲ್ಲಿದ್ದರೆ ಮಾತ್ರ ಸೇಫ್ ಎಂದು ಬೇಕಾಬಿಟ್ಟಿ ತಿರುಗುವವರಿಗೆ ಎಚ್ಚರಿಕೆ ರವಾನಿಸಿದ್ದಾರೆ.

ಹೊರಗೆ ಹೋಗ್ಬೇಡಿ ಎಂದ್ರು ಕೇಳದೇ ಹೋಗಿ ಯುವಕರಿಬ್ಬರು ಪ್ರಾಣ ಕಳೆದುಕೊಂಡ್ರು..!

ಕೊರೋನಾ ವೈರಸ್ ತಡೆಗಟ್ಟುವ ಮುನ್ನೆಚ್ಚರಿಕಾ ಕ್ರಮವಾಗಿ ಕಳೆದ 5 ದಿನಗಳ ಹಿಂದೆ ದೇಶದ ಪ್ರಧಾನಿ ನರೇಂದ್ರ ಮೋದಿ 21 ದಿನಗಳ ಕಾಲ ಮನೆಯಲ್ಲೇ ಇರಿ ಎಂದು ಮನವಿ ಮಾಡಿಕೊಂಡಿದ್ದಾರೆ. ಜನರ ಹಿತದೃಷ್ಟಿಯಿಂದ ಪ್ರಧಾನಿ ಮನವಿ ಮಾಡಿಕೊಂಡಿದ್ದಾರೆ. ಎಲ್ಲ ಸಮುದಾಯದ ಜನರು ಬೆಂಬಲ ನೀಡುತ್ತಿದ್ದಾರೆ, ದೇಶದ ಜನರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಪ್ರವೀಣ್ ಸೂದ್ ತಿಳಿಸಿದ್ದಾರೆ.

ರಾಜಾಜ್ಞೆ ತಂದ ನಿಟ್ಟುಸಿರು, ಮಧ್ಯಮ ವರ್ಗದವರಿಗೆ ಕೇಂದ್ರದ ಬಿಗ್ ರಿಲೀಫ್

ಇಷ್ಟು ದಿನ ಸ್ವಲ್ಪ ಜನ ಹೊಂದಿಕೊಳ್ಳಲಿ ಎಂದು ಫ್ರೀ ಬಿಟ್ಟಿದ್ದೆವು. ಇನ್ನು ಮುಂದೆ ಪೊಲೀಸರು ಕಠಿಣ ಕ್ರಮ ಕೈಗೊಳ್ಳಲಿದ್ದಾರೆ. ಲಾಕ್‌ಡೌನ್ ಉಲ್ಲಂಘಿಸಿದರೆ ಕ್ರಿಮಿನಲ್ ಕೇಸ್ ದಾಖಲಿಸುತ್ತೇವೆ. ವಾಹನಗಳಲ್ಲಿ ಓಡಾಡಿದರೆ, ವೆಹಿಕಲ್ ಸೀಜ್ ಮಾಡುತ್ತೇವೆ ಎಂದು ಪ್ರವೀಣ್ ಸೂದ್ ಖಡಕ್ ಎಚ್ಚರಿಕೆ ರವಾನಿಸಿದ್ದಾರೆ. 

ರಾಜ್ಯದ ಡಿಜಿ&ಐಜಿಪಿ ಏನಂದ್ರು, ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೈಲ್ಸ್... 

Video Top Stories