10ರಲ್ಲಿ 6 ಜನರ ವಿದೇಶದ ಕನಸು ನನಸು, ಉಳಿದವರ ಕಥೆ..!? ‘ಡಂಕಿ’ ಈ ಪದ ಹುಟ್ಟು ಹಾಕಿದವರಾದ್ರೂ ಯಾರು..?

ಅಮೆರಿಕಾ, ಯುರೋಪ್,ಬ್ರಿಟನ್‌ನಂತ ಶ್ರೀಮಂತ, ಥಳಕು-ಬಳುಕಿನ ರಾಷ್ಟ್ರಗಳಿಗೆ ಹೋಗ್ಬೇಕು ಅನ್ನೊ ಕನಸು ತುಂಬಾ ಜನ್ರಿಗೆ ಇರುತ್ತೆ. ಆದರೆ ವೀಸಾ.. ಪಾಸ್ಪೋರ್ಟ್ ತಲೆಬಿಸಿ, ಜೊತೆಗೆ 80ಲಕ್ಷ-90ಲಕ್ಷ ದುಡ್ಡು. ವೀಸಾ ಇಲ್ದೇನೂ ಶಾರ್ಟ್ಕಟ್ ರೂಟ್‌ನಲ್ಲಿ ಫಾರೀನ್‌ಗೆ ಹೋಗ್ಬಹುದು. ಹಾಗೆ ಹೋಗುವಾಗ ಎದುರಾಗೋ ಸವಾಲು ಏನೇನು ಅನ್ನೊದೇ ಈ ‘ಡಂಕಿ’ ಸಿನಿಮಾದ ಅಸಲಿ ಕಹಾನಿ. 

First Published Dec 11, 2023, 9:00 AM IST | Last Updated Dec 11, 2023, 9:00 AM IST

ಪಠಾಣ್.. ಜವಾನ್.. ಒಂದಾದ ಮೇಲೆ ಒಂದು ಹಿಟ್ ಸಿನಿಮಾಗಳನ್ನ ಕೊಟ್ಟವರು ಬಾಲಿವುಡ್ ನಟ ಶಾರುಖ್‌ ಖಾನ್‌(Shah Rukh Khan). ಇನ್ನೊಂದು ಸಿನಿಮಾ ಹಿಟ್ ಆಗ್ಬಿಟ್ರೆ, ಹ್ಯಾಟ್ರಿಕ್ ಆಗೋದು ಫಿಕ್ಸ್. ಆ ಹ್ಯಾಟ್ರಿಕ್ ಕನಸು ನನಸು ಮಾಡಲು ರೆಡಿಯಾಗಿದೆ, ರಾಜ್‌ಕುಮಾರ್ ಹಿರಾನಿ(Rajkumar Hirani) ಅವರ ನಿರ್ದೇಶನದ ಸಿನಿಮಾ ಡಂಕಿ(Dunki). ಶಾರುಕ್ ಡೈರೆಕ್ಟರ್ ರಾಜಕುಮಾರ್ ಹಿರಾನಿ ಕಾಂಬಿನೇಷನ್ ಅಂದ್ರೆ ಅದು ಕಾಮನ್ ಸಿನಿಮಾ ಆಗಿರೋದಕ್ಕೆ ಚಾನ್ಸೇ ಇರೋಲ್ಲ. ಎಂಟರೈನ್‌ಮೆಂಟ್‌ ಜೊತೆ ಜೊತೆಗೆ ಮೆಸೆಜ್ ಕೂಡ ಇರೋದು ಪಕ್ಕಾ. ಡಂಕಿ ಸಿನಿಮಾ ಅದೇ ನಿರೀಕ್ಷೆ ಇಟ್ಟುಕೊಂಡು, ಇದೇ ಡಿಸೆಂಬರ್ 21ರಂದು ತೆರೆಗೆ ಬರಲು ರೆಡಿಯಾಗಿದೆ. ಆದ್ರೆ ಈ ಸಿನಿಮಾದ ಟೈಟಲ್ಲೇ ವಿಚಿತ್ರವಾಗಿದೆ ಅಲ್ವಾ. ಅಸಲಿಗೆ ಇದೇ ಹೆಸರಲ್ಲಿದೆ ರಿಯಲ್ ಕಥೆ. ಡಂಕಿ ಸಿನಿಮಾ ಬರುತ್ತೆ ಅಂದಾಗ್ಲೇ ಹವಾ ಎದ್ದಿತ್ತು. ಸಿನಿಮಾ ಹೇಗಿರುತ್ತೆ. ಇದರಲ್ಲಿ ಇರೋ ಟ್ವಿಸ್ಟ್ ಏನು ಅನ್ನೊ ಹತ್ತು ಹಲವಾರು ಪ್ರಶ್ನೆ ಹುಟ್ಟಿಕೊಂಡಿತ್ತು. ಇದಕ್ಕೆಲ್ಲ ಟ್ರೇಲರ್ ಒನ್ಲೈನ್ ಆನ್ಸರ್ ಕೊಟ್ಟಿತ್ತು. ಒಟ್ನಲ್ಲಿ ಈ ಸಿನಿಮಾ ಮೂಲಕ ಕರಾಳ ಲೋಕವನ್ನ ನಿರ್ದೇಶಕರು ಅನಾವರಣ ಮಾಡೋದಕ್ಕೆ ಹೊರಟಿರೋದು ಎಲ್ಲರಿಗೂ ಕನ್ಫರ್ಮ ಆಗಿತ್ತು. ಬಹುಶಃ ಅದಕ್ಕೆ ಏನೋ ಯಾವಾಗ ಡಂಕಿ ಸಿನಿಮಾ ನಿರ್ದೇಶನ ಮಾಡ್ತೇನೆ ಅಂತ ನಿರ್ದೇಶಕರು ಘೋಷಿಸಿದ್ರೋ. ಅದೇ ಸಮಯದಲ್ಲಿ ಈ ಸಿನಿಮಾದ ಕಥಾವಸ್ತುವಿನ ಬಗ್ಗೆ ಚರ್ಚೆಗಳು ಒಂದೊಂದಾಗಿ ಹುಟ್ಟಿಕೊಳ್ತಾ ಹೋಗಿತ್ತು.

ಇದನ್ನೂ ವೀಕ್ಷಿಸಿ:  Today Horoscope: ಇಂದು ಕೊನೆ ಕಾರ್ತಿಕ ಸೋಮವಾರ, ಈ ದಿನ ಶಿವನ ಆರಾಧನೆ ಏಕೆ ಮಾಡಬೇಕು ?