Asianet Suvarna News Asianet Suvarna News

ಸ್ಯಾಂಡಲ್‌ವುಡ್‌ ಸ್ಟೈಲೀಶ್ ಪೇರ್ ಯಶ್ ರಾಧಿಕಾ,ಕ್ಲಾಸಿ ಲುಕ್‌ಗೆ ಹೆಸರುವಾಸಿ ಈ ದಂಪತಿ.....

ಯಶ್ ರಾಧಿಕಾ ಎಲ್ಲೆ ಹೋದರು ಒಂದು ಕ್ಲಾಸಿ ಲುಕ್ ಮೆಂಟೇನ್ ಮಾಡುತ್ತಾರೆ.ಈ ಜೋಡಿ ಹಾಕುವ ಡ್ರೆಸ್  ಎಲ್ಲರನ್ನು ಹುಬ್ಬೇರಿಸುವಂತೆ ಮಾಡುತ್ತೆ. ಅದಕ್ಕೆ ಸಾಕ್ಷಿಯಾಗಿತ್ತು ಅಭಿ ಅವಿವಾ ಮದುವೆ. 

ಯಶ್ ರಾಧಿಕಾ ಎಲ್ಲೆ ಹೋದರು ಒಂದು ಕ್ಲಾಸಿ ಲುಕ್ ಮೆಂಟೇನ್ ಮಾಡುತ್ತಾರೆ. ಈ ಜೋಡಿ ಹಾಕೋ ಡ್ರೆಸ್ ಅಂತೂ ಎಲ್ಲರನ್ನ ಹುಬ್ಬೇರಿಸುವಂತೆ ಮಾಡುತ್ತೆ. ಅದಕ್ಕೆ ಸಾಕ್ಷಿಯಾಗಿತ್ತು  ಅಭಿ ಅವಿವಾ ಮದುವೆ. ತೇಟ್ ರಾಜ ರಾಣಿಯಂತೆ ಕಂಗೊಳಿಸುತ್ತಿದ್ದರು ಯಶ್ ರಾಧಿಕಾ. ರಾಜಸ್ಥಾನಿ ಕಿಂಗ್ಸ್ ಹಾಕುವಂತಹ ಸಲ್ವಾರ್ ತರದ ಡ್ರೆಸ್‌ನಲ್ಲಿ ಯಶ್ ಮಿಂಚಿದ್ರೆ, ನಾರ್ತ್ ಇಂಡಿಯನ್ ಸ್ಟೈಲ್ ಲೆಹೆಂಗಾ ಲುಕ್‌ನಲ್ಲಿ ರಾಧಿಕಾ ಕಂಗೊಳಿಸಿದರು
ಮದುವೆಗೆ ಹೇಗೆ ಹೋಗಬೇಕು. ದೇವಸ್ಥಾನಕ್ಕೆ ಹೋದಾಗ ಹೇಗಿರಬೇಕು, ಪಾರ್ಟಿ, ಟ್ರಿಪ್ ಹೋದ್ರೆ ಹೇಗೆ ಹೋಗಬೇಕು ಅನ್ನೋದನ್ನ ಈ ಜೋಡಿ ಸಖತ್ತಾಗೆ ತಿಳಿದುಕೊಂಡಿದ್ದಾರೆ. ಈ ಜೋಡಿ ಔಟ್ ಲುಕ್ ಹಿಂದೆ ಒಬ್ಬರ ಶ್ರಮ ಇದೆ. ಅವರೇ ಸಾನಿಯಾ ಸರ್ದಾರಿಯಾ. ಸೆಲೆಬ್ರೆಟಿ ಫ್ಯಾಷನ್ ಡಿಸೈನರ್ ಸಾನಿಯಾ ಸರ್ದಾರಿಯಾ ಯಶ್ ಹಾಗು ರಾಧಿಕಾ ಔಟ್‌ಫಿಟ್‌ ನೋಡಿಕೊಳ್ಳುತ್ತಾರೆ.