ಆರ್‌ಸಿಬಿ ಅನ್‌ಬಾಕ್ಸ್ ಕಾರ್ಯಕ್ರಮದಲ್ಲಿ ಅಪ್ಪು ಮೆರಗು! ಬೊಂಬೆ ಹೇಳುತೈತೆ ಹಾಡಿನಿಂದ RCB ಪ್ರೋಗ್ರಾಂ ಶುರು

ಇಡೀ ಬೆಂಗಳೂರು ತುಂಬಾ ಆರ್‌ಸಿಬಿಯದ್ದೇ ಕ್ರೇಜ್. ಚಿನ್ನಸ್ವಾಮಿ ಸ್ಟೇಡಿಯಂನಲ್ಲಂತೂ ಛಾವಣಿ ಹಾರಿಹೋಗುವಷ್ಟು ಆರ್‌ಸಿಬಿ ಸೌಂಡ್ ಇತ್ತು. ಅದಕ್ಕೆ ಕಾರಣ ಆರ್‌ಸಿಬಿ ಅನ್‌ಬಾಕ್ಸ್ ಇವೆಂಟ್.

Share this Video
  • FB
  • Linkdin
  • Whatsapp

ಐಪಿಎಲ್ ಸೀಸನ್ 17ಕ್ಕೆ ಕೌಂಟ್ ಡೌನ್ ಸ್ಟಾರ್ಟ್ ಆಗಿದೆ. ಆರ್‌ಸಿಬಿ(RCB) ಅನ್‌ಬಾಕ್ಸ್ ಕಾರ್ಯಕ್ರಮ ಪೂರ್ತಿ ಸ್ಯಾಂಡಲ್‌ವುಡ್‌(Sandalwood) ಮಂದಿಯ ಮೆರಗು ಹಬ್ಬಿತ್ತು. ಅದರಲ್ಲೂ ಕನ್ನಡ ಚಿತ್ರರಂಗದ ದೊಡ್ಮನೆ ಹುಡುಗ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್(Puneeth Rajkumar) ರಾರಾಜಿಸಿದ್ರು. ಅಪ್ಪು ನಟಿಸಿರೋ ರಾಜಕುಮಾರ ಸಿನಿಮಾದ ಬೊಂಬೆ ಹೇಳುತೈತೆ ಹಾಡು ಮುಗಿಲು ಮುಟ್ಟಿತ್ತು. ಇಡೀ ಸ್ಟೇಡಿಯಂ ಲೈಟ್‌ ಆಫ್ ಆಗಿದ್ರೆ ಬಂದಿದ್ದ ಆರ್‌ಸಿಬಿಯೆನ್ಸ್ ಮೊಬೈಲ್ ಟಾರ್ಚ್ ಆನ್ ಮಾಡಿ ಬೊಂಬೆ ಹಾಡು ಹಾಡಿದ್ರು. ಒಂದ್ ಟೈಂನಲ್ಲಿ ಕನ್ನಡಿಗರೇ ತುಂಬಿದ್ದ ನಮ್ಮ ಆರ್‌ಸಿಬಿ ತಂಡಕ್ಕೆ ಬ್ರ್ಯಾಂಡ್ ಅಂಬಾಸೀಡರ್ ಆಗಿದ್ದು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್. ಆಗ ಆರ್‌ಸಿಬಿ ಬಳಗದಲ್ಲಿ ದೊಡ್ಮನೆ ಹೆಸರೇ ರಾರಾಜಿಸುತ್ತಿತ್ತು. ಈಗ ಮತ್ತೆ ಅದೇ ವಾತಾವರಣ ಸೃಷ್ಟಿಯಾಗಿದೆ. ಅಪ್ಪು ಇಲ್ಲದಿದ್ರೂ ದೊಡ್ಮನೆಗೆ ಆರ್‌ಸಿಬಿಯನ್ಸ್ ದೊಡ್ಡ ಗೌರವ ಕೊಟ್ಟಿದ್ದಾರೆ. ಅಪ್ಪು ಪತ್ನಿ ಅಶ್ವಿನಿ ಪುನೀತ್‌ರನ್ನ(Ashwini Puneeth Rajkumar) ಕರೆಸಿ ಆರ್‌ಸಿಬಿ ಹೊಸ ಜರ್ಸಿ ಕೊಟ್ರು.

ಇದನ್ನೂ ವೀಕ್ಷಿಸಿ: ಕಾಂಗ್ರೆಸ್‍ನಿಂದ ಗದ್ದಿಗೌಡರ್‌ಗೆ ಗುದ್ದು ಕೊಡೋರು ಯಾರು..? ಬಾಗಲಕೋಟೆಯಲ್ಲಿ' ಕೈ' ಟಿಕೆಟ್‍ಗೆ ಪೈಪೋಟಿ..!

Related Video