ವಿದೇಶದಿಂದ ಬಂದು ಬೆಂಗಳೂರಲ್ಲಿ ಧಾರ್ಮಿಕ ಪ್ರಚಾರ ಮಾಡಿದವರ ವಿರುದ್ಧ FIR
ಮಾರ್ಚ್ 19ರಂದು ಇಂಡೋನೇಷ್ಯಾ ಹಾಗೂ ಕಜಕಿಸ್ತಾನದಿಂದ 21 ಮಂದಿ ಭಾರತಕ್ಕೆ ಬಂದಿಳಿದಿದ್ದರು. ಇವರು ದೆಹಲಿಯ ತಬ್ಲಿಘಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರಾ ಎನ್ನುವ ಅನುಮಾನ ದಟ್ಟವಾಗತೊಡಗಿದೆ.
ಬೆಂಗಳೂರು(ಏ.08): ಪ್ರವಾಸಿ ವೀಸಾದಡಿ ಭಾರತಕ್ಕೆ ಬಂದು ಬೆಂಗಳೂರಿನಲ್ಲಿ ಧರ್ಮ ಪ್ರಚಾರದಲ್ಲಿ ತೊಡಗಿದ್ದರು ಎನ್ನುವ ಆರೋಪದಡಿ 19 ಮಂದಿ ವಿದೇಶಿಗಳ ಮೇಲೆ ಇದೀಗ FIR ದಾಖಲಿಸಲಾಗಿದೆ.
ಕೊರೋನಾ ಅಮ್ಮನ ಪೂಜೆ ಮಾಡಿದ ತುಮಕೂರಿನ ಮಂದಿ..!
ಮಾರ್ಚ್ 19ರಂದು ಇಂಡೋನೇಷ್ಯಾ ಹಾಗೂ ಕಜಕಿಸ್ತಾನದಿಂದ 21 ಮಂದಿ ಭಾರತಕ್ಕೆ ಬಂದಿಳಿದಿದ್ದರು. ಇವರು ದೆಹಲಿಯ ತಬ್ಲಿಘಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರಾ ಎನ್ನುವ ಅನುಮಾನ ದಟ್ಟವಾಗತೊಡಗಿದೆ.
ನಿಜಾಮುದ್ದೀನ್‌ಗೆ ಹೋಗಿಯೂ ಸುಳ್ಳು ಹೇಳಿದ್ರಾ ಮಳವಳ್ಳಿ ತಬ್ಲಿಘಿಗಳು?
ಇದೀಗ ಈ 19 ಜನರನ್ನು ಕೊರೋನಾ ವೈರಸ್ ಭೀತಿಯಿಂದಾಗಿ ಜೆಜೆ ನಗರದ ಪೊಲೀಸರು ಹೋಂ ಕ್ವಾರಂಟೈನ್‌ಗೆ ಒಳಪಡಿಸಿದ್ದಾರೆ. ಕಾನೂನು ಉಲ್ಲಂಘಿಸಿ ಧಾರ್ಮಿಕ ಪ್ರಚಾರದಲ್ಲಿ ತೊಡಗಿದ್ದ ಆರೋಪದಡಿ ಬೆಳಗಾವಿಯಲ್ಲಿ 10 ಇಂಡೋನೇಷ್ಯಾ ಪ್ರಜೆಗಳ ವಿರುದ್ಧ ಪೋಲಿಸರು FIR ದಾಖಲಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.