Asianet Suvarna News Asianet Suvarna News

ಶಾರುಖ್ ಖಾನ್ ಮಗಳು ಈಗ ಬ್ಯುಸಿನೆಸ್​ನಲ್ಲಿ ಬ್ಯುಸಿ! ಮುಂಬೈ ಬಳಿ ಆಸ್ತಿ ಖರೀದಿಸಿದ ಸುಹಾನಾ ಖಾನ್!

ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಸಿನಿಮಾ ರಂಗಕ್ಕೆ ಎಂಟ್ರಿ ನೀಡಿ ಸಂಭಾವನೆ ಪಡೆಯಲು ಶುರುಮಾಡುತ್ತಿದ್ದಂತೆ ಇದೀಗ ಮುಂಬೈ ಹೊರವಲಯದಲ್ಲಿ ದೊಡ್ಡ ರಿಯಲ್ ಎಸ್ಟೇಟ್ ಹೂಡಿಕೆಯನ್ನು ಮಾಡಿದ್ದಾರೆ. 

ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಸಿನಿಮಾ ರಂಗಕ್ಕೆ ಎಂಟ್ರಿ ನೀಡಿ ಸಂಭಾವನೆ ಪಡೆಯಲು ಶುರುಮಾಡುತ್ತಿದ್ದಂತೆ ಇದೀಗ ಮುಂಬೈ ಹೊರವಲಯದಲ್ಲಿ ದೊಡ್ಡ ರಿಯಲ್ ಎಸ್ಟೇಟ್ ಹೂಡಿಕೆಯನ್ನು ಮಾಡಿದ್ದಾರೆ. ಮುಂಬೈ ಸಮೀಪದ ಅಲಿಭಾಗ್​ನಲ್ಲಿ ಕೋಟ್ಯಂತರ ರೂ. ಹಣ ಕೊಟ್ಟು ದೊಡ್ಡ ಜಮೀನನ್ನು ಸುಹಾನಾ ಖಾನ್ ಖರೀದಿ ಮಾಡಿದ್ದಾರೆ. ಸುಮಾರು ಎರಡು ಎಕರೆ ಜಮೀನನ್ನು ಸುಹಾನಾ ಖಾನ್ ಖರೀದಿ ಮಾಡಿದ್ದಾರೆ. ಈ ಜಮೀನಿನ ಅಳತೆ 78,361 ಚದರ ಅಡಿಗಳಿವೆ. ಈ ಜಮೀನು ನೊಂದಾವಣಿ ಮಾಡಿಸಿಕೊಳ್ಳಲು 57 ಲಕ್ಷ ರೂಪಾಯಿ ಶುಲ್ಕವನ್ನು ಸುಹಾನಾ ಖಾನ್ ತುಂಬಿದ್ದು, ದಾಖಲೆಯಲ್ಲಿರುವಂತೆ ಒಟ್ಟು ಆಸ್ತಿಯ ಮೌಲ್ಯ 12.91 ಕೋಟಿ ರೂ. ಎಂದು ಮಾಹಿತಿ ಲಭಿಸಿದೆ. ಹೆಚ್ಚಿನ ಮಾಹಿತಿಗೆ ಈನ ವಿಡಿಯೋವನ್ನು ವೀಕ್ಷಿಸಿ.

Video Top Stories