Asianet Suvarna News Asianet Suvarna News

ಸದ್ಯಕ್ಕಿಲ್ಲ ರಾಕಿಭಾಯ್ ಯಶ್-ಐ ಡೈರೆಕ್ಟರ್ ಶಂಕರ್ ಕಾಂಬಿನೇಷನ್ ಸಿನಿಮಾ!

ಶಂಕರ್ ಜತೆ ಯಶ್ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಈ ಮೊದಲಿನಿಂದಲೂ ಹರಿದಾಡುತ್ತಿದೆ. ಆದರೆ, ಈ ವಿಚಾರವನ್ನು ಹೌದು ಎಂದವರು ಯಾರೂ ಇಲ್ಲ, ಅಲ್ಲ ಎಂದವರೂ ಯಾರು ಇಲ್ಲ. ಹೀಗಾಗಿ ಗಾಸಿಪ್ ಮಂದಿಯ ಬಾಯಲ್ಲಿ ಈ ಸುದ್ದಿ ಆಗಾಗ ಹೊರ ಬೀಳುತ್ತಲೇ ಇರುತ್ತದೆ. 

ಶಂಕರ್ ಜತೆ ಯಶ್ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಈ ಮೊದಲಿನಿಂದಲೂ ಹರಿದಾಡುತ್ತಿದೆ. ಆದರೆ, ಈ ವಿಚಾರವನ್ನು ಹೌದು ಎಂದವರು ಯಾರೂ ಇಲ್ಲ, ಅಲ್ಲ ಎಂದವರೂ ಯಾರು ಇಲ್ಲ. ಹೀಗಾಗಿ ಗಾಸಿಪ್ ಮಂದಿಯ ಬಾಯಲ್ಲಿ ಈ ಸುದ್ದಿ ಆಗಾಗ ಹೊರ ಬೀಳುತ್ತಲೇ ಇರುತ್ತದೆ. ಇತ್ತೀಚೆಗೆ ಈ ವಿಚಾರದ ಬಗ್ಗೆ ಹೆಚ್ಚು ಚರ್ಚೆ ನಡೆಯುತ್ತಿದೆ. ಹೀಗಿರುವಾಗಲೇ ಶಂಕರ್ ಅವರು ‘ಇಂಡಿಯನ್ 2’ ಸಿನಿಮಾದ ಶೂಟಿಂಗ್ ಆರಂಭಿಸಿದ್ದಾರೆ. ಈ ಮೂಲಕ ಯಶ್ ಫ್ಯಾನ್ಸ್​ಗೆ ಒಂದು ವಿಚಾರದಲ್ಲಿ ಸ್ಪಷ್ಟನೆ ಸಿಕ್ಕಂತೆ ಆಗಿದೆ. ‘ಇಂಡಿಯನ್’ ಸಿನಿಮಾ ಹಿಟ್ ಆಗಿತ್ತು. ಹಲವು ವರ್ಷಗಳ ಬಳಿಕ ಈ ಚಿತ್ರಕ್ಕೆ ಸೀಕ್ವೆಲ್ ಸಿದ್ಧವಾಗುತ್ತಿದೆ. ಶಂಕರ್ ನಿರ್ದೇಶನ ಇರುವ ಈ ಚಿತ್ರದಲ್ಲಿ ಕಮಲ್ ಹಾಸನ್ ಅವರು ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಸಾಮಾನ್ಯವಾಗಿ ಸ್ಟಾರ್ ನಿರ್ದೇಶಕರು ಅದರಲ್ಲೂ ಶಂಕರ್ ಅವರಂತಹ ನಿರ್ದೇಶಕರು ಏಕಕಾಲಕ್ಕೆ ಒಂದೇ ಸಿನಿಮಾ ಶೂಟಿಂಗ್ ಮಾಡೋಕೆ ಆದ್ಯತೆ ನೀಡುತ್ತಾರೆ. ಎರಡೆರಡು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆದರೆ ಅವರಿಗೇ ತೊಂದರೆ. ಈ ಕಾರಣದಿಂದ ಶಂಕರ್ ಸದ್ಯದ ಮಟ್ಟಿಗಂತೂ ‘ಇಂಡಿಯನ್ 2’ ಶೂಟಿಂಗ್​ನಲ್ಲಿ ತೊಡಗಿಕೊಳ್ಳಲಿದ್ದಾರೆ. ಹೀಗಾಗಿ, ಯಶ್ ಜತೆಗೆ ಅವರು ಸಿನಿಮಾ ಮಾಡುತ್ತಾರೆ ಎಂದಾದರೂ ಅದು ಸದ್ಯಕ್ಕಂತೂ ಸೆಟ್ಟೇರುವುದಿಲ್ಲ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment

Video Top Stories