Kaatera : ಪಾಂಡವಪುರದಲ್ಲಿ ಕಾಟೇರ ಸಿನಿಮಾ ಸಕ್ಸಸ್ ಸೆಲೆಬ್ರೇಷನ್..! ಇಲ್ಲಿ ನಟ ದರ್ಶನ್ ತಾಳ್ಮೆಯ ಪಾಠ..!

ನಟ ದರ್ಶನ್ ಅಭಿನಯಿಸಿರೋ ಕಾಟೇರ ಸಿನಿಮಾ ಗೆದ್ದಿದೆ. ಹೀಗಾಗಿ ಮೇಲುಕೋಟೆ ಎಮ್ಎಲ್ ಎ ದರ್ಶನ್ ಪುಟ್ಟಣ್ಣಯ್ಯ ಇಡೀ ಕಾಟೇರ ಚಿತ್ರತಂಡವನ್ನ ಪಾಂಡವಪುರಕ್ಕೆ ಕರೆದು ಕಾಟೇರ ಸಕ್ಸಸ್ ಸೆಲಬ್ರೇಷನ್ ಮಾಡಿದ್ದಾರೆ.

First Published Jan 29, 2024, 10:12 AM IST | Last Updated Jan 29, 2024, 10:13 AM IST

ರೈತ ಮುಖಂಡ ಕೆಎಸ್ ಪುಟ್ಟಣ್ಣಯ್ಯನವರ(Ks Puttannaiah) 75ನೇ ಜನ್ಮ ದಿನೋತ್ಸವದ(Birthday) ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಾಟೇರ ಸಿನಿಮಾದ(Kaatera Movie) ಸಕ್ಸಸ್ ಸೆಲೆಬ್ರೇಷನ್ ಮಾಡಿದ್ದಾರೆ. ಈ ಕಾರ್ಯಕ್ರಮದಲ್ಲಿ ನಟ ದರ್ಶನ್ಗೆ ಭೂಮಿಪುತ್ರ ಬಿರುದ್ಧು ಕೊಟ್ಟು ಸನ್ಮಾನಿಸಲಾಗಿದೆ. ನಟ ದರ್ಶನ್(Darshan) ನಾನು ಸ್ವಲ್ಪ ಮುಂಗೋಪಿ ಅಂತ ಹಲವು ಭಾರಿ ಅವರೇ ಹೇಳಿಕೊಂಡಿದ್ದಾರೆ. ಏನೇ ಆದ್ರು ನೇರವಾಗೆ ಹೇಳ್ತೇನೆ ಅಂತ ಹೇಳಿಕೊಳ್ತಾರೆ. ಆದ್ರೆ ಈಗ ಅದ್ಯಾಕೋ ನಟ ದರ್ಶನ್ ಪಾಂಡವಪುರದಲ್ಲಿ ತಾಳ್ಮೆಯ ಪಾಠ ಮಾಡಿದ್ದಾರೆ. ಇವತ್ತು ತುಂಬಾ ಆಳ್ಮೆಯಿಂದ ಇದ್ದೇನೆ. ತಾಳ್ಮೆ ತುಂಬಾ ಕಲಿಸುತ್ತಾ ಇದೆ. ಯಾರು ಏನೇ ಅಂದುಕೊಂಡ್ರು, ಏನೇ ಮಾಡಿಕೊಂಡ್ರು ನಮ್ಮ ಹೃದಯದಲ್ಲಿರೋ ನನ್ನ ಸೆಲೆಬ್ರೆಟಿಗಳೇ ನನಗೆ ಸಾಕು ಎಂದಿದ್ದಾರೆ. 

ನಟ ದರ್ಶನ್ ತಾಳ್ಮೆಯಿಂದ ಇದ್ದೇನೆ ಅಂತ ಹೇಳುತ್ತಿದ್ದಂತೆ ದರ್ಶನ್ ಕುಟುಂಬದ ಬಗ್ಗೆ ಹೀಗೆ ಮಾತನಾಡುತ್ತಿದ್ದಾರೆ ಅಂತ ಚರ್ಚೆ ಶುರುವಾಗಿದೆ. ಯಾಕಂದ್ರೆ ಕಳೆದ ಎರಡು ದಿನಗಳಿಂದ ನಟ ದರ್ಶನ್ ಸಂಸಾರದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ ಆಗುತ್ತಿದೆ. ನಟ ದರ್ಶನ್ ಜೊತೆಗಿನ ಆತ್ಮೀಯಾ ಫೋಟೋಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ ನಮ್ಮ ಸಂಬಂಧಕ್ಕೆ 10 ವರ್ಷವಾಗಿದೆ ಅಂತ ಪೋಸ್ಟ್ ಹಾಕಿದ್ರು. ಇದನ್ನ ನೋಡಿದ ದರ್ಶನ್ ಪತ್ನಿ ವಿಜಯಲಕ್ಷ್ಮಿ ನಟಿ ಪವಿತ್ರಾ ಗೌಡ ವಿರುದ್ಧ ಕೆರಳಿ ಕೆಂಡವಾಗಿ ಪವಿತ್ರಾ ಗೌಡ ವಿರುದ್ಧ ಕಾನೂನು ಸಮರದ ಎಚ್ಚರಿಕೆ ಕೊಟ್ಟಿದ್ರು. ಆದ್ರೆ ನಟಿ ಪವಿತ್ರಾ ಗೌಡ ಸುಮ್ಮನಿರಬೇಕಲ್ಲ. ತನ್ನ ವಿರುದ್ಧ ಸಿಡಿದೆದ್ದಿದ್ದ ವಿಜಯಲಕ್ಷ್ಮಿ ವಾರ್ನಿಂಗ್ಗೆ ರಿವರ್ಸ್ ವಾರ್ನಿಂಗ್ ಕೊಟ್ಟಿದ್ದ ಪವಿತ್ರ ಗೌಡ, ನಾನು ಮತ್ತು ದರ್ಶನ್ 10 ವರ್ಷದಿಂದ ಜೊತೆಯಾಗಿದ್ದೇವೆ. ಇದು ವಿಜಯಲಕ್ಷ್ಮಿಗೂ ಗೊತ್ತು. ಇದರಿಂದ  ಯಾವುದೇ ರೀತಿ ತೊಂದರೆ ಇಲ್ಲ ಅಂತ ವಿಜಯಲಕ್ಷ್ಮಿ ಅವರೇ ಹಲವು ಭಾರಿ ಪೋನ್ ಕಾಲ್ ಮಾಡಿ ತಿಳಿಸಿದ್ದಾರೆ. ಹೀಗಾಗಿ ನನಗೂ ಕಾನೂನು ಹೋರಾಟ ಮಾಡೋಕೆ ಗೊತ್ತು ಅಂತ ಎಚ್ಚರಿಕೆ ಕೊಟ್ಟಿದ್ರು.

ಇದನ್ನೂ ವೀಕ್ಷಿಸಿ:  Ram Mandir: 5 ವರ್ಷದ ಮಗುವಿನ ಹೋಲಿಕೆಯ ರಾಮಲಲ್ಲಾ: 51 ಇಂಚಿನ ಮೂರ್ತಿ ಕೆತ್ತನೆ ಹಿಂದಿರುವ ಉದ್ದೇಶ..?

Video Top Stories