Thalapathy Vijay: ದಳಪತಿ ವಿಜಯ್‌ ಕೊನೆ ಸಿನಿಮಾ ಸಂಭಾವನೆ ಎಷ್ಟು ಗೊತ್ತಾ ? ರಜನಿಯನ್ನೇ ಹಿಂದಿಕ್ಕಿದ ದಳಪತಿ!

ನಟ ದಳಪತಿ ವಿಜಯ್‌ ಕೊನೆಯ ಚಿತ್ರಕ್ಕೆ 250 ಕೋಟಿ ರೂಪಾಯಿ ಪಡೆಯಲಿದ್ದಾರಂತೆ. 
 

First Published Mar 23, 2024, 11:14 AM IST | Last Updated Mar 23, 2024, 11:14 AM IST

ನಟ ದಳಪತಿ ವಿಜಯ್‌(Thalapathy Vijay) ತಮ್ಮ ಕೊನೆಯ ಸಿನಿಮಾಗೆ 250 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರಂತೆ. ‘Thalapathy 69’ ವಿಜಯ್ ನಟನೆಯ ಕೊನೆಯ ಸಿನಿಮಾವಾಗಿದ್ದು, ಇದರಲ್ಲಿ ದ್ವಿಪಾತ್ರದಲ್ಲಿ ನಟಿಸುತ್ತಿದ್ದಾರಂತೆ. ತಮಿಳಿಗ ವೆಟ್ರಿ ಕಳಗಂ ಎಂಬ ಪಕ್ಷ ಆರಂಭಿಸುತ್ತಿದ್ದಾರೆ. ವಿಜಯ್, ವೆಂಕಟ್ ಪ್ರಭು ನಿರ್ದೇಶನದ GOAT ಚಿತ್ರದಲ್ಲಿ ಸದ್ಯ ನಟಿಸುತ್ತಿದ್ದಾರೆ. ನಿರ್ದೇಶಕ ಹೆಚ್. ವಿನೋದ್(Director H. Vinod) ಸಿನಿಮಾದಲ್ಲಿ ವಿಜಯ್ ವಿಭಿನ್ನ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. GOAT ನಂತರ ಒಂದೇ ಒಂದು ಚಿತ್ರದಲ್ಲಿ ನಟಿಸುವುದಾಗಿ ವಿಜಯ್ ಹೇಳಿದ್ದರು. ಅದು 69ನೇ ಸಿನಿಮಾ ಆಗಿದೆ. ಈ ಚಿತ್ರದ ಬಳಿಕ ವಿಜಯ್ ತಮ್ಮ ನಟನಾ ವೃತ್ತಿಗೆ ಬೈ ಬೈ ಹೇಳಲಿದ್ದಾರೆ ಎನ್ನಲಾಗ್ತಿದೆ.

ಇದನ್ನೂ ವೀಕ್ಷಿಸಿ:  Rashmika Mandanna: ಇನ್ಮೇಲೆ ಇಂಥಾ ವಿಡಿಯೋ ಹಾಕ್ತಾನೆ ಇರ್ತೀನಿ ಎಂದ ನಟಿ ರಶ್ಮಿಕಾ ಮಂದಣ್ಣ..!

Video Top Stories