ಮಂಡ್ಯ, (ಮಾ.29): ಕೊರೊನಾ ವೈರಸ್ ಹರಡುವುದನ್ನು ತಪ್ಪಿಸುವುದಕ್ಕೆ ಲಾಕ್‍ಡೌನ್ ಮಾಡಲಾಗಿದೆ. ಇದರಿಂದ ಎಲ್ಲಿಗೂ ಹೋಗದ ಮನೆಯಲ್ಲೇ ಸೇಫ್ ಆಗಿರಿ ಎಂದು ಸರ್ಕಾರ ಮತ್ತು ಮಾಧ್ಯಮಗಳು ಬೊಬ್ಬೆ ಹೊಡೆಯುತ್ತಿವೆ.

ಆದರೂ ಇದನ್ನು ಕೇಳದ ಯುವಕರು ಕೆರೆಯಲ್ಲಿ ಆಟ ಆಡಲು ಹೋಗಿ ಮೃತಪಟ್ಟಿರುವ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ವಡೇರಹಳ್ಳಿಯಲ್ಲಿ ನಡೆದಿದೆ.

ಕೊರೋನಾ ಭೀತಿ: ಬೆಂಗ್ಳೂರು ಬಿಟ್ಟು ಹಳ್ಳಿಕಡೆ ಹೊರಟವರು ಮಸಣ ಸೇರಿದ್ರು...!

ವಡೇರಹಳ್ಳಿಯಲ್ಲಿ ಭರತ್ (18) ಮತ್ತು ಅವಿನಾಶ್ (20) ಮೃತ ಯುವಕರು. ಇಬ್ಬರು ಯುವಕರು ತೂತಾಗಿರುವ ತೆಪ್ಪವನ್ನು ತೆಗೆದುಕೊಂಡು ಕೆರೆಯಲ್ಲಿ ಆಟವಾಡಲು ಹೋಗಿದ್ದಾರೆ.

ಈ ವೇಳೆ ತೆಪ್ಪದಲ್ಲಿ ನೀರು ತುಂಬಿಕೊಂಡ ಪರಿಣಾಮ ತೆಪ್ಪ ಮುಳುಗಿದ್ದು, ಯುವಕರಿಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಯುವಕರು ಬೆಂಗಳೂರಿನಿಂದ ಸಂಬಂಧಿಕರ ಮನೆಗೆ ಬಂದಿದ್ದರು.

ಕೊರೋನಾ ಲಾಕ್‌ಡೌನ್: ಎಣ್ಣೆ ಸಿಗದೇ ಕರ್ನಾಟಕದಲ್ಲಿ 6 ಜನರು ಆತ್ಮಹತ್ಯೆ

ಮನೆಯವರು ಕೊರೋನಾ ವೈರಸ್‍ನಿಂದ ಲಾಕ್‍ಡೌನ್ ಮಾಡಿದ್ದಾರೆ. ಎಲ್ಲೂ ಹೋಗಬೇಡಿ ಎಂದು ಹೇಳಿದ್ದರು. ಆದಾಗ್ಯೂ ದೊಡ್ಡವರ ಮಾತು ಮೀರಿ ಹೋಗಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಬಗ್ಗೆ ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.