Asianet Suvarna News Asianet Suvarna News

ಎಲ್ಲರೆದುರು ಸಲ್ಮಾನ್‌ಗೆ ಮುತ್ತಿಟ್ಟು ಸುದ್ದಿಯಾದ ಚೆಲುವೆ: ವೈರಲ್ ಆಯ್ತು ವಿಡಿಯೋ!

ಸದ್ಯ ಬಿಟೌನ್ ಅಂಗಳದಲ್ಲಿ ಶೆಹನಾಜ್ ಬಗ್ಗೆಯೇ ಸುದ್ದಿ. ಕಿರುತೆರೆ ನಟಿ ಹಾಗೂ ಬಿಗ್‌ಬಾಸ್ ಖ್ಯಾತಿಯ ಶೆಹನಾಜ್ ಗಿಲ್ ಇತ್ತೀಚೆಗಷ್ಟೇ ಸಲ್ಮಾನ್ ಮನೆಯ ಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿದ್ದರು.

May 6, 2022, 10:50 PM IST

ಸದ್ಯ ಬಿಟೌನ್ (Bollywood) ಅಂಗಳದಲ್ಲಿ ಶೆಹನಾಜ್ ಬಗ್ಗೆಯೇ ಸುದ್ದಿ. ಕಿರುತೆರೆ ನಟಿ ಹಾಗೂ ಬಿಗ್‌ಬಾಸ್ ಖ್ಯಾತಿಯ ಶೆಹನಾಜ್ ಗಿಲ್ (Shehnaaz Gill) ಇತ್ತೀಚೆಗಷ್ಟೇ ಸಲ್ಮಾನ್ ಖಾನ್ (Salman Khan) ಮನೆಯ ಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿದ್ದರು. ಹಬ್ಬದ ಡಿನ್ನರ್ ಮುಗಿಸಿ ಸಲ್ಮಾನ್ ಜೊತೆಗೆ ಕೈ ಹಿಡಿದು ಹೊರಬಂದ ಶೆಹನಾಜ್ ಕಾರ್ ಹತ್ತುವ ಮೊದಲು ಸಲ್ಮಾನ್ ಖಾನ್‌ರನ್ನ ಬಿಗಿದಪ್ಪಿ ಮುತ್ತಿನ (Kiss) ಮಳೆಯನ್ನೇ ಸುರಿಸಿದ್ದಾರೆ. ಮಾಧ್ಯಮಗಳ ಮುಂದೆಯೇ ಸಲ್ಲುಗೆ ಮುತ್ತನಿಟ್ಟು ನೋಡಿ ನನ್ನನ್ನ ಕಾರ್ ಹತ್ತಿಸಲು ಸಲ್ಮಾನ್ ಖಾನ್ ಅವರೇ ಬಂದಿದ್ದಾರೆ ಎಂದು ಮಾಧ್ಯಮದವರಿಗೆ ಕೂಗಿ ಹೇಳಿದ್ದಾರೆ. ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತದೆ. ಅಂದಹಾಗೆ ಶೆಹನಾಜ್ ಗಿಲ್ ಕಿರುತೆರೆ ಕಲಾವಿದ ಹಾಗೂ ನಿರೂಪಕ ಸಿದ್ದಾರ್ಥ್ ಶುಕ್ಲಾ ಅವರ ಪ್ರೇಯಸಿಯಾಗಿದ್ದರೂ ಸಿದ್ದಾರ್ಥ್ ಸಾವಿನ ನಂತರ ಎಲ್ಲಿಯೂ ಕಾಣಿಸಿಕೊಳ್ಳದ ಶೆಹನಾಜ್ ಇತ್ತೀಚಿಗೆ ಸಾರ್ವಜನಿಕ ಸಮಾರಂಭದಲ್ಲಿ ಬ್ಯುಸಿ ಆಗುತ್ತಿದ್ದಾರೆ.

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies