ಕಾಶ್ಮೀರಿ ಫೈಲ್ಸ್ ನಿರ್ದೇಶಕನ ಕಣ್ಣು ಎಸ್.ಎಲ್.ಭೈರಪ್ಪ ಕಾದಂಬರಿ ಮೇಲೆ: ಅಗ್ನಿಹೋತ್ರಿ ಮಾಡ್ತಾರೆ 'ಪರ್ವ'

ಕನ್ನಡದಲ್ಲಿ ಕಾದಂಬರಿ ಆಧಾರಿತ ಸಿನಿಮಾಗಳು ಹಿಂದಿನಿಂದಲೂ ಹಲವಾರು ಸಿನಿಮಾಗಳು ಬಂದಿವೆ. ಯಶಸ್ಸನ್ನೂ ಕಂಡಿವೆ. ಇದೀಗ   ಕನ್ನಡದ ಖ್ಯಾತ ಲೇಖಕ ಎಸ್.ಎಲ್. ಭೈರಪ್ಪನವರ ಪರ್ವ’ ಕಾದಂಬರಿಯನ್ನು ಆಧರಿಸಿ  ಸಿನಿಮಾ ರೆಡಿಯಾಗುತ್ತಿದೆ.

Share this Video
  • FB
  • Linkdin
  • Whatsapp

ಕನ್ನಡದಲ್ಲಿ ಕಾದಂಬರಿ ಆಧಾರಿತ ಸಿನಿಮಾಗಳು ಹಿಂದಿನಿಂದಲೂ ಹಲವಾರು ಸಿನಿಮಾಗಳು ಬಂದಿವೆ. ಯಶಸ್ಸನ್ನೂ ಕಂಡಿವೆ. ಇದೀಗ ಕನ್ನಡದ ಖ್ಯಾತ ಲೇಖಕ ಎಸ್.ಎಲ್. ಭೈರಪ್ಪನವರ ಪರ್ವ’ ಕಾದಂಬರಿಯನ್ನು ಆಧರಿಸಿ ಸಿನಿಮಾ ರೆಡಿಯಾಗುತ್ತಿದೆ. 'ದಿ ಕಾಶ್ಮೀರ್ ಫೈಲ್ಸ್’, ‘ದಿ ವ್ಯಾಕ್ಸಿನ್ ವಾರ್’ ಸಿನಿಮಾಗಳ ಮೂಲಕ ಜನಪ್ರಿಯ ನಿರ್ದೇಶಕರೆನ್ನಿಸಿಕೊಂಡಿರುವ ವಿವೇಕ್ ಅಗ್ನಿಹೋತ್ರಿ ಸಿನಿಮಾ ಮಾಡಲು ನಿರ್ಧರಿಸಿದ್ದಾರೆ. ಅಕ್ಟೋಬರ್ 21 ಬೆಂಗಳೂರಿನಲ್ಲಿ ಈ ಸಿನಿಮಾದ ಟೈಟಲ್ ಲಾಂಚ್ ಮಾಡಲಾಗಿದೆ. ಈ ಸಿನಿಮಾ ಮೂರು ಪಾರ್ಟ್ಗಳಲ್ಲಿ ಬರುತ್ತದೆ ಎಂದು ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಹೇಳಿದ್ದಾರೆ. ಬೆಂಗಳೂರಿನ ಚೌಡಯ್ಯ ಮೆಮೋರಿಯಲ್ ಹಾಲ್ನಲ್ಲಿ ಸುದ್ದಿಗೋಷ್ಠಿ ನಡೆಸಿ ‘ಪರ್ವ’ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗಿದೆ. ಎಸ್.ಎಲ್. ಭೈರಪ್ಪ ಅವರು ಟೈಟಲ್ ಲಾಂಚ್ ಮಾಡಿದ್ದಾರೆ.

Related Video