ಶಾರುಖ್ ಖಾನ್‌ರ ಪಠಾಣ್ ಚಿತ್ರಕ್ಕೆ ಮತ್ತೊಂದು ಸಂಕಷ್ಟ: ಬೇಷರಂ ರಂಗ್ ಹಾಡು ಕದ್ದಿದ್ದಾ?

ಶಾರುಖ್ ಖಾನ್ ಪಠಾಣ್ ಸಿನಿಮಾ ಬಾಕ್ಸಾಫೀಸ್ ದೋಚುತ್ತಾ.? ಸದ್ಯ ಪಠಾಣ್ ಸಿನಿಮಾ ಸುತ್ತು ಸುತ್ತುವರೆದಿರೋ ವಿವಾದಗಳನ್ನ ನೋಡಿದ್ರೆ ಸ್ವಲ್ಪ ಕಷ್ಟ ಅಂತಿದ್ದಾರೆ ಸಿನಿಮಾ ಪಡಸಾಲೆ ಪಂಡಿತರು. ಯಾಕಂದ್ರೆ ಶಾರುಖ್ ಖಾನ್ ಡಿಪ್ಪಿಯ ಹಸಿಬಿಸಿ ದೃಶ್ಯಗಳು, ಕೇಸರಿ ಬಿಕಿನಿ ವಿವಾದದಿಂದ ಪಠಾಣ್ ಬಾಯ್ಕಾಟ್ ಮಾಡ್ಬೇಖು ಅಂತ ಟ್ರೆಂಡ್ ಶುರುವಾಗಿದೆ. 

Share this Video
  • FB
  • Linkdin
  • Whatsapp

ಶಾರುಖ್ ಖಾನ್ ಪಠಾಣ್ ಸಿನಿಮಾ ಬಾಕ್ಸಾಫೀಸ್ ದೋಚುತ್ತಾ.? ಸದ್ಯ ಪಠಾಣ್ ಸಿನಿಮಾ ಸುತ್ತು ಸುತ್ತುವರೆದಿರೋ ವಿವಾದಗಳನ್ನ ನೋಡಿದ್ರೆ ಸ್ವಲ್ಪ ಕಷ್ಟ ಅಂತಿದ್ದಾರೆ ಸಿನಿಮಾ ಪಡಸಾಲೆ ಪಂಡಿತರು. ಯಾಕಂದ್ರೆ ಶಾರುಖ್ ಖಾನ್ ಡಿಪ್ಪಿಯ ಹಸಿಬಿಸಿ ದೃಶ್ಯಗಳು, ಕೇಸರಿ ಬಿಕಿನಿ ವಿವಾದದಿಂದ ಪಠಾಣ್ ಬಾಯ್ಕಾಟ್ ಮಾಡ್ಬೇಖು ಅಂತ ಟ್ರೆಂಡ್ ಶುರುವಾಗಿದೆ. ಇದರ ಬೆನ್ನಲ್ಲೇ ಈಗ ಮತ್ತೊಂದು ಕಾಂಟ್ರವರ್ಸಿ ಪಠಾಣ್ ಸಾಕ್ಷಿಯಾಗಿದೆ. ಬಿಟೌನ್ ಕಿಂಗ್ ಖಾನ್ ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ನಟನೆಯ ‘ಪಠಾಣ್’ ಸಿನಿಮಾದ ‘ಬೇಷರಂ ರಂಗ್..’ ಹಾಡು ಸಾಕಷ್ಟು ವಿವಾದ ಸೃಷ್ಟಿ ಮಾಡಿದೆ. ಈ ಹಾಡಿನಿಂದ ಹಿಂದೂಗಳಿಗೆ ಅವಮಾನ ಆಗಿದೆ ಎಂದು ಆರೋಪವೂ ಇದೆ. ಈ ವಿವಾದ ಕೊಂಚ ತಣ್ಣಗಾಗುತ್ತಿರುವಾಗಲೇ ‘ಬೇಷರಂ ರಂಗ್..’ ಟ್ಯೂನ್ ಮೇಲೆ ಕೃತಿ ಚೌರ್ಯದ ಆರೋಪ ಕೇಳಿ ಬಂದಿದೆ. 

Add Asianetnews Kannada as a Preferred SourcegooglePreferred

ಪಾಕಿಸ್ತಾನದ ಹಾಡಿನಿಂದ ಸ್ಫೂರ್ತಿ ಪಡೆದು ‘ಬೇಷರಂ ರಂಗ್..’ ಹಾಡನ್ನು ಮಾಡಲಾಗಿದೆ ಅನ್ನೋ ಟಾಕ್ ಬಿಟೌನ್‌ನಲ್ಲಿ ಎದ್ದಿದೆ. ಪಾಕಿಸ್ತಾನದ ಸಿಂಗರ್ ಸಾಜಿದ್ ಅಲಿ ಅವರು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ನಲ್ಲಿ ಅವರು ಹಾಡೊಂದನ್ನು ಹಾಡಿದ್ದಾರೆ. ಇದಕ್ಕೆ ಕ್ಯಾಪ್ಶನ್ ನೀಡಿರುವ ಅವರು, ‘ಹೊಸ ಸಿನಿಮಾದ ಹಾಡನ್ನು ಕೇಳಿದ ನಂತರದಲ್ಲಿ 26 ವರ್ಷಗಳ ಹಿಂದೆ ನಾನು ರಿಲೀಸ್ ಮಾಡಿದ ‘ಅಬ್ ಕೆ ಹಂ ಬಿಚಾರೆ..’ ಹಾಡು ನೆನಪಾಗಿದೆ’ ಎಂದು ಬರೆದುಕೊಂಡಿದ್ದಾರೆ. ಸಾಜಿದ್ ಅವರು ಎಲ್ಲಿಯೂ ‘ಪಠಾಣ್’ ಚಿತ್ರದ ‘ಬೇಷರಂ ರಂಗ್’ ಹಾಡನ್ನು ಉಲ್ಲೇಖ ಮಾಡಿಲ್ಲ. ಆದರೆ, ಸಾಜಿದ್ ಹಾಡಿದ ಹಾಡು ಎಲ್ಲರಿಗೂ ‘ಬೇಷರಂ ರಂಗ್..’ ಸಾಂಗ್ ಅನ್ನು ನೆನಪಿಸಿದೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment

Related Video