ರಾಜ್ಯದಲ್ಲಿ ಕೊರೋನಾಗೆ 10 ದಿನದಲ್ಲಿ 360 ಬಲಿ; ಈಗಲಾದ್ರೂ ಎಚ್ಚೆತ್ತುಕೊಳ್ಳಿ
- ಕೈಮೀರಿ ಹೋಗುತ್ತಿರುವ ಕೊರೋನಾ ಪರಿಸ್ಥಿತಿ
- ಕಳೆದ 10 ದಿನಗಳಲ್ಲಿ ಸೋಂಕಿಗೆ 360 ಮಂದಿ ಬಲಿ
- ಬೆಂಗಳೂರಿನಲ್ಲಿ ಐಸಿಯು, ಬೆಡ್‌ಗಳ ಕೊರತೆ
ಕೊರೋನಾವೈರಸ್ ಹೊಸರೂಪ ಆರೋಗ್ಯ ಪರಿಸ್ಥಿತಿಯನ್ನು ಮತ್ತೆ ಕಂಗೆಡಿಸಿದೆ. ಉಗ್ರರೂಪ ತಾಳಿರುವ ಕೊರೋನಾ ಕಳೆದ ಬಾರಿಗಿಂತ ಹೆಚ್ಚಿನ ವೇಗ ಪಡೆದಿದೆ. ಬೆಂಗಳೂರು ಸೇರಿದಂತೆ ಕರ್ನಾಟಕದ ಇತರ ಭಾಗಗಳಲ್ಲೂ ಆರ್ಭಟ ಈ ವೈರಸ್‌ನ ದಿನೇ ದಿನೇ ಹೆಚ್ಚುತ್ತಿದೆ.
ಇದನ್ನೂ ನೋಡಿ: ಬೆಂಗ್ಳೂರಲ್ಲಿ ಕಂಟ್ರೋಲ್ ತಪ್ಪಿದ ಕೊರೋನಾ: ಈ ದೃಶ್ಯ ನೋಡಿದ್ರೆ ನಿಮ್ಮ ಎದೆ ನಡುಗುತ್ತೆ..!...
ಕಳೆದ 10 ದಿನಗಳ ಅಂಕಿಅಂಶಗಳು ಬೆಚ್ಚಿಬೀಳಿಸುತ್ತಿವೆ. ಪ್ರತಿನಿತ್ಯದ ಸೋಂಕಿತರ ಸಂಖ್ಯೆ 11 ಸಾವಿರ ಗಡಿ ದಾಟಿದೆ. ಕಳೆದ 10 ದಿನಗಳಲ್ಲಿ ಮೃತಪಟ್ಟವರ ಸಂಖ್ಯೆ 360 ಮುಟ್ಟಿದೆ.