ನಟಿ ಶ್ರುತಿ ಹಾಸನ್‌ ಗುಟ್ಟಾಗಿ ಮದುವೆ ಆದ್ರಾ ? ಈ ಬಗ್ಗೆ ಒರಿ ಹೇಳಿದ್ದೇನು ?

ಒರಿ ಶ್ರುತಿ ಹಾಸನ್ ಜೊತೆ ಮದುವೆಯಾಗಿದ್ದಾರೆ ಎಂಬ ಗಾಸಿಪ್‌ ಹರಡುತ್ತಿದ್ದು, ಈ ಕುರಿತು ಅವರು ಮಾತನಾಡಿದ್ದಾರೆ.
 

First Published Dec 31, 2023, 10:20 AM IST | Last Updated Dec 31, 2023, 10:20 AM IST

ಶ್ರುತಿ ಹಾಸನ್‌ರನ್ನ ಒರಿ ಮದುವೆಯಾಗ್ತಾರೆ ಎಂಬ ಸುದ್ದಿ ಬಾಲಿವುಡ್‌ನಲ್ಲಿ ಹರಿದಾಡುತ್ತಿದೆ. ಒರಿ (Orry) ಇವರು ಬಾಲಿವುಡ್‌ನಲ್ಲಿ ಸಖತ್‌ ಫೇಮಸ್‌ ಆಗಿದ್ದು, ಇವರ ಜೊತೆ ಫೋಟೋ ತೆಗೆಸಿಕೊಂಡರೆ ಅದೃಷ್ಟ ಎಂದು ಎಲ್ಲಾರೂ ಮುಗಿಬಿದ್ದು ಪಟ ತೆಗೆದುಕೊಳ್ಳುತ್ತಾರೆ. ಇನ್ನೂ ಬಿಗ್‌ಬಾಸ್‌ಗಂತೂ ಹೋಗಿ ಬಂದ ಮೇಲೆ ಒರಿ ಸಖತ್‌ ಫೇಮಸ್‌ ಆಗಿಬಿಟ್ರು. ಇದೀಗ ಇವರು ಶ್ರುತಿ ಹಾಸನ್(Shruti Haasan) ಜೊತೆ ಮದುವೆಯಾಗಿದ್ದಾರೆ ಎಂಬ ಗಾಸಿಪ್‌(Gossip) ಹರಡುತ್ತಿದೆ. ಈ ವಿಷಯ ನಿಜನಾ ಎಂದು ಕೇಳಿದ್ರೆ, ಇಲ್ಲ ಇದು ಸುಳ್ಳು ತಾಳಿ ಕಟ್ಟಿದ್ರೆ ಹೇಳುತ್ತಿರಲಿಲ್ವಾ. ಮದುವೆ ಆಗುವ ವಿಷಯವನ್ನು ಯಾಕೆ ಮುಚ್ಚಿಡಬೇಕು ಎಂದು ಒರಿ ಹೇಳಿದ್ದಾರಂತೆ. ಈ ವಿಷಯ ಕೇಳಿದ ಶ್ರುತಿ ಹಾಸನ್‌ ಬೆಚ್ಚಿಬಿದ್ದಿದ್ರಂತೆ. ಯಾಕಂದ್ರೆ ಅವರು ಬೇರೊಬ್ಬರ ಜೊತೆ ಡೇಟಿಂಗ್‌ನಲ್ಲಿ ಇದ್ದಾರಂತೆ.

ಇದನ್ನೂ ವೀಕ್ಷಿಸಿ:  8 ಜನ ನಾಮಿನೇಟ್..ಎಲಿಮಿನೇಟ್ ಆಗೋದು ಯಾರು ? ಇನ್ನು ಎಷ್ಟು ವಾರ ಇದೆ ಬಿಗ್‌ಬಾಸ್ ಸೀಸನ್ 10..?

Video Top Stories