Rashmika Mandanna: ಇನ್ಮೇಲೆ ಇಂಥಾ ವಿಡಿಯೋ ಹಾಕ್ತಾನೆ ಇರ್ತೀನಿ ಎಂದ ನಟಿ ರಶ್ಮಿಕಾ ಮಂದಣ್ಣ..!

ರಶ್ಮಿಕಾ ಇಷ್ಟೊಂದು ವರ್ಕೌಟ್ ಮಾಡ್ತಿರೋದ್ಯಾಕೆ..?
ಯಾವಾಗಲೂ ಇಂಥಾ ವಿಡಿಯೋ ಹಂಚಿಕೊಳ್ತಾರಂತೆ
‘ಪುಷ್ಪ-2’ ಸಿನಿಮಾ ಶೂಟಿಂಗ್ ಇಷ್ಟು ಬೇಗ ಮುಗೀತಾ..?

Share this Video
  • FB
  • Linkdin
  • Whatsapp

'ನಾನು ವರ್ಕೌಟ್ ವಿಡಿಯೋ ಹಂಚಿಕೊಳ್ಳದೇ ಸ್ವಲ್ಪ ಸಮಯ ಆಯಿತು ಅಲ್ಲವೇ? ಸರಿಯಾಗಿ ವರ್ಕೌಟ್(Workout) ಮಾಡದೇ 4-5 ತಿಂಗಳಾಗಿತ್ತು. ಆದರೆ ನಾನೀಗ ಮತ್ತೆ ಮರಳಿದ್ದೇನೆ. ನಿಮಗೆ ಸ್ಫೂರ್ತಿ ನೀಡುವ ಉದ್ದೇಶದಿಂದ ಇನ್ಮುಂದೆ ಇಂಥ ಅನೇಕ ವಿಡಿಯೋಗಳನ್ನು ಹಂಚಿಕೊಳ್ಳುತ್ತೇನೆ’ ಎಂದು ರಶ್ಮಿಕಾ ಮಂದಣ್ಣ(Rashmika Mandanna) ಅವರು ಪೋಸ್ಟ್ ಮಾಡಿದ್ದಾರೆ. ವಿಡಿಯೋ ನೋಡಿದ ಅನೇಕ ಅಭಿಮಾನಿಗಳು ‘ನೀವೇ ನಮಗೆ ಸ್ಫೂರ್ತಿ’ ಎಂದು ಕಮೆಂಟ್ ಮಾಡಿದ್ದಾರೆ. 'ಪುಷ್ಪ 2' ಸಿನಿಮಾದ(Pushpa 2) ಶೂಟಿಂಗ್‌ನಲ್ಲಿ ಬ್ಯುಸಿ ಆಗಿರುವ ಅವರಿಗೆ ಕಾರಣಾಂತರಗಳಿಂದ ಕಳೆದ ಕೆಲವು ತಿಂಗಳಿಂದ ಸರಿಯಾಗಿ ವರ್ಕೌಟ್ ಮಾಡಲು ಸಾಧ್ಯವಾಗಿರಲಿಲ್ಲ. ಈಗ ಅವರು ಮತ್ತೆ ಫಿಟ್‌ನೆಸ್ ಬಗ್ಗೆ ಕಾಳಜಿ ವಹಿಸಲು ಮುಂದಾಗಿದ್ದಾರೆ. ಅಷ್ಟೇ ಅಲ್ಲದೇ ತಮ್ಮ ಅಭಿಮಾನಿಗಳಿಗೆ ಸ್ಫೂರ್ತಿ ನೀಡಬೇಕು ಎಂದು ಕೂಡ ಅವರು ನಿರ್ಧರಿಸಿದ್ದಾರೆ. ಹಾಗಾಗಿ ತಮ್ಮ ವರ್ಕೌಟ್ ವಿಡಿಯೋಗಳನ್ನು ಹೆಚ್ಚು ಶೇರ್ ಮಾಡಿಕೊಳ್ಳುವುದಾಗಿ ತಿಳಿಸಿದ್ದಾರೆ.

ಇದನ್ನೂ ವೀಕ್ಷಿಸಿ: ಎರಡನೇ ವಾರವೂ ಭರ್ಜರಿ ಪ್ರದರ್ಶನದಲ್ಲಿ ಕೆರೆಬೇಟೆ: ಸಿನಿಮಾ ನೋಡಿದ ನಟ ನೆನಪಿರಲಿ ಪ್ರೇಮ್!

Related Video