Lip Lock: ಹೀರೋಗಳಿಗೆ ಲಿಪ್ ಕಿಸ್ ಕೊಡೊಲ್ಲ ಎಂದ ಶ್ರೀಲೀಲಾ: ಇದೇನಿದ್ರೂ ಅವರೊಬ್ಬರಿಗೆ ಮಾತ್ರ ಮೀಸಲಂತೆ !
ನಟಿ ಶ್ರೀಲೀಲಾ ನಾನು ಲಿಪ್ ಲಾಕ್, ಲಿಪ್ ಕಿಸ್ ಕೊಡುವುದೇನಿದ್ರೂ, ನನ್ನ ರಿಯಲ್ ಲೈಫ್ ಗಂಡನಿಗೆ ಮಾತ್ರ ಎಂದು ಹೇಳಿದ್ದಾರೆ.
ಚಿತ್ರರಂಗ ಪ್ರವೇಶಿಸಿದ ಐದು ವರ್ಷಗಳಲ್ಲಿ ಸ್ಟಾರ್ ನಟಿಯಾಗಿರುವುದು ಶ್ರೀಲೀಲಾ(Sreeleela) ಅವರ ಸಾಧನೆ ಎಂದು ಹೇಳಬಹುದು. ಇದೀಗ ತೆರೆಯ ಮೇಲೆ ಯಾವುದೇ ಕಾರಣಕ್ಕೂ ಯಾವ ಹೀರೋಗೂ ಲಿಪ್ ಲಾಕ್ ಮಾಡುವುದಿಲ್ಲ ಎಂದು ನಟಿ ಹೇಳಿದ್ದಾರೆ. ಸದ್ಯ ಈ ನಟಿ ಟಾಲಿವುಡ್(Tollywood), ಬಾಲಿವುಡ್‌ನಲ್ಲಿ ಬ್ಯೂಸಿಯಾಗಿದ್ದಾರೆ. ನಾನು ಲಿಪ್ ಲಾಕ್(lip lock), ಲಿಪ್ ಕಿಸ್ ಕೊಡುವುದೇನಿದ್ರೂ, ನನ್ನ ರಿಯಲ್ ಲೈಫ್ ಗಂಡನಿಗೆ(Husband) ಮಾತ್ರ. ಯಾವ ಹೀರೋಗೂ ತುಟಿಗೆ ಮಾತ್ರ ಮುತ್ತು ಕೊಡಲ್ಲ ಎಂದಿದ್ದಾರೆ. ಇದನ್ನ ಕೇಳಿದ ಅವರ ಫ್ಯಾನ್ಸ್ ವಾಯ್ ಎಂದಿದ್ದು, ಎಂತಾ ಒಳ್ಳೆ ಹುಡುಗಿ ಅನ್ನುತ್ತಿದ್ದಾರೆ. ಇನ್ನೂ ಕೆಲವರು ಇದು ತುಂಬಾ ಒಳ್ಳೆ ನಿರ್ಧಾರ ಎನ್ನುತ್ತಿದ್ದಾರೆ.
ಇದನ್ನೂ ವೀಕ್ಷಿಸಿ: ಎರಡನೇ ವಾರವೂ ಬಾಕ್ಸಾಫೀಸ್‌ನಲ್ಲಿ ಸಲಾರ್ ದರ್ಬಾರ್..! ಕಲೆಕ್ಷನ್‌ನಲ್ಲಿ ದೇಶಾದ್ಯಂತ ನಡೆಯತ್ತಿದೆ ಪ್ರಭಾಸ್ ದಂಡಯಾತ್ರೆ..!