Puneeth Rajkumar : ಅಪ್ಪು ನಿಧನಕ್ಕೆ ಕೋವಿಡ್ ಲಸಿಕೆ ಕಾರಣವಾಯ್ತಾ? ಫೋಟೋ ಶೇರ್ ಮಾಡಿ ಫ್ಯಾನ್ಸ್ ಮತ್ತೆ ಆಕ್ರೋಶ!
ಅಪ್ಪು ನಮ್ಮನ್ನ ಇಷ್ಟು ಬೇಗ ಬಿಟ್ಟು ಹೋಗೋಕೆ ಕಾರಣ ಏನು ಅಂತ ಅಭಿಮಾನಿಗಳು ಒಂದು ಫೋಟೋವನ್ನ ವೈರಲ್ ಮಾಡುತ್ತಾ ಹೇಳುತ್ತಿದ್ದಾರೆ. ಅದೇ ಪುನೀತ್ ರಾಜ್‌ಕುಮಾರ್ ಕೋವಿಡ್ ವ್ಯಾಕ್ಸಿನ್ ಹಾಕಿಕೊಂಡಿದ್ದ ಆ ಫೋಟೋ.
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನ ಆಗಿ ಮೂರು ವರ್ಷ ಆಗಿದೆ. ಅಪ್ಪು ಸಾವು ಇಂದಿಗೂ ನುಂಗಲಾರದ ತುತ್ತು. ಈ ಘಟನೆ ಆಗೋಕೆ ಕಾರಣ ಏನು ಅನ್ನೋ ಹುಡುಕಾಟ ಅಂದಿನಿಂದ ಇಂದಿನವರೆಗೂ ನಡೆಯುತ್ತಲೇ ಇದೆ. 2021ರ ಏಪ್ರಿಲ್ 07ರಂದು ಪುನೀತ್ ರಾಜ್‌ಕುಮಾರ್ ಅವರು ಮೊದಲ ವ್ಯಾಕ್ಸಿನ್ ತೆಗೆದುಕೊಂಡಿದ್ದರು. ವ್ಯಾಕ್ಸೀನ್ ತಗೊಂಡ ಅಪ್ಪು ಫೋಟೋ ಶೇರ್ (Photo) ಮಾಡಿ ನಾನು ಮೊದಲ ವಾಕ್ಸಿನೇಷನ್ ತಗೊಂಡಿದ್ದೇನೆ. 45 ವರ್ಷ ಮೇಲ್ಪಟ್ಟವರು ವಾಕ್ಸೀನ್ ತೆಗೆದುಕೊಳ್ಳಬಹುದು ಎಂದು ಪೋಸ್ಟ್ ಮಾಡಿದ್ದರು. ಈ ಪೋಸ್ಟ್ ಈಗ ವೈರಲ್ ಮಾಡುತ್ತಿರೋ ಫ್ಯಾನ್ಸ್(Fans) ಕೋವಿಶೀಲ್ಡ್ ವ್ಯಾಕ್ಸಿನ್‌ನಿಂದ (Covid Vaccine) ಸೈಡ್ ಎಫೆಕ್ಟ್ ಆಗಿ ನಾವು ಪುನೀತ್ ರಾಜ್‌ಕುಮಾರ್(Puneeth Rajkumar) ಅವರನ್ನು ಕಳೆದುಕೊಂಡಿದ್ದೀವಿ ಅಂತ ಟ್ರೆಂಡ್ ಮಾಡುತ್ತಿದ್ದಾರೆ. ಇತ್ತೀಚೆಗೆ ಕೋವಿಶೀಲ್ಡ್ ವ್ಯಾಕ್ಸಿನ್ ತಯಾರಿಸಿದ ಅಸ್ಟ್ರಾಜೆನೆಕಾ ಕಂಪನಿಯು ಕೋವಿಡ್ ಲಸಿಕೆಯ ಸೈಡ್ ಎಫೆಕ್ಟ್ ಬಗ್ಗೆ ಮಾಹಿತಿ ನೀಡಿದೆ. ಲಂಡನ್ ಕೋರ್ಟ್‌ನಲ್ಲಿ ಅಸ್ಟ್ರಾಜೆನೆಕಾ ಕಂಪನಿ(AstraZeneca Company) ತಯಾರಿಸಿದ ಕೋವಿಶೀಲ್ಡ್ ಲಸಿಕೆಯಿಂದ ಅಪರೂಪದ ಪ್ರಕರಣದಲ್ಲಿ ಸೈಡ್ ಎಫೆಕ್ಟ್ ಇದೆ ಎಂದು ಒಪ್ಪಿಕೊಂಡಿದೆ. ಹೀಗಾಗಿ ಈಗ ಅಪ್ಪು ಸಾವಿನ ವಿಚಾರ ಮತ್ತೆ ಟಾಕ್ ಆಗುತ್ತಿದ್ದು, ಕೋವಿಡ್ ಲಸಿಕೆಯೇ ಇದಕ್ಕೆಲ್ಲಾ ಕಾರಣ ಅಂತ ಸಿಟ್ಟು ಹೊರಹಾಕುತ್ತಿದ್ದಾರೆ ಫ್ಯಾನ್ಸ್.
ಇದನ್ನೂ ವೀಕ್ಷಿಸಿ: ಯಶ್ ಜೊತೆ ಮತ್ತೆ ಪೈಪೋಟಿಗೆ ಇಳಿದ ಅಲ್ಲು ಅರ್ಜುನ್! ಕೆಜಿಎಫ್2 ದಾಖಲೆ ಮುರಿಯಲು ಪುಷ್ಪ2 ದೊಡ್ಡ ಪ್ಲ್ಯಾನ್!