ಪ್ರಶಾಂತ್ ನೀಲ್‌ಗೆ ಬೆದರಿಕೆ ಹಾಕಿದ ಫ್ಯಾನ್: ಹುಚ್ಚು ಅಭಿಮಾನಿಯ ಬೆದರಿಕೆಗೆ ಏನಂದ್ರು ಪ್ರಭಾಸ್?‌

ಟಾಲಿವುಡ್ ಸ್ಟಾರ್ ಪ್ರಭಾಸ್ ಅಭಿಮಾನಿಯೊಬ್ಬ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ನಿರ್ದೇಶಕ ಪ್ರಶಾಂತ್ ನೀಲ್ ಅವರಿಗೆ ಪತ್ರ ಬರೆದಿದ್ದಾನೆ. ಈ ಪತ್ರ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

First Published May 14, 2022, 10:33 PM IST | Last Updated May 14, 2022, 10:33 PM IST

ಕೆಜಿಎಫ್ 2 ಸಕ್ಸಸ್ ನಂತರ ಪ್ರಶಾಂತ್ ನೀಲ್ (Prashant Neel) ಸದ್ಯ ಟಾಲಿವುಡ್ ಸ್ಟಾರ್ ಪ್ರಭಾಸ್ (Prabhas) ಜೊತೆ ಸಲಾರ್ (Salaar) ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಸಲಾರ್ ಸಿನಿಮಾದ ಚಿತ್ರೀಕರಣ ಸದ್ಯ 35ರಷ್ಟು ಮುಕ್ತಾಯವಾಗಿದೆ. ಇನ್ನು ಉಳಿದ ಭಾಗದ ಚಿತ್ರೀಕರಣ ಮುಂದಿನ ವಾರದಿಂದ ಪ್ರಾರಂಭವಾಗುತ್ತಿದೆ. ಈ ಮಧ್ಯೆ ನಡುವೆ ಪ್ರಭಾಸ್ ಅಭಿಮಾನಿಯೊಬ್ಬರು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ನಿರ್ದೇಶಕ ಪ್ರಶಾಂತ್ ನೀಲ್ ಅವರಿಗೆ ಪತ್ರ ಬರೆದಿದ್ದಾನೆ. ಈ ಪತ್ರ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಷ್ಟಕ್ಕೂ ಅಭಿಮಾನಿ ಹೀಗೆ ಮಾಡಲು ಕಾರಣ ಸಲಾರ್ ಸಿನಿಮಾದ ಅಪ್‌ಡೇಟ್‌ಗಾಗಿ.

ಟಾಲಿವುಡ್‌ನಲ್ಲಿ ಶುರು ಹೊಸ ಭಯ; ರಾಜಮೌಳಿ ಜೊತೆ ಸಿನಿಮಾ ಮಾಡಿ ಗೆದ್ದವ್ರು ಮತ್ತೆ ಕಾಣಲಿಲ್ಲ ಗೆಲುವು

ಹೌದು! ಸಲಾರ್ ಸಿನಿಮಾದ ಬಗ್ಗೆ ಯಾವುದೇ ಅಪ್‌ಡೇಟ್ ನೀಡಿಲ್ಲ ಎಂದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಪತ್ರದಲ್ಲಿ ಬರೆದಿದ್ದಾರೆ. ಈಗಾಗಲೇ ಮೇ ತಿಂಗಳ 2ನೇ ವಾರ ಕೂಡ ಮುಗಿಯುತ್ತಿದೆ. ಇದುವರೆಗೂ ಸಿನಿಮಾದಿಂದ ಯಾವುದೇ ಅಪ್‌ಡೇಟ್‌ ಸಿಕ್ಕಿಲ್ಲ. ಸಾಹೋ ಮತ್ತು ರಾಧೆ ಶ್ಯಾಮ್ ಸಿನಿಮಾದಿಂದನೂ ಇದೇ ತಪ್ಪು ಮಾಡಿದ್ದರು. ತುಂಬಾ ನಿರಾಸೆಯಾಗಿತ್ತು. ಹಾಗಾಗಿ ನಾವು ಈಗಾಗಲೇ ತುಂಬಾ ನೊಂದಿದ್ದೇವೆ ಎಂದು ಹೇಳಿದ್ದಾರೆ. ಒಂದು ವೇಳೆ ನಿರ್ದೇಶಕ ಪ್ರಶಾಂತ್ ನೀಲ್ ಈ ತಿಂಗಳಲ್ಲಿ ಅಪ್‌ಡೇಟ್‌ ನೀಡದಿದ್ದರೆ ನಾನು ಖಂಡಿತ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಪತ್ರದಲ್ಲಿ ಬರೆದಿದ್ದಾರೆ. ಕೊನೆಯಲ್ಲಿ ನಮಗೆ ಸಲಾರ್ ಸಿನಿಮಾದ ಅಪ್‌ಡೇಟ್‌ ಬೇಕು ಎಂದು ಬರೆದು ಪತ್ರ ಕೊನೆಗೊಳಿಸಿದ್ದಾರೆ. ಈ ಪತ್ರ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies

Video Top Stories