Asianet Suvarna News Asianet Suvarna News

ಐಸ್‌ಕ್ರೀಂಗಾಗಿ ಮಾರುದ್ದ ಕ್ಯೂನಲ್ಲಿ ನಿಂತ ನಟಿ: ಸ್ಟಾರ್ ಹೀರೋಯಿನ್ ಹೀಗೆಲ್ಲಾ ಮಾಡ್ತಾರಾ ?

ಐಸ್‌ಕ್ರೀಮ್‌ಗಾಗಿ ಮಾರುದ್ದ ಕ್ಯೂನಲ್ಲಿ ನಿಂತ ನಟಿ
ಸ್ಟಾರ್ ಹೀರೋಯಿನ್ ಐಸ್ಕ್ರೀಂಗಾಗಿ ಹೀಗೆ ಮಾಡಿದ್ರಾ?
ಸಮಂಥಾ ವಿದೇಶದಲ್ಲಿ ಏನ್ ಮಾಡಿದ್ದಾರೆ ನೋಡಿ

ನಟಿ ಸಮಂತಾ ಮಾರುದ್ದದ ಕ್ಯೂನಲ್ಲಿ ಐಸ್‌ ಕ್ರೀಮ್‌ಗಾಗಿ( Ice cream) ನಿಂತಿದಿದ್ದು, ಈ ಘಟನೆ ಇಟಲಿಯಲ್ಲಿ ನಡೆದಿದೆ. ಇಟಲಿಯ(Italy) ವೆನಿಸ್‌ಗೆ ಹೋದಾಗ ನಟಿ ಐಸ್‌ಕ್ರೀಮ್‌ಗಾಗಿ ಕ್ಯೂನಲ್ಲಿ ನಿಂತಿದ್ದಾರೆ. ಜಲಟೆಟಾಕ ಸುಸೋ ಎಂಬ ರೆಸ್ಟೋರೆಂಟ್‌ನಲ್ಲಿ ಸೂಪರ್‌ ಆಗಿರುವ ಐಸ್ ಕ್ರೀಮ್ ಸಿಗುತ್ತಂತೆ. ಆದ್ರೆ ಆ ರೆಸ್ಟೋರೆಂಟ್‌ನಲ್ಲಿ ಸಖತ್‌ ಉದ್ದದ ಕ್ಯೂ ಇತ್ತು. ಹಾಗಾಗಿ ಈ ಪೋಟೋವನ್ನು ಹಂಚಿಕೊಂಡಿರುವ ನಟಿ ಕಾದಷ್ಟು ಒಳ್ಳೆಯದೆ ಸಿಗುತ್ತದೆ ಎಂದು ಬರೆದುಕೊಂಡಿದ್ದಾರಂತೆ. ಅಂದಹಾಗೆ, ನಟಿ ಸಮಂತಾ(Samantha Ruth Prabhu) ಹಾಗೂ ನಟ ವಿಜಯ್ ದೇವರಕೊಂಡ ಜೋಡಿಯ ಇತ್ತೀಚೆಗೆ ತೆರೆಕಂಡಿದ್ದ 'ಖುಷಿ' ಸಿನಿಮಾ, ಇದೀಗ ಓಟಿಟಿಯಲ್ಲಿಯೂ ನೋಡಲು ಲಭ್ಯವಿದೆ. ಈ ಮೂಲಕ ಅವರಿಬ್ಬರ ಅಥವಾ ಈ ಜೋಡಿಯ ಫ್ಯಾನ್ಸ್ ಅದನ್ನು ಮತ್ತೆ ಬೇಕಾದರೆ ನೋಡಬಹುದು. ಒಟ್ಟನಲ್ಲಿ ನಟಿ ಸಮಂತಾ ಇದೀಗ ಹಾಯಾಗಿ ವಿದೇಶಗಳಲ್ಲಿ ದಿನಕಳೆಯುತ್ತಿದ್ದಾರೆ. 

ಇದನ್ನೂ ವೀಕ್ಷಿಸಿ:  ಗಲಭೆ ಪೀಡಿತ ಪ್ರದೇಶಕ್ಕೆ ಸಚಿವ ಮಧು ಬಂಗಾರಪ್ಪ ಭೇಟಿ: ಶಿವಮೊಗ್ಗ ನಗರದಾದ್ಯಂತ ಸೆಕ್ಷನ್ 144 ವಿಸ್ತರಣೆ

Video Top Stories