Thalapathy Vijay: ತಮಿಳುನಾಡು ರಾಜಕೀಯದಲ್ಲಿ ಹೊಸ ಮುನ್ನುಡಿ..! ಅಧಿಕೃತವಾಗಿ ಪಾಲಿಟಿಕ್ಸ್‌ಗೆ ಎಂಟ್ರಿ ಕೊಟ್ಟ ವಿಜಯ್..!
ದಕ್ಷಿಣ ಭಾರತದಲ್ಲಿ ಪ್ರಖ್ಯಾತರಾಗಿರುವ ತಮಿಳು ನಟ ದಳಪತಿ ವಿಜಯ್ ತಮ್ಮ ರಾಜಕೀಯ ಪಕ್ಷವನ್ನು ಘೋಷಣೆ ಮಾಡಿದ್ದು, ಅದಕ್ಕೆ 'ತಮಿಳಗ ವೆಟ್ರಿ ಕಳಗಂ' ಎಂದು ಹೆಸರಿಸಿದ್ದಾರೆ.
ಸೂಪರ್‌ಸ್ಟಾರ್ ರಜಿನಿಕಾಂತ್ ನಂತರ ದೊಡ್ಡ ಅಭಿಮಾನಿ ಬಳಗ ಹೊಂದಿರೋ ತಮಿಳು ಸೂಪರ್ ಸ್ಟಾರ್ ದಳಪತಿ ವಿಜಯ್(Thalaparthi Vijay). ಆದ್ರೆ ಈಗ ವಿಜಯ್ ರಜಿನಿಗಿಂತಲೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಅದು ರಾಜಕಾರಣಲ್ಲಿ. ನಟ ರಜನಿಕಾಂತ್ ರಾಜಕೀಯಕ್ಕೆ ಬರುತ್ತಾರೆ ಅಂತ ಹೇಳಲಾಗಿತ್ತು. ಆದ್ರೆ ಅನಾರೋಗ್ಯಕ್ಕೆ ಹೆದರಿ ರಾಜಕೀಯದಿಂದ ಹಿಂದೆ ಸರಿದ್ರು. ಆದ್ರೆ ವಿಜಯ್ ಕೊಟ್ಟ ಮಾತಿನಂತೆ ಪೊಲಿಟಿಕ್ಸ್ಗೆ(Politics) ಅಧಿಕೃತವಾಗಿ ಧುಮುಕಿದ್ದಾರೆ. ತಮ್ಮ ತಂದೆ ಚಂದ್ರಶೇಖರ್ ಅವರು ರಾಜಕೀಯ ಪಕ್ಷ ಕಟ್ಟಿದಾಗ, ಅದಕ್ಕೂ ನನಗೂ ಸಂಬಂಧವೇ ಇಲ್ಲ ಅಂತ ಖಡಕ್ ಹೇಳಿಕೆ ಕೊಟ್ಟು ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ರು ನಟ ವಿಜಯ್. ಹೀಗಾಗಿ ವಿಜಯ್ ರಾಜಕೀಯ ಎಂಟ್ರಿಯ ಬಗ್ಗೆಯೇ ಸಾಕಷ್ಟು ಅನುಮಾನಗಳಿದ್ವು. ಆದ್ರೆ ಎಲ್ಲರ ಲೆಕ್ಕಾಚಾರ, ಊಹೆಗಳು, ಕುತೂಹಲಕ್ಕೆ ತೆರೆ ಬಿದ್ದಿದೆ. ವಿಜಯ್ ಅಧಿಕೃತವಾಗಿ ತಮ್ಮ ಪಕ್ಷ ಘೋಷಣೆ ಮಾಡಿದ್ದಾರೆ. ಅವರ ಪಕ್ಷದ ಹೆಸರು ತಮಿಳಗ ವೆಟ್ರಿ ಕಳಗಂ(Tamilaga Vettri Kazhagam). ತಮಿಳು ನಾಡು ರಾಜಕಾರಣ ಸ್ಟಾರ್ ನಟರಿಂದಲೇ ತುಂಬಿಕೊಂಡಿದೆ. ಪ್ರಜಾ ಪ್ರತಿನಿಧಿಗಳನ್ನ ಆಯ್ಕೆ ಮಾಡೋ ತಮಿಳು ಪ್ರಜೆಗಳು ಕೂಡ ಸ್ಟಾರ್ಗಳಿಗೆ ಹೆಚ್ಚು ಮಣೆ ಹಾಕುತ್ತಾರೆ. ಹೀಗಾಗಿ ದೊಡ್ಡ ಸ್ಟಾರ್ ಆದವರು ಮುಖ್ಯಮಂತ್ರಿಯಾಗಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ಅವರಲ್ಲಿ ಮೊದಲಿಗರು ಎಂಜಿಆರ್.
ಇದನ್ನೂ ವೀಕ್ಷಿಸಿ: ಮತ್ತೆ ಬುರ್ಜ್ ಖಲೀಫಾ ಮೇಲೆ ಮೂಡಿದ ಕಿಚ್ಚ ಸುದೀಪ್..! ಎತ್ತರದ ಕಟ್ಟಡ ಮೇಲೆ ಹಾರಿತು ಸಿಸಿಎಲ್ ಬಾವುಟ..!