ಯಶ್19 ಸಿನಿಮಾ ಅನೌನ್ಸ್‌ಗೆ ಕೌಂಟ್‌ಡೌನ್! 11 ದೇಶಗಳಲ್ಲಿ ಸಿನಿಮಾ ಟೈಟಲ್ ರಿವೀಲ್..!
ದಾಖಲೆಗಳ ಸರದಾರ ರಾಕಿಂಗ್ ಸ್ಟಾರ್ ಯಶ್ 19ನೇ ಸಿನಿಮಾ ಅನೌನ್ಸ್‌ಗೆ ಕೌಂಟ್ ಡೌನ್ ಸ್ಟಾರ್ಟ್ ಆಗಿದೆ. ಕೆಲವೇ ಕ್ಷಣದಲ್ಲಿ ಯಶ್ ಸಿನಿಮಾದ ಗುಟ್ಟು ರಟ್ಟಾಗುತ್ತೆ. ಇಂಟ್ರೆಸ್ಟಿಂಗ್ ಏನ್ ಗೊತ್ತಾ.? ಯಶ್ ತನ್ನ ಸಿನಿಮಾ ಅನೌನ್ಸ್‌ನಲ್ಲೇ ಹೊಸದೊಂದು ದಾಖಲೆ ಬರೆದಿದ್ದಾರೆ.
ಡಿಸೆಂಬರ್ 8 ಬೆಳಗ್ಗೆ 9.55ಕ್ಕೆ ರಾಕಿಂಗ್ ಸ್ಟಾರ್ ಯಶ್(Rocking star Yash) ತನ್ನ 19ನೇ ಸಿನಿಮಾದ ಟೈಟಲ್ ಟೀಸರ್ ರಿವೀಲ್(Title teaser) ಮಾಡ್ತಾರೆ. ಈ ಸಂಭ್ರಮ ಕ್ಷಣಕ್ಕಾಗಿ ರಾಕಿ ಹುಡುಗರೆಲ್ಲಾ ಕಾದು ಕೂತಿದ್ದಾರೆ. ಆದ್ರೆ ಯಶ್ ಸಿನಿಮಾದ ಟೈಟಲ್ ಅನೌನ್ಸ್ ಜೆಸ್ಟ್ ಇಂಡಿಯಾದಲ್ಲಿ ಮಾತ್ರ ಆಗುತ್ತಿಲ್ಲ. ಯಶ್19(Yash 19 movie) ಫಸ್ಟ್ ಅಪೀರಿಯನ್ಸ್‌ನಲ್ಲೇ ಜಗತ್ತನ್ನೇ ಆವರಿಸಿಕೊಳ್ಳೋ ಪ್ಲಾನ್ ಆಗಿದೆ. ಯಶ್19ನೇ ಸಿನಿಮಾ ಯಾವ್ ಮಟ್ಟಕ್ಕಿರುತ್ತೆ ಅಂತ ಜೆಸ್ ಟೈಟಲ್ ಅನೌನ್ಸ್ನಲ್ಲೇ ಎಲ್ಲಾ ಕ್ಲೀಯರ್ ಆಗ್ತಿದೆ. ಕೆಜಿಎಫ್ನಲ್ಲಿ ಪ್ಯಾನ್ ಇಂಡಿಯಾ ಸೌಂಡ್ ಮಾಡೋಕೆ ಪ್ಲಾನ್ ಮಾಡಿ ಅದರಲ್ಲಿ ಸಕ್ಸಸ್ ಕಂಡಿರೋ ಯಶ್ ಈ ಭಾರಿ ಪ್ಯಾನ್ ವರ್ಲ್ಡ್ಅನ್ನ ಕಬ್ಜ ಮಾಡೋದಕ್ಕೆ ಸಿದ್ಧರಾಗಿದ್ದಾರೆ. ಹೀಗಾಗಿ ತನ್ನ 19ನೇ ಸಿನಿಮಾದ ಟೈಟಲ್ಅನೌನ್ಸ್ಅನ್ನ ಇಂಡಿಯಾ, ಮಲೇಶಿಕಾ, ಜಪಾನ್, ನ್ಯೂಜಿಲ್ಯಾಂಡ್, ಆಫ್ರಿಕಾ, ಆಸ್ಟ್ರೇಲಿಯಾ, ರಷ್ಯಾ, ಯುಕೆ, ಯೂರೋಪ್, ಯುಸ್, ಹಾಗೂ ಯುಎಯಿಯಲ್ಲಿ ರಿವೀಲ್ ಮಾಡುತ್ತಿದ್ದಾರೆ. ಸಿನಿಮಾ ಅನೌನ್ಸ್‌ಮೆಂಟ್‌ನಲ್ಲೇ ಇಡೀ ವಿಶ್ವದ ಸಿನಿ ಜಗತ್ತಿನ ಗಮನ ಸೆಳೆಯೋಕೆ ಹೋಗ್ತಿದ್ದಾರೆ ಯಶ್. ಇದುವರೆಗೂ ಯಾವ್ ಸಿನಿಮಾದ ಟೈಟಲ್ ಕೂಡ ವಿಶ್ವದಾದ್ಯಂತ ರಿಲೀಸ್ ಆಗಿಲ್ಲ. ಹೀಗಾಗಿ ಇದು ಯಶ್ ಮಾಡ್ತಿರೋ ದೊಡ್ಡ ದಾಖಲೆಯೇ ಸರಿ. ಯಶ್ 19 ಹಾಲಿವುಡ್ ಸಿನಿಮಾ ಅನ್ನೋದು ಕನ್ಫರ್ಮ್, ಅದಕ್ಕಾಗೆ ಯಶ್ 45 ದಿನ ಲಂಡನ್ನಲ್ಲಿದ್ದು ಸಿನಿಮಾದ ವರ್ಕ್ ಮಾಡಿದ್ದಾರೆ. ಗೀತು ಮೋಹನ್ ದಾಸ್ ಕಲ್ಪನೆಯ ಕತೆಗೆ ಕೆವಿಎನ್ ಪ್ರೊಡಕ್ಷನ್ ಬಂಡವಾಳದ ನೀರೆರೆಯುತ್ತಿದ್ದಾರೆ.
ಇದನ್ನೂ ವೀಕ್ಷಿಸಿ: Today Horoscope: ಇಂದು ಈ ರಾಶಿಯವರಿಗೆ ಹೆಚ್ಚಿನ ವ್ಯಯವಾಗಲಿದ್ದು, ವಿದ್ಯಾರ್ಥಿಗಳಿಗೂ ತೊಡಕಿದೆ..