#FactCheck ಕೊರೋನಾ ಭೀತಿ: ಲಾಕ್‌ಡೌನ್‌ ಗದ್ದಲದಲ್ಲಿ ನಂದಿತಾ ಧರ್ಮಸ್ಥಳದ ದೀಪ..?

ಧರ್ಮಸ್ಥಳದ ದೀಪ ಆರಿದೆ ಎಂಬ ವದಂತಿ ಕೇಳಿ ಜನ ಬೆಚ್ಚಿ ಬಿದ್ದಿದ್ದಾರೆ. ರಾತ್ರೋ ರಾತ್ರಿ ಎದ್ದು ಜನರು ಮನೆಮುಂದೆ ದೀಪ ಹಚ್ಚಿದ್ದಾರೆ. ಕೊರೋನಾ ಲಾಕ್‌ಡೌನ್ ಸಂದರ್ಭ ಹೊಸ ಹೊಸ ವದಂತಿಗಳು ಹುಟ್ಟಿಕೊಳ್ಳುತ್ತಿದ್ದು ಜನ ಗಾಬರಿಗೊಂಡಿದ್ದಾರೆ.

Share this Video
  • FB
  • Linkdin
  • Whatsapp

ಮಂಗಳೂರು(ಮಾ.27): ಧರ್ಮಸ್ಥಳದ ದೀಪ ಆರಿದೆ ಎಂಬ ವದಂತಿ ಕೇಳಿ ಜನ ಬೆಚ್ಚಿ ಬಿದ್ದಿದ್ದಾರೆ. ರಾತ್ರೋ ರಾತ್ರಿ ಎದ್ದು ಜನರು ಮನೆಮುಂದೆ ದೀಪ ಹಚ್ಚಿದ್ದಾರೆ. ಕೊರೋನಾ ಲಾಕ್‌ಡೌನ್ ಸಂದರ್ಭ ಹೊಸ ಹೊಸ ವದಂತಿಗಳು ಹುಟ್ಟಿಕೊಳ್ಳುತ್ತಿದ್ದು ಜನ ಗಾಬರಿಗೊಂಡಿದ್ದಾರೆ.

ಸುಳ್ಳು ವದಂತಿಗಳನ್ನೇ ನಿಜವೆಂದು ನಂಬಿ ಜನರು ಗಾಬರಿ ಬಿದ್ದಿದ್ದಾರೆ. ಧರ್ಮಸ್ಥಳ ದೀಪ ಆರಿದರೆ ಅದು ನಾಡಿಗೆ ಕಂಟಕ ಎಂದು ನಂಬಿದ ಜನರು ನಡುರಾತ್ರಿ ಎದ್ದು ಮನೆ ಮುಂದೆ ದೀಪ ಹಚ್ಚಿದ್ದಾರೆ. ಈಗಾಗಲೇ ಹಲವು ಬಾರಿ ಎಚ್ಚರಿಕೆ ನೀಡಲಾಗಿದ್ದು, ವದಂತಿಗಳಿಗೆ ಜನರು ಕಿವಿ ಕೊಡಬಾರದು ಎಂದರೂ ಇಂತಹ ಘಟನೆಗಳು ಮರುಕಳಿಸುತ್ತಲೇ ಇದೆ.

'ಚಹಾಕ್ಕೆ ಬೆಲ್ಲ, ಅರಿಶಿಣ ಹಾಕಿ ಕುಡಿದ್ರೆ ಕೊರೋನಾ ಬರಲ್ಲ'..!

ಇತ್ತೀಚೆಗಷ್ಟೇ ಸಂಜೆಯೊಳಗೆ ಬೆಲ್ಲ, ಅರಶಿನ ಬೆರೆಸಿದ ಟೀ ಕುಡಿದರೆ ಕೊರೋನಾ ಬರುವುದಿಲ್ಲ ಎಂಬ ಸುಳ್ಳು ಸುದ್ದಿ ಕೇಳಿ ಬಂದಿತ್ತು. ನಂತರದಲ್ಲಿ ಸುಳ್ಳು ಸುದ್ದಿ ಹರಡಿದ ಯುವಕನಿಗೆ ಗ್ರಾಮಸ್ಥರು ಬುದ್ಧಿ ಹೇಳಿದ್ದರು.

'ಭಾನುವಾರ ಇಡೀ ದೇಶಕ್ಕೇ ಮದ್ದು ಸಿಂಪಡಿಸ್ತಾರಂತೆ ಮೋದಿ'..!

Related Video